ದಸರಾ 2022: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂಬೆಗಳ ಪ್ರದರ್ಶನ

| Updated By: ವಿವೇಕ ಬಿರಾದಾರ

Updated on: Oct 01, 2022 | 7:23 PM

ನಾಡಹಬ್ಬ ದಸರಾ ವಿಶೇಷವಾಗಿ ಬುಧವಾರ ಸೆ. 28 ರಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ದಸರಾ 2022: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂಬೆಗಳ ಪ್ರದರ್ಶನ
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂಬೆಗಳ ಪ್ರದರ್ಶನ
Follow us on

ಬೆಂಗಳೂರು: ರಾಜ್ಯದಲ್ಲಿ ರಾಜ-ಮಹಾರಾಜ ಕಾಲದಿಂದನು ದಸರಾ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಗೊಂಬೆಗಳನ್ನು ಕೂಡಿಸುತ್ತಾರೆ. ಅಕ್ಕ-ಪಕ್ಕದ ಮನೆಯವರಿಗೆ ಕರೆದು ಗೊಂಬೆಗಳನ್ನು ತೋರಿಸುತ್ತಾರೆ. ಈ ರೀತಿಯಾಗಿ ಗೊಂಬೆಗಳನ್ನು ದಕ್ಷಿಣ ಭಾರತದ ರಾಜ್ಯಗಳ ಮನೆಗಳಲ್ಲಿ ಕೂಡಿಸುತ್ತಾರೆ. ಇದೇ ರೀತಿಯಾಗಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport Bengaluru) ಗೊಂಬೆಗಳನ್ನು ಕೂರಿಸಿದ್ದು, ಜನರು ಗೊಂಬೆಗಳತ್ತ ಆಕರ್ಶಿತರಾಗುತ್ತಿದ್ದಾರೆ.

ನಾಡಹಬ್ಬ ದಸರಾ ವಿಶೇಷವಾಗಿ ಬುಧವಾರ ಸೆ. 28 ರಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಕುರಿತು ಟ್ವೀಟ್​ ಮಾಡಿದ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ನಾಡಹಬ್ಬ ದಸರಾ ವಿಶೇಷವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಗಳು ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲು ತಯಾರಿ ಮಾಡುತ್ತಿರುವ ಸಂದರ್ಭ ಎಂದು ಶಿರ್ಶಿಕೆ ನೀಡಿ ಫೋಟೋ ಹಂಚಿಕೊಂಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ರಾಮ, ಸೀತೆ, ವಿವಿಧ ಉಡುಪುಗಳಲ್ಲಿ ದುರ್ಗಾದೇವಿಯ ಗೊಂಬೆಗಳು ಮತ್ತು ರಾಮಾಯಣವನ್ನು ಸನ್ನಿವೇಶವನ್ನು ವಿವರಿಸುವ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಬಿಜೆಪಿಯ ಕರ್ನಾಟಕ ರಾಜ್ಯ ಮಹಿಳಾ ಘಟಕ ತೇಜಸ್ವಿನಿ ಅನಂತ್‌ಕುಮಾರ್‌ ಟ್ವೀಟ್‌ ಮಾಡಿ “ನಾನು ಗೋರಖ್‌ಪುರದಿಂದ ಬೆಂಗಳೂರಿಗೆ ಬಂದಿಳಿದಾಗ, ದಸರಾ ಉತ್ಸವಕ್ಕಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ಗೊಂಬೆಗಳನ್ನು ಜೋಡಿಸುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ದೇಶ ಬದಲಾಗುತ್ತಿದೆ. ಇದು ಹೊಸ ಭಾರತ. ಅನಂತ ಕನಸಿನ ಅದಮ್ಯ ಭಾರತ. ನವರಾತ್ರಿಯ ಶುಭಾಶಯಗಳು ಎಂದು ಹೇಳಿದ್ದಾರೆ.

ಬೆಂಗಳೂರು ಏರ್ಪೋಟ್​ನಲ್ಲಿ ಕಳೆಗಟ್ಟಿದ ದಸರಾ ಸಂಭ್ರಮ

ದಸರಾ ಹಬ್ಬದ ಸಂಭ್ರಮ ನಾಡಿನೆಲ್ಲೆಡೆ ಮನೆ ಮಾಡಿದ್ದು ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ನವರಾತ್ರಿಯ ಸಂಭ್ರಮ ಜೋರಾಗೆ ಕಳೆಗಟ್ಟಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಹೊರ ಭಾಗದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಪ್ರಯಾಣಿಕರು ಖುಷ್ ಆಗಿದ್ದಾರೆ.

ದಸರಾ ಅಂಗವಾಗಿ ಏರ್ಪೊಟ್ ನ ಟರ್ಮಿನಲ್ ಹೊರ ಭಾಗದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ ನಡೆಯುತ್ತಿದ್ದು ದಸರಾ ಅಂಗವಾಗಿ ಏರ್ಪೊಟ್ ಸಿಬ್ಬಂದಿ ಹಲವು ಹಾಡುಗಳಿಗೆ ಹೆಜ್ಜೆ ಹಾಕಿ ಪ್ರಯಾಣಿಕರನ್ನ ರಂಜಿಸುತ್ತಿದ್ದಾರೆ. ವಿಮಾನ‌ ನಿಲ್ದಾಣದ ಸಿಬ್ಬಂದಿಯೇ ವಿವಿಧ ರೀತಿಯ ಉಡುಗೆಗಳ ತೊಟ್ಟು ಹಲವು ಹಾಡಿಗೆ ಕುಣಿದು ಎಲ್ಲರನ್ನ ರಂಜಿಸುತ್ತಿದ್ದಾರೆ. ಸಿಬ್ಬಂದಿಯ ಜೊತೆ ಸೇರಿಕೊಂಡು ಪ್ರಯಾಣಿಕರು ಸಹ ಮಸ್ತ್ ಸ್ಟೆಪ್ ಹಾಕುವ ಮೂಲಕ ಸಂಭ್ರಮಿಸುತ್ತಿದ್ದಾರೆ.

ಪ್ರತಿದಿನ ದಸರಾ ಹಿನ್ನಲೆ ‌ಸಿಬ್ಬಂದಿಯಿಂದಲೇ ಮನರಂಜನಾ ಕಾರ್ಯಕ್ರಮ ನೀಡಲಾಗುತ್ತಿದೆ. ಇನ್ನೂ ಕೊರೊನಾ ನಂತರ ನಿರ್ಬಂಧನೆಗಳು ಸಡಲಿಕೆ ಹಿನ್ನಲೆ ಏರ್ಪೊರ್ಟ್​ನಲ್ಲಿ ದಸರಾ ಸಡಗರ ಮನೆ ಮಾಡಿದೆ. ಜೊತೆಗೆ ಸೋಮವಾರ ಮಂಗಳವಾರ ಏರ್ಪೋಟ್ನ ದೇಶ ವಿದೇಶಗಳ ಪ್ರಯಾಣಿಕರಿಗೆ ದಸರಾ ಸಾಂಸ್ಕೃತಿಕ ಅನಾವರಣಕ್ಕೆ ವೇದಿಕೆ ಕೂಡ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಏರ್ಪೋಟ್ನ ಉಪಾಧ್ಯಕ್ಷ ವೆಂಕಟರಮಣ ತಿಳಿಸಿದ್ದಾರೆ.

ರಾಜ್ಯದಲ್ಲಿ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:20 pm, Sat, 1 October 22