ಡಾ.ರಾಜಕುಮಾರ್ ಅವರು ಒಂದು ದಂತ‌ಕತೆ, ಕರ್ನಾಟಕದ ಕಣ ಕಣದಲ್ಲಿ ಜೀವಂತ : ಸಿಎಂ ಬೊಮ್ಮಾಯಿ

ಡಾ.ರಾಜಕುಮಾರ್ ಅವರು ಒಂದು ದಂತ‌ಕತೆ, ಕರ್ನಾಟಕದ ಕಣ ಕಣದಲ್ಲಿ ಜೀವಂತವಾಗಿದ್ದಾರೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಡಾ.ರಾಜಕುಮಾರ್ ಅವರು ಒಂದು ದಂತ‌ಕತೆ, ಕರ್ನಾಟಕದ ಕಣ ಕಣದಲ್ಲಿ ಜೀವಂತ : ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us
| Updated By: ವಿವೇಕ ಬಿರಾದಾರ

Updated on:Oct 01, 2022 | 8:21 PM

ಬೆಂಗಳೂರು: ಡಾ.ರಾಜಕುಮಾರ್ (Dr. Rajkumar) ಅವರು ಒಂದು ದಂತ‌ಕತೆ, ಕರ್ನಾಟಕದ ಕಣ ಕಣದಲ್ಲಿ ಜೀವಂತವಾಗಿದ್ದಾರೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು. ಬೆಂಗಳೂರು ಸೆಂಟ್ರಲ್ ಯೂನಿವರ್ಸಿಟಿಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಡಾ‌.ರಾಜ್ ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಿಂದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಅವರ ಜೀವಮಾನದಲ್ಲಿ ನಾವು ಕರ್ನಾಟಕದಲ್ಲಿ ಇದ್ದೇವೆ ಅನ್ನೋದೆ ಹೆಮ್ಮೆ ವಿಚಾರ. ಶ್ರೇಷ್ಟ ಮಾನವ, ನಟ ಸಾರ್ವಭೌಮ. ಅಷ್ಟೇ ಪ್ರಾಮಾಣಿಕವಾಗಿ ರಾಘಣ್ಣ ಮತ್ತು ಕುಟುಂಬದ ಸದಸ್ಯರು ಹಿರಿಮೆ ಗರಿಮೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸ್ತಿದ್ದಾರೆ ಎಂದು ಹೇಳಿದ್ದಾರೆ.

ನನ್ನ ಅಪ್ಪು, ಎಂದೂ ಮರೆಯಲಾಗದ ಅಪ್ಪು. ಕೆಲವರು ಕಾಲಘಟ್ಟಕ್ಕೆ ಜೀವಂತವಾಗಿರುತ್ತಾರೆ, ವಿಶ್ವಕ್ಕಿಂತ ದೊಡ್ಡವರು ಅಪ್ಪು. ಇಂದು ಭರವಸೆಯು ಇಲ್ಲಿ ಮಿಂಚಿದೆ, ಕಷ್ಟಪಟ್ಟು ಓದಿ ಸಾಧನೆ ಮಾಡಿದ ನೆಮ್ಮದಿ ಇದೆ. ಭರವಸೆ ನೆಮ್ಮಂದಿ ಸಂಗಮ ಅಮೃತ ಘಳಿಗೆ. ಎಷ್ಟೋ ರಾತ್ರಿಗಳು ದೀಪ ಉರಿಸಿ ಓದಿದ್ದಾರೆ. ಬದುಕು ಸ್ಪರ್ಧಾತ್ಮಕ. ರಾಜಕುಮಾರ್ ಬದುಕು, ಸಿಂಪಲ್ ಮತ್ತು ನ್ಯಾಚುರಲ್, ಕಾಂಪ್ಲಿಕೇಟೆಡ್ ಇರಲಿಲ್ಲ. ನೀತಿ ನ್ಯಾಯಾದಿಂದ ಯಶಸ್ವಿಯಾಗಬೇಕು, ಕಠಿಣ ಪರಿಶ್ರಮ, ಬಡತನ, ಒಂದೇ ಹೊತ್ತು ಉಂಡು ಪಾತ್ರ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.

ಮಾನವೀಯತೆ ಪ್ರತಿರೂಪ, ಐದು ನಿಮಿಷ ಅವರೊಂದಿಗೆ ಮಾತಾನಾಡಿದರೆ ಅವರು ಡಾ.ರಾಜ್ ಪ್ಯಾನ್ ಆಗುತ್ತಿದ್ದರು. ಯಶಸ್ಸಿನ ಬಳಿಕ ನಮ್ರತೆಯಿಂದ, ವಿನಯದಿಂದ ನಡೆದುಕೊಳ್ಳುತ್ತೇವೆ ಅನ್ನೋದು ನಮ್ಮ ಮುಂದಿನ ದಾರಿಯನ್ನು ತೋರಿಸುತ್ತದೆ. ಅಧಿಕಾರ ಬಂದಾಗ ಸ್ಥಿತ ಪ್ರಜ್ಞೆ, ಸಮಯ ಪ್ರಜ್ಙೆ ಇರಬೇಕು. ಈ ಸ್ಥಾನಕ್ಕೆ ಬರುವಲ್ಲಿ ನಿಮ್ಮ ಹಿಂದಿನ ದಾರಿಯಲ್ಲಿ ನಿಮ್ಮನ್ನು ಕೈ ಹಿಡಿದು ಬೆಳೆಸಿದ ಕುಟುಂಬದವರನ್ನು, ಸಹಾಯ ಮಾಡಿದವರ‌ನ್ನು, ಅಕಾಡೆಮಿಯನ್ನು ಮರೆಯಬಾರದು ಎಂದು ಅಭರ್ಥಿಗಳಿಗೆ ಕಿವಿ ಮಾತು ಹೇಳಿದರು.

ದೂರದ ಊರಿನವರು ಅಕಾಡೆಮಿ ಸಂಪರ್ಕದಿಂದ ಐಎಎಸ್ ಹಾದಿಯೆಡೆಗೆ ಸಾಗುತ್ತಿದ್ದೀರಿ ಕೆಎಎಸ್ ಮಾಡಿದ್ದೀರಿ. ರಾಜ್ ಕುಮಾರ್ ಮನೆತನದ ಪ್ರೀತಿ, ವಿಶ್ವಾಸ, ಆಶೀರ್ವಾದ ಪಡೆದಿದ್ದೀರಿ, ನೀವೆಲ್ಲಾ ಅದೃಷ್ಟವಂತರು. ವಾಸ್ತವಂಶದ ಮೇಲೆ ನಿರ್ಣಯ, ಒತ್ತಡದಲ್ಲಿ ಕೆಲಸ ನಿರ್ವಹಿಸಬೇಕು. ಯಾವ ಕಾನೂನಿನ ಅಡಿಯಲ್ಲಿ ರೆಗ್ಯೂಲೇಟ್ ಆಗಲಿದೆ ಅನ್ನೋದನ್ನ ತಿಳಿದುಕೊಳ್ಳಬೇಕು. ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಒಟ್ಟಿಗೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕೆಲವು ವೇಳೆ ಸಂಘರ್ಷ ಆಗುತ್ತದೆ, ಅಂತ ಸಂದರ್ಭದಲ್ಲೂ ಕೆಲಸ ಮಾಡಬೇಕು. ಆಡಳಿತಕ್ಕೆ ಒಳ್ಳೆ ಹೆಸರು ಬರುವುದು ಸರಿಯಾದ ಸಂದರ್ಭ, ಸಮರ್ಥ ನಿರ್ಣಯಕೈಗೊಂಡಾಗ ಮಾತ್ರ. ಬಡವ ಸಂಕಷ್ಟದಲ್ಲಿದ್ದಾಗ ಸಹಾಯ ಮಾಡುವಾಗ, ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ತೀರ್ಮಾನಿಸಿ‌ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನಟ ಯುವರಾಜ್ ಕುಮಾರ್ ಮಾತನಾಡಿ ಸಾಕಷ್ಟು ಜನ ಗುರುತಿಸುವಂತಹ ಕೆಲಸ ಡಾ.ರಾಜ್ ಕುಮಾರ್ ಅಕಾಡೆಮಿ ಮಾಡುತ್ತಿದೆ. 2017 ರಲ್ಲಿ ಅಕಾಡೆಮಿ ಪ್ರಾರಂಭಿಸಿದ್ದೇವೆ. ಐಎಎಸ್​ ತರಬೇತಿ ಪಡೆಯಲು ದೆಹಲಿಗೆ ಹೋಗಬೇಕಿತ್ತು. ಕರ್ನಾಕಟದಿಂದ ಕೆಲವೇ ಜನ ಸಿವಿಲ್ ಸರ್ವಿಸ್​​ಗೆ ಪ್ರಯತ್ನಿಸುತ್ತಾರೆ. ನಮ್ಮಲ್ಲಿ ಐಎಎಸ್ ಮಾಡಲು ದೆಹಲಿಯಂತಹ ವಾತಾವರಣ ಇರಲಿಲ್ಲ. ಹೀಗಾಗಿ ಬೆಂಗಳೂರಿನ ಚಂದ್ರಲೇಔಟ್ ನಲ್ಲಿ ಡಾ.ರಾಜ್ ಕುಮಾರ್ ಅಕಾಡೆಮಿ ಪ್ರಾರಂಭಿಸಿದ್ದೇವೆ. ಈಗ ಚಂದ್ರಲೇಔಟ್ ಚಿತ್ರಣ ಬದಲಾಗಿದೆ. ಅಭಿನಂದನೆಗೆ ಅರ್ಹರಾದ ವಿದ್ಯಾರ್ಥಿಗಳ ಜರ್ನಿಯೊಂದಿಗೆ ನಾವಿದ್ದೇವೆ. ಅಕಾಡೆಮಿಗೆ ಯಶಸ್ಸಿಗೆ ಹಲವರು ಕಾರಣರಾಗಿದ್ದಾರೆ, ಅವರೆಲ್ಲರ ಪರಿಶ್ರಮ ತುಂಬಾ ಇದೆ. ವಿಶೇಷ ಚೇತನಾ ಮೇಘನಾ ಎರಡು ಬಾರಿ ಯುಪಿಎಸ್​ಸಿ, ಒಮ್ಮೆ ಕೆಪಿಎಸ್​ಸಿಯನ್ನು ಮೊದಲ ಬಾರಿಗೆ ಉರ್ತಿರ್ಣರಾಗಿದ್ದಾರೆ ಎಂದು ತಿಳಿಸಿದರು.

1500 ರೂ ಸ್ಕಾಲರ್​ಶಿಫ್ ಅಕಾಡೆಮಿ‌ ನೀಡುತ್ತಿದೆ. 6,000 ಜನರಿಗೆ ತರಬೇತಿ ಸಿಕ್ಕಿದೆ. ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಭಾರತಾದ್ಯಂತ ಉತ್ತಮ ಶಿಕ್ಷಣ ಸಿಗಬೇಕಿದೆ, ಸುಶಿಕ್ಷಿತ ರನ್ನಾಗಿ ಮಾಡಬೇಕಿದೆ. ಶೀಘ್ರದಲ್ಲೇ ಮೈಸೂರು ಮತ್ತು ಧಾರವಾಡದಲ್ಲಿ ಡಾ.ರಾಜ್ ಕುಮಾರ್ ಅಕಾಡೆಮಿ ಕಾರ್ಯಾರಂಭ ಮಾಡಲಿದೆ. ಚಿಕ್ಕಪ್ಪ ಪುನೀತ್ ರಾಜ್ ಕುಮಾರ್ ಹೇಳುತ್ತಿದ್ದರು ಶಿಕ್ಷಣಕ್ಕೊಸ್ಕರ ನಮ್ಮ ಕೈಲಾದ ಸಹಾಯ ಮಾಡೋಣ ಅಂತ ಎಂದು ನಡಿದಿದ್ದಾರೆ.

ಕಾರ್ಯಕ್ರಮದ ಕುರಿತು ನಟ ರಾಘವೇಂದ್ರ ರಾಜಕುಮಾರ್​ ಮಾತನಾಡಿ ಗುರುಗಳಿಂದ ನಮ್ಮ ಅಕಾಡೆಮಿ ನಡೆಯುತ್ತಿದೆ. ನಿಜವಾದ ತಂದೆ-ತಾಯಿ, ಗುರುಗಳು, ಪಾಠ ಮಾಡುತ್ತಾ ಅಲ್ಲೇ ಇರುತ್ತಾರೆ. ವಿದ್ಯಾರ್ಥಿಗಳು ಮುಂದುವರೆಯುತ್ತಿರುತ್ತಾರೆ. ಅಧಿಕಾರಿಗಳಾಗಿ ನಿಮ್ಮ ಮುಂದೆ File ಬರುತ್ತೆ ಅದು ಹಲವಾರು ಜನರ life ಆಗಿರುತ್ತೆ ಎಂದು ಹೇಳಿದರು.

ರಾಜ್ಯದಲ್ಲಿ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:19 pm, Sat, 1 October 22

ತಾಜಾ ಸುದ್ದಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ