ಅಪಘಾತಕ್ಕೆ 2 ಗಂಟೆ ಮುನ್ನ ಆಡುಗೋಡಿ ಪೊಲೀಸರು ವಾರ್ನ್​ ಮಾಡಿದಾಗ, ತಾನು ಶಾಸಕನ ಪುತ್ರ ಎಂದಿದ್ದ ಕರುಣಾಸಾಗರ

| Updated By: Skanda

Updated on: Aug 31, 2021 | 12:18 PM

ಅಪಘಾತಕ್ಕೂ ಕೆಲವೇ ಕ್ಷಣಗಳ ಮುಂಚೆ ಪೊಲೀಸರು ಆ ಕಾರನ್ನು ತಪಾಸಣೆ ಮಾಡಿ ವಾರ್ನ್​ ಮಾಡಿದ್ದರು. ಈ ವೇಳೆ ಕರುಣಾಸಾಗರ್, ನಾನು ಶಾಸಕರ ಪುತ್ರ ಎಂದಿದ್ದರು.

ಅಪಘಾತಕ್ಕೆ 2 ಗಂಟೆ ಮುನ್ನ ಆಡುಗೋಡಿ ಪೊಲೀಸರು ವಾರ್ನ್​ ಮಾಡಿದಾಗ, ತಾನು ಶಾಸಕನ ಪುತ್ರ ಎಂದಿದ್ದ ಕರುಣಾಸಾಗರ
ತಂದೆ ಜೊತೆ ಮೃತ ಕರುಣಾಸಾಗರ್
Follow us on

ಬೆಂಗಳೂರು: ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಭೀಕರ ಅಫಘಾತಕ್ಕೆ ಸಂಬಂಧಿಸಿದಂತೆ ಒಂದಷ್ಟು ಮಾಹಿತಿ ಲಭ್ಯವಾಗಿದ್ದು, ಅಪಘಾತಕ್ಕೂ ಕೆಲವೇ ಕ್ಷಣಗಳ ಮುಂಚೆ ಪೊಲೀಸರು ಆ ಕಾರನ್ನು ತಪಾಸಣೆ ಮಾಡಿ ವಾರ್ನ್​ ಮಾಡಿದ್ದರು. ಈ ವೇಳೆ ಕರುಣಾಸಾಗರ್, ನಾನು ಶಾಸಕರ ಪುತ್ರ ಎಂದಿದ್ದರು. ನೈಟ್‌ ಕರ್ಪ್ಯೂ ಇದೆ ಮನೆಗೆ ಹೋಗಿ ಎಂದು ಪೊಲೀಸರು ಹೇಳಿದ ಬಳಿಕ ಕ್ಷಮೆ ಕೇಳಿ ಸಾರಿ ಸರ್​ ಎಂದು ಹೊರಟಿದ್ದರು ಎನ್ನುವ ವಿಚಾರ ತಿಳಿದುಬಂದಿದೆ.

ತನ್ನ ಪ್ರೇಯಸಿ ಜೊತೆ ಬೆಂಗಳೂರು ಸುತ್ತಾಡುತ್ತಿದ್ದ ಕರುಣಾಸಾಗರ್ ಕಾರನ್ನು ಸುಮಾರು 11.50ಕ್ಕೆ ಆಡುಗೋಡಿ ಪೊಲೀಸರು ತಪಾಸಣೆ ನಡೆಸಿದ್ದರು. ಅದಾದ ಎರಡೇ ಎರಡು ಗಂಟೆಗಳ ಬಳಿಕ ಕೋರಮಂಗಲದ ಬಳಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ 7 ಜನರೂ ಮೃತಪಟ್ಟಿದ್ದಾರೆ. ಆರು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದು, ಇನ್ನೊಬ್ಬರು ಆಸ್ಪತ್ರೆಗೆ ಸೇರಿಸುವಾಗ ಕೊನೆಯುಸಿರೆಳೆದಿದ್ದಾರೆ.

ಕಾರಿನ ಮುಂದಿನ ಸೀಟ್‌ನಲ್ಲಿ ಮೂವರು ಕುಳಿತಿದ್ದರು ಹಾಗೂ ಹಿಂಬದಿ ಸೀಟ್‌ನಲ್ಲಿ ನಾಲ್ವರು ಕುಳಿತಿದ್ದರು. ಕಾರಿನಲ್ಲಿದ್ದ 7 ಜನರಲ್ಲಿ ಯಾರೂ ಸೀಟ್ ಬೆಲ್ಟ್ ಹಾಕಿರಲಿಲ್ಲ. ಇದರಿಂದ ಕಾರಿನಲ್ಲಿದ್ದ ಏರ್‌ಬ್ಯಾಗ್ ಸಹ ಓಪನ್ ಆಗಿಲ್ಲ ಎಂದು ಬೆಂಗಳೂರಿನಲ್ಲಿ ಡಾ.ಬಿ.ಆರ್.ರವಿಕಾಂತೇಗೌಡ ಹೇಳಿದ್ದಾರೆ. ಮೃತರೆಲ್ಲರೂ 25ರಿಂದ 30 ವರ್ಷ ವಯಸ್ಸಿನವರು. ಓರ್ವ ದಂಪತಿ ಸಹ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ.

ಬೆಂಗಳೂರಲ್ಲಿ ಕೆಲಸ ಮಾಡಿಕೊಂಡು ಕೆಲವರು ಪಿಜಿಯಲ್ಲಿದ್ದರು. ಮೃತರೆಲ್ಲರೂ ಸ್ನೇಹಿತರು, 20 ರಿಂದ 30 ವರ್ಷದವರು. ಹೊಸೂರು ಮೂಲದ ಕರುಣಾಸಾಗರ್, ಪತ್ನಿ ಬಿಂದು(28), ಕೇರಳ ಮೂಲದ ಅಕ್ಷಯ್ ಗೋಯಲ್, ಇಶಿತಾ(21), ಧನುಷಾ(21), ಹುಬ್ಬಳ್ಳಿಯ ರೋಹಿತ್, ಹರಿಯಾಣ ಮೂಲದ ಉತ್ಸವ್ ಮೃತ ದುರ್ದೈವಿಗಳಾಗಿದ್ದು ಮೃತರಲ್ಲಿ ಕೆಲವರು ಕೋರಮಂಗಲದ ಪಿಜಿಯಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ. ಆಡಿ Q3 ಕಾರು 5 ಆಸನವನ್ನು ಹೊಂದಿದ್ದು, ಅಪಘಾತದ ವೇಳೆ 7 ಜನ ಪ್ರಯಣಿಸುತ್ತಿದ್ದರು. ಯಾರೊಬ್ಬರೂ ಸಹ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಅತಿವೇಗವಾಗಿ ಹೋಗುತ್ತಿದ್ದರು. ಸಂಚಾರಿ ನಿಯಮ ಉಲ್ಲಂಘನೆಯೇ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
ಬೆಂಗಳೂರಿನಲ್ಲಿ ಐಷಾರಾಮಿ ಆಡಿ ಕ್ಯೂ3 ಕಾರು ಭೀಕರ ಅಪಘಾತ; ಕಾರಿನಲ್ಲಿದ್ದ 7 ಮಂದಿ ದುರ್ಮರಣ 

ಕೋರಮಂಗಲದಲ್ಲಿ ಐಷಾರಾಮಿ ಕಾರು ಅಪಘಾತ; ಮೃತ ಯುವಕನೊಬ್ಬ ಪಕ್ಕದ ಹೊಸೂರು ಕ್ಷೇತ್ರದ ಶಾಸಕನ ಪುತ್ರ

Published On - 11:54 am, Tue, 31 August 21