AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vishnuvardhan Memorial: ವಿಷ್ಣು​ ಅಭಿಮಾನಿಗಳ ಅನ್ನದಾನ ಕಾರ್ಯಕ್ಕೆ ಅಡೆತಡೆ; ಸ್ಮಾರಕ ಉದ್ಘಾಟನೆ ದಿನವೂ ತಪ್ಪದ ಪರದಾಟ

Vishnuvardhan Smaraka | Vishnuvardhan Fans: ಪೊಲೀಸರಿಂದ ಅನುಮತಿ ಸಿಗದ ಕಾರಣ ಅನ್ನದಾನದ ತಯಾರಿಗೆ ವಿಷ್ಣುವರ್ಧನ್​ ಅಭಿಮಾನಿಗಳು ಪರದಾಡಿದ್ದಾರೆ. ಕೊನೆಗೆ ಬದಲಾದ ಸ್ಥಳದಲ್ಲಿ ಅಡುಗೆಗೆ ಅವಕಾಶ ಕಲ್ಪಿಸಲಾಗಿದೆ.

Vishnuvardhan Memorial: ವಿಷ್ಣು​ ಅಭಿಮಾನಿಗಳ ಅನ್ನದಾನ ಕಾರ್ಯಕ್ಕೆ ಅಡೆತಡೆ; ಸ್ಮಾರಕ ಉದ್ಘಾಟನೆ ದಿನವೂ ತಪ್ಪದ ಪರದಾಟ
ವಿಷ್ಣುವರ್ಧನ್
ಮದನ್​ ಕುಮಾರ್​
|

Updated on:Jan 29, 2023 | 1:58 PM

Share

‘ಸಾಹಸ ಸಿಂಹ’ ವಿಷ್ಣುವರ್ಧನ್​ (Vishnuvardhan) ಅವರ ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇಂದು (ಜ.29) ಉದ್ಘಾಟನೆ ಆಗಲಿದೆ. ಮೈಸೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಷ್ಣು ಸ್ಮಾರಕವನ್ನು (Vishnuvardhan Memorial) ಲೋಕಾರ್ಪಣೆ ಮಾಡಲಿದ್ದಾರೆ. ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದಾರೆ. ಮೈಸೂರಿನ ಎಚ್​.ಡಿ. ಕೋಟೆ ರಸ್ತೆಯ ಅಲ್ಲಾಳು ಗ್ರಾಮದಲ್ಲಿ ಭವ್ಯ ಸ್ಮಾರಕ ಅನಾವರಣಗೊಳ್ಳುತ್ತಿದೆ. ಆ ಪ್ರಯುಕ್ತ ಅಭಿಮಾನಿಗಳು (Vishnuvardhan Fans) ಅನ್ನದಾನಕ್ಕೆ ವ್ಯವಸ್ಥೆ ಮಾಡಿದ್ದಾರೆ. ಆದರೆ ಅದಕ್ಕೆ ಅಡೆತಡೆ ಉಂಟಾಗಿದೆ. ಸ್ಥಳದಲ್ಲಿ ಅಡುಗೆ ಮಾಡಲು ಪೊಲೀಸರು ಅವಕಾಶ ನೀಡಿಲ್ಲ. ಇದರಿಂದ ಫ್ಯಾನ್ಸ್​ ಪರದಾಡಿದ್ದಾರೆ.

ಅಭಿಮಾನಿಗಳ ಅನ್ನದಾನ ಕಾರ್ಯಕ್ಕೆ ಅಡ್ಡಿ ಆಗಿರುವುದು ಬೇಸರ ಮೂಡಿಸಿದೆ. ಪ್ರೋಟೊಕಾಲ್ ಹೆಸರಿನಲ್ಲಿ ಅಡುಗೆ ಮಾಡುವ ಸ್ಥಳ ಬದಲಾವಣೆ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ. ತರಕಾರಿ ಕಟ್ ಮಾಡಲು ಕೂಡ ಅಭಿಮಾನಿಗಳು ಪರದಾಡಿದ್ದಾರೆ.  ಕೊನೆಗೆ ಬದಲಾದ ಸ್ಥಳದಲ್ಲಿ ಅಡುಗೆಗೆ ಅವಕಾಶ ಕಲ್ಪಿಸಲಾಗಿದೆ.

ವಿಷ್ಣು ಅಭಿಮಾನಿಗಳಿಂದ ರಕ್ತದಾನ:

ವಿಷ್ಣುವರ್ಧನ್​ ಸ್ಮಾರಕ ಉದ್ಘಾಟನೆ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಲವು ಬಗೆಯ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಹಾಲಾಳು ಗ್ರಾಮದಲ್ಲಿ ಇಡೀ ದಿನ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ವಿಷ್ಣು ಸ್ಮಾರಕ ಎದುರಿನ ಖಾಲಿ ಜಾಗದಲ್ಲಿ ಶಿಬಿರ ಆಯೋಜನೆಗೊಂಡಿದೆ. ಜೀವಧಾರ ರಕ್ತನಿಧಿ ಕೇಂದ್ರವು ಇದರ ಉಸ್ತುವಾರಿ ವಹಿಸಿದೆ. ಸ್ಮಾರಕದ ಆವರಣದ ಸುತ್ತಲೂ ಡಾ. ವಿಷ್ಣುವರ್ಧನ್ ಅವರ ಕಟೌಟ್ಗಳ ರಾರಾಜಿಸುತ್ತಿವೆ. ನೆಚ್ಚಿನ ನಟನ ಕಟೌಟ್‌ಗಳಿಗೆ ಬೃಹತ್ ಹಾರಗಳನ್ನು ಹಾಕಿ ಫ್ಯಾನ್ಸ್​ ಸಂಭ್ರಮಿಸುತ್ತಿದ್ದಾರೆ.

ಇದನ್ನೂ ಓದಿ
Image
Jaggesh: ಬೇರೆಯವರ ಜಾಗದಲ್ಲಿ ಮನೆ ಕಟ್ಟಿದ್ದ ವಿಷ್ಣುಗೆ ಬಳಿಕ ಸಿಕ್ತು ಡಬಲ್​ ಸೈಟ್​: ಜಗ್ಗೇಶ್​ ತೆರೆದಿಟ್ಟ ವಿಷಯ ಇದು
Image
Dr Vishnuvardhan House: ಹೇಗಿದೆ ನೋಡಿ ವಿಷ್ಣುವರ್ಧನ್​ ಹೊಸ ಮನೆ; ‘ವಲ್ಮೀಕ’ ಗೃಹ ಪ್ರವೇಶದಲ್ಲಿ ಅನಿರುದ್ಧ್​ ಕುಟುಂಬ
Image
Basavaraj Bommai: ವಿಷ್ಣುವರ್ಧನ್​ ಹೊಸ ಮನೆ ‘ವಲ್ಮೀಕ’ ಗೃಹ ಪ್ರವೇಶಕ್ಕೆ ಬಂದ ಸಿಎಂ ಬಸವರಾಜ ಬೊಮ್ಮಾಯಿ
Image
ವಿಷ್ಣುವರ್ಧನ್​ ಪ್ರೀತಿಸಿದ ಹುಡುಗಿಗೆ ಸುಂದರ್​ ರಾಜ್​ ಹೂವು ಕೊಟ್ಟಿದ್ದೇಕೆ? ಇಲ್ಲಿದೆ ಇಂಟರೆಸ್ಟಿಂಗ್​ ಘಟನೆಯ ವಿವರ

ಇದನ್ನೂ ಓದಿ: Vishnuvardhan Memorial: ಬೆಂಗಳೂರಿನಲ್ಲಿ ವಿಷ್ಣುವರ್ಧನ್​ ಅಂತ್ಯ ಸಂಸ್ಕಾರ ಆದರೂ ಮೈಸೂರಿನಲ್ಲಿ ಸ್ಮಾರಕ ಆಗಿದ್ದೇಕೆ? ಇಲ್ಲಿದೆ ವಿವರ

ವಿಷ್ಣುವರ್ಧನ್​ ಅವರ ಸ್ಮಾರಕದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲು ಬೆಂಗಳೂರಿನಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಮೈಸೂರಿಗೆ ತೆರಳಿದ್ದಾರೆ. ರಾಜ್ಯ ರಾಜಧಾನಿಯಿಂದ ಜನಸಾಗರವೇ ಮೈಸೂರಿನತ್ತ ಸಾಗಿದೆ. ಸಾವಿರಾರು ವಾಹನಗಳಲ್ಲಿ ಅಭಿಮಾನಿಗಳು ಜಾಥಾ ಹೊರಟಿದ್ದಾರೆ. ವಿಷ್ಣುವರ್ಧನ್​ ಅವರ ಫೋಟೋ ಹಿಡಿದು, ಜೈಕಾರ ಕೂಗುತ್ತ ಅಭಿಮಾನ ಮೆರೆಯಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:58 pm, Sun, 29 January 23

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ