ವಿಕ್ಟರಿ ಸೋಮಣ್ಣ ಎಂದು ಸಚಿವರನ್ನು ಹಾಡಿ ಹೊಗಳಿದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರಿನಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಆದರೆ ಕಳೆದ ಒಂದು ವರ್ಷದಿಂದ ಅತ್ಯಂತ ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ಚೆನ್ನೈನಲ್ಲಿ ಮಳೆಯಾದ್ರೆ ಮುಳುಗಿಹೋಗುತ್ತೆ. ಅದರಂತೆ ಬೆಂಗಳೂರಿನಲ್ಲೂ ಆಗಿದೆ. ಆದರೆ ಟೀಕೆಯನ್ನು ಸವಾಲಾಗಿದೆ ತೆಗೆದುಕೊಂಡು ಹಲವು ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಕ್ಟರಿ ಸೋಮಣ್ಣ ಎಂದು ಸಚಿವರನ್ನು ಹಾಡಿ ಹೊಗಳಿದ ಸಿಎಂ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ವಿ.ಸೋಮಣ್ಣ
Follow us
TV9 Web
| Updated By: Rakesh Nayak Manchi

Updated on:Jan 29, 2023 | 9:45 PM

ಬೆಂಗಳೂರು: ನಗರ ಒಂದು ಏರಿಯಾ ಇಷ್ಟು ಅಭಿವೃದ್ಧಿಯಾಗುತ್ತಿದೆ. ಜನಮೆಚ್ಚಿದ ನಾಯಕ ಇದ್ದಾಗ ಮಾತ್ರ ಇಂತಹ ಅಭಿವೃದ್ಧಿ ಸಾಧ್ಯ. ಸಚಿವ ವಿ.ಸೋಮಣ್ಣನವರನ್ನು (V.Somanna) ವಿಕ್ಟರಿ ಸೋಮಣ್ಣ ಎಂದೇ ಕರೆಯಬಹುದು. ಕೊರೊನಾ ಸಂದರ್ಭದಲ್ಲಿ ಅವರ ಸೇವೆ ಅದ್ಭುತವಾದುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸಚಿವರನ್ನು ಹಾಡಿಹೊಗಳಿದರು. ಡಾ.ಅಂಬೇಡ್ಕರ್​ ಸ್ಟೇಡಿಯಂ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಆದರೆ ಕಳೆದ ಒಂದು ವರ್ಷದಿಂದ ಅತ್ಯಂತ ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಮಳೆಯಾದರೆ ಮುಳುಗಿಹೋಗುತ್ತದೆ. ಬೆಂಗಳೂರಿನಲ್ಲಿ ಮಳೆಯಾದಾಗ ತಗ್ಗುಪ್ರದೇಶಗಳಿಗೆ ನೀರು ನುಗ್ಗಿತ್ತು. ಇದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಯ್ತು. ಅಪಪ್ರಚಾರವನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಸಮಸ್ಯೆ ಕಡಿವಾಣ ಹಾಕಲು ಹಲವು ಯೋಜನೆ ಜಾರಿ ಮಾಡಿದ್ದೇವೆ. ವಿಶೇಷವಾಗಿ ಸೊಮಣ್ಣ ಅವರು ಕಾಲುವೆಗಳು ಚೆನ್ನಾಗಿ ನಿರ್ಮಿಸಿದ್ದಾರೆ. ಮಳೆಯ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಆಗಲಿಲ್ಲ ಎಂದರು.

ಬೆಂಗಳೂರಿನಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣ ಮಾಡಿರುವ ಡಾ.ಬಿ.ಆರ್.ಅಂಬೇಡ್ಕರ್​ ಸ್ಟೇಡಿಯಂ ಅನ್ನು ಇಂದು (ಜವನರಿ 29) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೀಪ ಬೆಳಗುವ ಮೂಲಕ ಲೋಕಾರ್ಪಣೆ ಮಾಡಿದರು. ಈ ವೇಳೆ ಸಚಿವರಾದ ವಿ.ಸೋಮಣ್ಣ, ಕೆ.ಗೋಪಾಲಯ್ಯ, ಡಾ.ಸಿ.ಎನ್ ಅಶ್ವತ್ಥ್ ನಾರಾಯಣ, ಬಿಡಿಎ ಅಧ್ಯಕ್ಷ ವಿಶ್ವನಾಥ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್​ ಇದ್ದರು.

ಇದನ್ನೂ ಓದಿ: ಬಿಜೆಪಿಯಲ್ಲಿ ಸಂಚಲನ, ಉಪಹಾರ ನೆಪದಲ್ಲಿ ಸಚಿವ ಸೋಮಣ್ಣ ನಿವಾಸದಲ್ಲಿ ನಾಯಕರ ಜತೆ ಅಮಿತ್ ಶಾ ಪ್ರತ್ಯೇಕ ಚರ್ಚೆ

Bengaluru Ambedkar Stadium

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣ ಮಾಡಿರುವ ಡಾ.ಬಿ.ಆರ್.ಅಂಬೇಡ್ಕರ್​ ಸ್ಟೇಡಿಯಂ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

ನಾನು ಕೆಲವರಿಗೆ ನಕಾರಾತ್ಮಕ ಚಿಂತನೆ ಮಾಡಿವವರಿಗೆ ಹೇಳುತ್ತೇನೆ. ಬನ್ನಿ ನಮ್ಮ ಅಭಿವೃದ್ಧಿ ಕೆಲಸವನ್ನ ನೋಡಬನ್ನಿ. ವಿ ಸೊಮಣ್ಣ ಅವರ ಕ್ಷೇತ್ರವನ್ನ ನೋಡಿ. ಹಣ ಇದ್ದರೆ ಕೆಲಸವಾಗುದಿಲ್ಲ. ಹಗಲು ರಾತ್ರಿ ಕೆಲಸ ಮಾಡಬೇಕಾಗುತ್ತದೆ. ಒಂದು ಕಾಲದಲ್ಲಿ ದೊಡ್ಡೆ ದೊಡ್ಡಪ್ಪ ಅಂತ್ತಿದ್ದರು. ಇದೀಗಾ ದುಡಿಮೆಯೇ ದೊಡ್ಡಪ್ಪ ಆಗಿದೆ. ಸೊಮಣ್ಣ ಅವರು ದಣಿವರಿಯದ ನಾಯಕ. ದುಡಿಮೆಯನ್ನ ಪ್ರೀತಿ ಮಾಡುತ್ತಾರೆ. ಜಾತಿ‌ಮತಗಳನ್ನ ಪ್ರೀರಿಸಿತ್ತಾರೆ. ನಾನು ನಾಲ್ಕು ವರ್ಷಗಳಿಂದ ಅವರ ಕ್ಷೇತ್ರಕ್ಕೆ ಬರುತ್ತಿದ್ದೇನೆ. ಆದರೆ ಅವರ ಕೆಲಸ ಅದ್ಭತ. ಅಶ್ರಯವನ್ನ ಅರಸಿ ಬರುವ ಜನರಿಗರ ಆಸಾರೆಯಾಗುವುದೇ ನಮ್ಮ ಬೆಂಗಳೂರು. ನಮ್ಮ ಬೆಂಗಳೂರಿನಂತಹ ನಗರ ಎಲ್ಲಿಯು ಇಲ್ಲ ಎಂದರು.

ನನ್ನ ಮತ ಗೆಲ್ಲಬೇಕು, ನನ್ನ ಮತದಿಂದ ಅಭಿವೃದ್ಧಿಯಾಗಬೇಕು ಎನ್ನುವುದು ವಿ ಸೊಮ್ಮಣ್ಣ ಅವರ ಕನಸು. ಇನ್ನು ಮುಂದೆ ಬೆಂಗಳೂರು ಯೋಜನಾ ಬದ್ದವಾಗಿ ಬೆಳೆಯುತ್ತದೆ. ಬೆಂಗಳೂರು ನಗರ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಹಲವು ಯೋಜನೆ ತರುತ್ತೇವೆ. ಈ ಕ್ರೀಡಾಂಗಣ ಅಂತರಾಷ್ಟ್ರೀಯ ಮಟ್ಟದಲ್ಲಿದೆ, ಈ ಕ್ರಿಡಾಂಗಣದಿಂದ ಈ ಕ್ಷೇತದ ಕ್ರಿಡಾಪಟುಗಳನ್ನ ದತ್ತು ತೆಗೆದುಕೊಂಡು ಈ ಕ್ರೀಡಾಂಗಣದಿಂದ ಒಲಪಿಂಗ್​ಗೆ ಹೋಗಬೇಕು. ಇದನ್ನ ಸೊಮಣ್ಣನವರು ಮಾಡಬೇಕು ಎಂದರು.

ಕ್ರೀಡಾಂಗಣ ನಿರ್ಮಾಣಕ್ಕೆ ಬಿಎಸ್ ಯಡಿಯೂರಪ್ಪ ಸಹಾರ ಅಪಾರ: ಸೋಮಣ್ಣ

ಸಚಿವ ಸೋಮಣ್ಣ ಮಾತನಾಡಿ, ಹೈ ಟೆಕ್ಷನ್ ವಯರ್ ತೆಗೆಸಿ ಇಂದು ಕ್ರೀಡಾಂಗಣ ಮಾಡಿದ್ದೇವೆ. ಇದಕ್ಕೆ ಬಿ.ಎಸ್ ಯಡಿಯೂರಪ್ಪ ಅವರ ಸಹಾಯ ಅಪಾರವಾಗಿದೆ. 37 ಕೋಟಿ ರೂಪಾಯಿಯಲ್ಲಿ ಇಂದು ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನ ಮಾಡಿದ್ದೇವೆ. ಇಡೀ ವಿಶ್ವದ ಭೂಪಟದಲ್ಲಿರುವ ಡಾ ಅಂಬೆಡ್ಕರ್ ಅವರ ಹೆಸರನ್ನ ಈ ಕ್ರೀಡಾಂಗಣಕ್ಕೆ ಇಟ್ಟಿದ್ದೇವೆ. ಇದನ್ನು ಮುಖ್ಯಮಂತ್ರಿಯವರು ಉದ್ಘಾಟಿಸಿದ್ದಾರೆ. ಈ ಕ್ಷೇತ್ರವನ್ನ ಮೊದಲನೇ ಸ್ಥಾನಕ್ಕೆ ತರಬೇಕು ಎನ್ನುವುದು ನನ್ನ ಉದ್ದೇಶವಾಘಿದೆ. ನಿಮ್ಮ ಮತವೇ ಇದಕ್ಕೆ ಕಾರಣ ಎಂದರು.

5 ಸಾವಿರ ಮನೆಗಳನ್ನ ಎಸ್.ಆರ್ ವಿಶ್ವನಾಥ್ ಅವರ ಕ್ಷೇತದಲ್ಲಿ ಕಟ್ಟಿದ್ದೇವೆ. ಆ ಮನೆಗಳನ್ನ 31 ನೇ ತಾರೀಖು ಉದ್ಘಾಟನೆ ಮಾಡುತ್ತೀದ್ದೇವೆ. ನನ್ನ ಜೀವನದಲ್ಲಿ ನನಿಗೆ ವೋಟ್ ಹಾಕಿದರೂ ಹಾಕದೇ ಇದ್ದರೂ ಜನರನ್ನ ಒಂದೇ ರೀತಿಯಾಗಿ ನೋಡಿದ್ದೇನೆ. ಈ ಕ್ಷೇತ್ರ ಅಭಿವೃದ್ಧಿಯತ್ತ ಸಾಗಬೇಕು. ಬೊಮ್ಮಯಿ ಅವರು ಬಂದು ಒಂದು ವರ್ಷ 18 ತಿಂಗಳು ಕಳೆದಿದ್ದು, ಇಡೀ ರಾಜ್ಯದ ಜಿಲ್ಲೆ, ತಾಲೂಕುಗಳನ್ನ ಸುತ್ತು ಹಾಕಿದ್ದಾರೆ. ಅವರಂತಹ ಮುಖ್ಯಮಂತ್ರಿಗಳು ನಮ್ಮ ರಾಜ್ಯಕ್ಕೆ ಬೇಕು. ಇಲ್ಲಿನ ಜನರ ಆರ್ಶೀವಾರ್ದ ನನ್ನ ಮೇಲೆ ಇರಬೇಕು ಎಂದರು.

ಇದನ್ನೂ ಓದಿ: Vishnuvardhan Memorial: ‘ಕರುನಾಡ ಧ್ವಜವನ್ನು ವಿಷ್ಣುವರ್ಧನ್​ ಎತ್ತಿ ಹಿಡಿದರು’; ಸ್ಮಾರಕ ಉದ್ಘಾಟನೆ ಬಳಿಕ ಸಿಎಂ ಬೊಮ್ಮಾಯಿ ಮಾತು

ಸೋಮಣ್ಣ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿಗಳಾಗಿವೆ: ಅಶ್ವತ್ಥನಾರಾಯಣ

ಸೊಮಣ್ಣ ಅವರು ಅವರ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿಗಳಾಗಿವೆ. ಅದರಲ್ಲಿ ಗೊವಿಂದರಾಜನಗರ ಕ್ಷೇತ್ರದಲ್ಲಿ ಅಂಬೇಡ್ಕರ್ ಅವರ ಹೆಸರಿನ ಅಂಬೇಡ್ಕರ್ ಸ್ಟೇಡಿಯಂ ಉದ್ಘಾಟನೆಯಾಗಿದೆ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಾಣ ಹೇಳಿದರು. ಸೊಮಣ್ಣ ಅವರು ಜನರ ಅಹವಾಲುಗಳನ್ನ ಆಲಿಸಿ ಕೆಲಸ ಮಾಡುತ್ತಾರೆ. ಅಭಿವೃದ್ಧಿಯನ್ನ ಉತ್ತಮವಾಗಿ ಮಾಡುತ್ತಾರೆ. ನನ್ನ ಇಲಾಖೆಯ ಒಂದು ಬಿಲ್ಡಿಂಗ್ ಸಹ ಇಂದು ಉದ್ಘಾಟನೆಗೊಂಡಿದೆ. ಇಂದು ತುಂಬ ಖುಷಿಯಾಗುತ್ತಿದೆ ಎಂದರು.

ನಮ್ಮ ವಿ ಸೊಮಣ್ಣ ಅದ್ಬುತ ವ್ಯಕ್ತಿ: ಜಗ್ಗೇಶ್

ಈ ರಾಜ್ಯದ ಕಾಮಾನ್ ಸಿಎಂ ಎನ್ನುವ ಹೆಸರಿಗೆ ತಕ್ಕಂತೆ ಬಸವರಾಜ್ ಬೊಮ್ಮಯಿ ಅವರು ಕೆಲಸ ಮಾಡುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿಗಳ ಬಗ್ಗೆ ಹೆಮ್ಮೆಯಾಗುತ್ತದೆ ಎಂದು ಹೇಳಿದ ರಾಜ್ಯಸಭೆ ಸದಸ್ಯ, ನಟ ಜಗ್ಗೇಶ್, ನಮ್ಮ ವಿ ಸೊಮಣ್ಣ ಅದ್ಬುತ ವ್ಯಕ್ತಿ. ನಾವು ಕೆಲಸ ಮಾಡುವುದನ್ನ ಪ್ರಧಾನಿ ಮೋದಿಯವರಿಂದ ಕಲಿತಿದ್ದೇವೆ. ಸೊಮಣ್ಣ ಅವರು ಜಿರೋದಿಂದ 100 ವರೆಗೂ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರದಿಂದ ಮಾಡಿದ ಕೆಲಸಗಳನ್ನ ನೋಡಿದಾಗ ಸಂತೋಷವಾಗುತ್ತದೆ. ಆದರೆ ಟಿವಿಗಳನ್ನ ನೋಡಿದಾಗ ಬೇಜಾರ್ ಆಗುತ್ತದೆ. ವಿರೋಧ ಪಕ್ಷದ ನಾಯಕರು ಮಾತಾನಾಡುವುದನ್ನ ನೋಡುವಾಗ ಬೇಸರವಾಗುತ್ತದೆ ಎಂದರು.

ನಮ್ಮ ಸರ್ಕಾರ ಇದ್ದಾಗಾ ಮಾತ್ರ ಅಭಿವೃದ್ಧಿಯಾಗಿದ್ದು ಅಂತಾರೇ. ಆದರೆ ಜನರು ಅದನ್ನ ಸೂಕ್ಷ್ಮವಾಗಿ ಗಮನಿಸಬೇಕು‌. 50- 50 ಸರ್ಕಾರವನ್ನ ದಯವಿಟ್ಟು ತರಬೇಡಿ. ಒಂದೇ ಸರ್ಕಾರವನ್ನೇ ತನ್ನಿ. ಸೊಮಣ್ಣ ಅವರನ್ನ ಇನ್ನು ಎತ್ತರಕ್ಕೆ ಬೆಳೆಸಿ ಎಂದು ಜಗ್ಗೇಶ್ ಮನವಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:45 pm, Sun, 29 January 23

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು