AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vishnuvardhan Memorial: ಬೆಂಗಳೂರಿನಲ್ಲಿ ವಿಷ್ಣುವರ್ಧನ್​ ಅಂತ್ಯ ಸಂಸ್ಕಾರ ಆದರೂ ಮೈಸೂರಿನಲ್ಲಿ ಸ್ಮಾರಕ ಆಗಿದ್ದೇಕೆ? ಇಲ್ಲಿದೆ ವಿವರ

Vishnuvardhan Smaraka: 2009ರಲ್ಲಿ ವಿಷ್ಣುವರ್ಧನ್​ ನಿಧನರಾದರೂ ಕೂಡ ಅವರ ಸ್ಮಾರಕ ನಿರ್ಮಾಣವಾಗಲು 14 ವರ್ಷ ಕಳೆಯಬೇಕಾಯಿತು. ಅದಕ್ಕಾಗಿ ವಿಷ್ಣು ಕುಟುಂಬದವರು ಮಾಡಿದ ಹೋರಾಟ ಅಷ್ಟಿಷ್ಟಲ್ಲ.

Vishnuvardhan Memorial: ಬೆಂಗಳೂರಿನಲ್ಲಿ ವಿಷ್ಣುವರ್ಧನ್​ ಅಂತ್ಯ ಸಂಸ್ಕಾರ ಆದರೂ ಮೈಸೂರಿನಲ್ಲಿ ಸ್ಮಾರಕ ಆಗಿದ್ದೇಕೆ? ಇಲ್ಲಿದೆ ವಿವರ
ವಿಷ್ಣುವರ್ಧನ್ ಸ್ಮಾರಕ
ಮದನ್​ ಕುಮಾರ್​
|

Updated on:Jan 29, 2023 | 11:54 AM

Share

ಕನ್ನಡ ಚಿತ್ರರಂಗಕ್ಕೆ ನಟ ವಿಷ್ಣುವರ್ಧನ್​ (Vishnuvardhan) ಅವರು ನೀಡಿದ ಕೊಡುಗೆ ಅಪಾರ. 200 ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದ ಮಹಾನ್​ ಕಲಾವಿದ ಅವರು. ಇಂದಿಗೂ ಅವರ ಸಿನಿಮಾಗಳನ್ನು ಪ್ರೇಕ್ಷಕರು ಆಸಕ್ತಿಯಿಂದ ನೋಡುತ್ತಾರೆ. ಅಂತಹ ಎವರ್​ಗ್ರೀನ್​ ಸಿನಿಮಾಗಳನ್ನು ನೀಡಿದ ವಿಷ್ಣುವರ್ಧನ್​ ಅವರು ನಿಧನರಾಗಿದ್ದು 2009ರ ಡಿಸೆಂಬರ್​ 30ರಂದು. ಆಗ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಅಭಿಮಾನ್​ ಸ್ಟುಡಿಯೋ ಆವರಣದಲ್ಲಿ ಮಾಡಲಾಯಿತು. ಅಲ್ಲಿಯೇ ಸ್ಮಾರಕ (Vishnuvardhan Smaraka) ನಿರ್ಮಾಣ ಆಗಬೇಕು ಎಂಬುದು ಅಭಿಮಾನಿಗಳ ಬಯಕೆ ಆಗಿತ್ತು. ಆದರೆ ಅದು ಸಾಧ್ಯವಾಗಲೇ ಇಲ್ಲ. ಕೊನೆಗೂ ಮೈಸೂರಿನಲ್ಲಿ ವಿಷ್ಣುವರ್ಧನ್​ ಸ್ಮಾರಕ (Vishnuvardhan Memorial) ನಿರ್ಮಾಣ ಆಗಿದೆ. ಬೆಂಗಳೂರಿನಲ್ಲಿ ವಿಷ್ಣುವರ್ಧನ್​ ಅವರ ಸಮಾಧಿ ಇದ್ದರೂ ಕೂಡ ಮೈಸೂರಿನಲ್ಲಿ ಸ್ಮಾರಕ ಮಾಡಿದ್ದೇಕೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ..

2009ರಲ್ಲಿ ವಿಷ್ಣುವರ್ಧನ್​ ನಿಧನರಾದರೂ ಕೂಡ ಅವರ ಸ್ಮಾರಕ ನಿರ್ಮಾಣವಾಗಲು 14 ವರ್ಷ ಕಳೆಯಬೇಕಾಯಿತು. ಅದಕ್ಕಾಗಿ ವಿಷ್ಣು ಕುಟುಂಬದವರು ಮಾಡಿದ ಹೋರಾಟ ಅಷ್ಟಿಷ್ಟಲ್ಲ. ಸ್ಮಾರಕ ನಿರ್ಮಾಣಕ್ಕೆ ಮೊದಲು ಎದುರಾಗಿದ್ದೇ ಜಾಗದ ಸಮಸ್ಯೆ. ವಿಷ್ಣುವರ್ಧನ್​ ಅವರ ಅಂತ್ಯ ಕ್ರಿಯೆ ನಡೆದ ಜಾಗಕ್ಕೆ ಸಂಬಂಧಿಸಿದಂತೆ ಕೋರ್ಟ್​​ನಲ್ಲಿ ಕೇಸ್​ ನಡೆಯುತ್ತಿದೆ. ಅದು ಇಂದಿಗೂ ಇತ್ಯರ್ಥ ಆಗಿಲ್ಲ. ಹಾಗಾಗಿ ಅಲ್ಲಿ ಸ್ಮಾರಕ ನಿರ್ಮಾಣಕ್ಕೆ ಅವಕಾಶ ಸಿಗಲಿಲ್ಲ.

ಇದನ್ನೂ ಓದಿ: Vishnuvardhan Memorial: ವಿಷ್ಣುವರ್ಧನ್​ ಸ್ಮಾರಕ ಲೋಕಾರ್ಪಣೆ: ಬೆಂಗಳೂರಿಂದ ಮೈಸೂರಿಗೆ ಹೊರಟ ಜನಸಾಗರ

ಇದನ್ನೂ ಓದಿ
Image
Jaggesh: ಬೇರೆಯವರ ಜಾಗದಲ್ಲಿ ಮನೆ ಕಟ್ಟಿದ್ದ ವಿಷ್ಣುಗೆ ಬಳಿಕ ಸಿಕ್ತು ಡಬಲ್​ ಸೈಟ್​: ಜಗ್ಗೇಶ್​ ತೆರೆದಿಟ್ಟ ವಿಷಯ ಇದು
Image
Dr Vishnuvardhan House: ಹೇಗಿದೆ ನೋಡಿ ವಿಷ್ಣುವರ್ಧನ್​ ಹೊಸ ಮನೆ; ‘ವಲ್ಮೀಕ’ ಗೃಹ ಪ್ರವೇಶದಲ್ಲಿ ಅನಿರುದ್ಧ್​ ಕುಟುಂಬ
Image
Basavaraj Bommai: ವಿಷ್ಣುವರ್ಧನ್​ ಹೊಸ ಮನೆ ‘ವಲ್ಮೀಕ’ ಗೃಹ ಪ್ರವೇಶಕ್ಕೆ ಬಂದ ಸಿಎಂ ಬಸವರಾಜ ಬೊಮ್ಮಾಯಿ
Image
ವಿಷ್ಣುವರ್ಧನ್​ ಪ್ರೀತಿಸಿದ ಹುಡುಗಿಗೆ ಸುಂದರ್​ ರಾಜ್​ ಹೂವು ಕೊಟ್ಟಿದ್ದೇಕೆ? ಇಲ್ಲಿದೆ ಇಂಟರೆಸ್ಟಿಂಗ್​ ಘಟನೆಯ ವಿವರ

ಕನ್ನಡದ ಖ್ಯಾತ ಹಾಸ್ಯ ನಟ ಬಾಲಣ್ಣನವರ ಕುಟುಂಬದವರು ಅಭಿಮಾನ್​ ಸ್ಟುಡಿಯೋ ಜಾಗಕ್ಕೆ ಸಂಬಂಧಿಸಿದಂತೆ ಬಹಳ ವರ್ಷಗಳ ಹಿಂದೆಯೇ, ಅಂದರೆ 2004ರಲ್ಲಿಯೇ ಕೇಸ್​ ದಾಖಲು ಮಾಡಿದ್ದರು. ಆದರೆ ವಿಷ್ಣುವರ್ಧನ್​ ಅವರ ಅಂತ್ಯಕ್ರಿಯೆ ಆಗಿದ್ದು 2009ರಲ್ಲಿ. ಮೊದಲೇ ಕೋರ್ಟ್​ನಲ್ಲಿ ಇದ್ದ ಕೇಸ್​ ಇತ್ಯರ್ಥ ಆಗಿಲ್ಲದ ಕಾರಣ ಅಲ್ಲಿ ಸ್ಮಾರಕ ನಿರ್ಮಾಣಕ್ಕೆ ಕಾನೂನಿನ ಅಡೆತಡೆ ಉಂಟಾಯಿತು.

ಇದನ್ನೂ ಓದಿ: ವಿಷ್ಣುವರ್ಧನ್​ ಹೊಸ ಮನೆಗೆ ಭೇಟಿ ನೀಡಿದ ಯಶ್​, ರಾಧಿಕಾ ಪಂಡಿತ್​, ಸುದೀಪ್​; ಫೋಟೋ ವೈರಲ್​

ಸ್ಮಾರಕ ಎಂದರೆ ಕೇವಲ ಸಮಾಧಿ ಕಟ್ಟಿ ಇಡುವಂಥದ್ದಲ್ಲ. ಅಲ್ಲಿ ಆ ಮಹನೀಯರನ್ನು ಸ್ಮರಿಸುವಂತಹ ಹಲವು ಚಟುವಟಿಕೆಗಳಿಗೆ ಅವಕಾಶ ಇರಬೇಕು. ಫೋಟೋ ಗ್ಯಾಲರಿ, ಮ್ಯೂಸಿಯಂ ಇತ್ಯಾದಿ ಇರಬೇಕು. ಅದಕ್ಕಾಗಿ ವಿಶಾಲವಾದ ಜಾಗ ಬೇಕು. ಅಭಿಮಾನ್​ ಸ್ಟುಡಿಯೋ ಆವರಣದಲ್ಲಿ ಅಷ್ಟು ಜಾಗ ಸಿಗುವುದು ಕಷ್ಟವಾಗಿತ್ತು. ಸರ್ಕಾರವು ಮೈಸೂರಿನಲ್ಲಿ ಸರ್ಕಾರ ವಿಶಾಲವಾದ ಜಾಗ ನೀಡಿತು. ಹಾಗಾಗಿ ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣ ಆದರೆ ಸೂಕ್ತ ಎಂದು ವಿಷ್ಣುವರ್ಧನ್​ ಕುಟುಂಬದವರು ನಿರ್ಧರಿಸಿದರು.

ಅಂತಿಮವಾಗಿ ಮೈಸೂರಿನಲ್ಲಿ ‘ಸಾಹಸ ಸಿಂಹ’ ವಿಷ್ಣುವರ್ಧನ್​ ಅವರ ಭವ್ಯ ಸ್ಮಾರಕ ನಿರ್ಮಾಣ ಆಗಿದೆ. ಅದರ ಜೊತೆಗೆ, ಬೆಂಗಳೂರಿನಲ್ಲಿ ಇರುವ ವಿಷ್ಣು ಪುಣ್ಯಭೂಮಿ ಕೂಡ ಅಭಿಮಾನಿಗಳ ಪಾಲಿಗೆ ವಿಶೇಷವಾಗಿದೆ. ಈ ಜಾಗವನ್ನು ಅಭಿವೃದ್ಧಿ ಮಾಡಬೇಕು ಎಂಬುದು ಅಭಿಮಾನಿಗಳ ಕೂಗು. ಮೈಸೂರಿನಲ್ಲಿ ನಿರ್ಮಾಣ ಆಗಿರುವ ವಿಷ್ಣು ಸ್ಮಾರಕ ಈಗ ಅಭಿಮಾನಿಗಳ ಆಕರ್ಷಣೆಯ ಸ್ಥಳವಾಗಿದೆ. ಅಲ್ಲಿಗೆ ಭೇಟಿ ನೀಡಬೇಕು ಎಂದು ರಾಜ್ಯದ ಮೂಲೆ ಮೂಲೆಯಲ್ಲಿ ಇರುವ ಅಭಿಮಾನಿಗಳು ಮೈಸೂರಿನತ್ತ ಧಾವಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:54 am, Sun, 29 January 23

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ