AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vishnuvardhan Memorial: ‘ಕರುನಾಡ ಧ್ವಜವನ್ನು ವಿಷ್ಣುವರ್ಧನ್​ ಎತ್ತಿ ಹಿಡಿದರು’; ಸ್ಮಾರಕ ಉದ್ಘಾಟನೆ ಬಳಿಕ ಸಿಎಂ ಬೊಮ್ಮಾಯಿ ಮಾತು

CM Basavaraj Bommai | Vishnuvardhan: ‘ಯಾವ ಪಾತ್ರವನ್ನು ಕೊಟ್ಟರೂ ವಿಷ್ಣುವರ್ಧನ್​ ಅತ್ಯಂತ ನೈಜವಾಗಿ ಅಭಿನಯಿಸುತ್ತಿದ್ದರು. ಅವರು ಮಾಡಿದ ಪ್ರತಿ ಪಾತ್ರ ಇಂದಿಗೂ ಅಭಿಮಾನಿಗಳ ಮನದಲ್ಲಿ ಹಸಿರಾಗಿದೆ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Vishnuvardhan Memorial: ‘ಕರುನಾಡ ಧ್ವಜವನ್ನು ವಿಷ್ಣುವರ್ಧನ್​ ಎತ್ತಿ ಹಿಡಿದರು’; ಸ್ಮಾರಕ ಉದ್ಘಾಟನೆ ಬಳಿಕ ಸಿಎಂ ಬೊಮ್ಮಾಯಿ ಮಾತು
ವಿಷ್ಣುವರ್ಧನ್, ಬಸವರಾಜ ಬೊಮ್ಮಾಯಿ,
ಮದನ್​ ಕುಮಾರ್​
|

Updated on: Jan 29, 2023 | 4:57 PM

Share

ವಿಷ್ಣುವರ್ಧನ್​ ಸ್ಮಾರಕವನ್ನು (Vishnuvardhan Memorial) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು (ಜ.29) ಉದ್ಘಾಟನೆ ಮಾಡಿದ್ದಾರೆ. ಮೈಸೂರಿನಲ್ಲಿ ಭವ್ಯ ಸ್ಮಾರಕ ನಿರ್ಮಾಣ ಆಗಿದ್ದು, ವಿಷ್ಣು ಪ್ರತಿಮೆ ಗಮನ ಸೆಳೆಯುತ್ತಿದೆ. ಸ್ಮಾರಕ ಅನಾವರಣ ಸಂದರ್ಭದಲ್ಲಿ ‘ಸಾಹಸ ಸಿಂಹ’ ವಿಷ್ಣುವರ್ಧನ್​ (Vishnuvardhan) ಅವರ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. ‘ನಾನು ಈ ಕಾರ್ಯಕ್ರಮಕ್ಕೆ ವಿಷ್ಣುವರ್ಧನ್​ ಅಭಿಮಾನಿಯಾಗಿ ಬಂದಿದ್ದೇನೆ. ಅವರ ಕಲೆ, ಸಾಹಸ, ಸಾಧನೆ ಎಲ್ಲವೂ ನಮ್ಮ ಕಣ್ಣ ಮುಂದಿದೆ. ಅವರ ಮೊದಲ ಸಿನಿಮಾ ‘ನಾಗರಹಾವು’ ಬಗ್ಗೆ ಪತ್ರಿಕೆಯಲ್ಲಿ ಪ್ರಕಟ ಆದಾಗ ವಿಷ್ಣುವರ್ಧನ್​ ಅವರ ಫೋಟೋ ಬಂದಿತ್ತು. ಅದನ್ನು ನೋಡಿದಾಗ ಯಾರಾದರೂ ವಿಷ್ಣುವರ್ಧನ್​ ಅವರ ಫ್ಯಾನ್​ ಆಗಲೇಬೇಕಿತ್ತು’ ಎಂದು ಬಸವರಾಜ​ ಬೊಮ್ಮಾಯಿ (CM Basavaraj Bommai) ಹೇಳಿದ್ದಾರೆ.

‘ವಿಷ್ಣುವರ್ಧನ್​ ಅವರು 70ರ ದಶಕದಲ್ಲಿ ‘ನಾಗರಹಾವು’ ಚಿತ್ರದ ಮೂಲಕ ಇಡೀ ಕರುನಾಡಿನ ಮನೆಮಾತಾದರು. ಹಲವು ಬಗೆಯ ಪಾತ್ರಗಳನ್ನು ಮಾಡಿ, ಕರ್ನಾಟಕದಲ್ಲಿ ಸಾಹಸ ಸಿಂಹನಾಗಿ ಮೆರೆದರು. ಬೇರೆ ಭಾಷೆಯ ಸಿನಿಮಾಗಳಲ್ಲೂ ನಟಿಸಿ, ಕರುನಾಡಿನ ಧ್ವಜವನ್ನು ಎತ್ತಿ ಹಿಡಿದರು. ಯಾವ ಪಾತ್ರವನ್ನು ಕೊಟ್ಟರೂ ಕೂಡ ಅತ್ಯಂತ ನೈಜವಾಗಿ ಅಭಿನಯಿಸುತ್ತಿದ್ದರು. ಅವರು ಮಾಡಿದ ಪ್ರತಿ ಪಾತ್ರ ಮತ್ತು ಡೈಲಾಗ್​ಗಳು ಇಂದಿಗೂ ಅಭಿಮಾನಿಗಳ ಮನದಲ್ಲಿ ಹಸಿರಾಗಿದೆ. ಅಂದಿನ ಪ್ರಸಿದ್ಧ ನಟಿ ಭಾರತಿ ಅವರು ವಿಷ್ಣುವರ್ಧನ್​ ಅವರ ಬಾಳಸಂಗಾತಿ ಆದಮೇಲೆ ಅವರಿಗೆ ದೊಡ್ಡ ಶಕ್ತಿಯಾಗಿ ನಿಂತರು’ ಎಂದು ಸಿಎಂ ಬಸವರಾಜ​ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ: Vishnuvardhan Memorial: ಬೆಂಗಳೂರಿನಲ್ಲಿ ವಿಷ್ಣುವರ್ಧನ್​ ಅಂತ್ಯ ಸಂಸ್ಕಾರ ಆದರೂ ಮೈಸೂರಿನಲ್ಲಿ ಸ್ಮಾರಕ ಆಗಿದ್ದೇಕೆ? ಇಲ್ಲಿದೆ ವಿವರ

ಇದನ್ನೂ ಓದಿ
Image
Karnataka Ratna Award: ವಿಷ್ಣುವರ್ಧನ್​ಗೆ ‘ಕರ್ನಾಟಕ ರತ್ನ’ ನೀಡಬೇಕು ಎಂಬ ಬೇಡಿಕೆ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
Image
Vishnuvardhan Memorial Inauguration: ‘ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಆಗುತ್ತಿರುವುದು ಮನಸ್ಸಿಗೆ ಖುಷಿ ನೀಡಿದೆ’; ಶಿವರಾಜ್​ಕುಮಾರ್​
Image
Vishnuvardhan Memorial: ವಿಷ್ಣು​ ಅಭಿಮಾನಿಗಳ ಅನ್ನದಾನ ಕಾರ್ಯಕ್ಕೆ ಅಡೆತಡೆ; ಸ್ಮಾರಕ ಉದ್ಘಾಟನೆ ದಿನವೂ ತಪ್ಪದ ಪರದಾಟ
Image
Vishnuvardhan Memorial: ಬೆಂಗಳೂರಿನಲ್ಲಿ ವಿಷ್ಣುವರ್ಧನ್​ ಅಂತ್ಯ ಸಂಸ್ಕಾರ ಆದರೂ ಮೈಸೂರಿನಲ್ಲಿ ಸ್ಮಾರಕ ಆಗಿದ್ದೇಕೆ? ಇಲ್ಲಿದೆ ವಿವರ

‘ವಿಷ್ಣುವರ್ಧನ್​ ಓರ್ವ ಭಾವುಕ ಜೀವಿ. ಅವರು ಮಾಡಿದ ಪಾತ್ರಗಳಲ್ಲೂ ಮಾನವೀಯತೆ ಕಾಣುತ್ತದೆ. ಅಧ್ಯಾತ್ಮಿಕವಾಗಿ ಅವರು ಹೇಳಿದ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ವಿಷ್ಣು ಸ್ಮಾರಕ ಮಾಡುವಾಗ ಬಹಳ ವಿವಾದ ನಡೆಯಿತು. ಅನಿರುದ್ಧ್​ ಮತ್ತು ಭಾರತಿ ಅವರು ಮೈಸೂರಿನಲ್ಲಿ ಸ್ಮಾರಕ ಆಗಲಿ ಎಂದು ದಿಟ್ಟ ನಿಲುವು ತೆಗೆದುಕೊಂಡರು. 11 ಕೋಟಿ ರೂಪಾಯಿಯಲ್ಲಿ ಭವ್ಯವಾದ ಸ್ಮಾರಕ ನಿರ್ಮಾಣ ಆಗಿದೆ’ ಎಂದಿದ್ದಾರೆ ಬಸವರಾಜ ಬೊಮ್ಮಾಯಿ.

‘ಈ ಸ್ಮಾರಕದಲ್ಲಿ ಆಡಿಟೋರಿಯಂ, ಗ್ಯಾಲರಿ ಮುಂತಾದ ಸೌಲಭ್ಯ ಇದೆ. ಇದರ ಉಪಯೋಗವನ್ನು ಎಲ್ಲರೂ ಪಡೆಯಬೇಕು’ ಎಂದು ಸಿಎಂ ಹೇಳಿದ್ದಾರೆ. ವಿಷ್ಣುವರ್ಧನ್​ ಅವರಿಗೆ ‘ಕರ್ನಾಟಕ ರತ್ನ ಪ್ರಶಸ್ತಿ’ ಸಿಗಬೇಕು ಎಂಬುದು ಅಭಿಮಾನಿಗಳ ಬಯಕೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ತಮ್ಮ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂದು ಕೂಡ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು