ಬೆಂಗಳೂರು: ಮೆಟ್ರೋ ಸ್ಟೇಷನ್ ಮೇಲಿಂದ ಕಬ್ಬಿಣದ ತುಂಡು ಬಿದ್ದು ಕಾರಿನ ಗ್ಲಾಸ್ ಜಖಂ; ಚಾಲಕ ಪ್ರಾಣಾಪಾಯದಿಂದ ಪಾರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 25, 2023 | 12:44 PM

ಕಾರಿನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಮೆಟ್ರೋ ಸ್ಟೇಷನ್ ಮೇಲಿಂದ ಕಬ್ಬಿಣದ ತುಂಡು​ ಕಾರಿನ ಮೇಲೆ ಬಿದ್ದು ಗ್ಲಾಸ್ ಜಖಂ ಆಗಿರುವ ಘಟನೆ ಯಶವಂತಪುರದ ಸೋಪ್ ಫ್ಯಾಕ್ಟರಿ ಮೇಟ್ರೊ ಸ್ಟೇಷನ್‌ ಕೆಳಗೆ ನಡೆದಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬೆಂಗಳೂರು: ಮೆಟ್ರೋ ಸ್ಟೇಷನ್ ಮೇಲಿಂದ ಕಬ್ಬಿಣದ ತುಂಡು ಬಿದ್ದು ಕಾರಿನ ಗ್ಲಾಸ್ ಜಖಂ; ಚಾಲಕ ಪ್ರಾಣಾಪಾಯದಿಂದ ಪಾರು
ಮೆಟ್ರೋ ಸ್ಟೇಷನ್ ಮೇಲಿಂದ ಕಬ್ಬಿಣದ ಪೀಸ್ ಬಿದ್ದು ಕಾರಿನ ಗ್ಲಾಸ್ ಜಖಂ
Follow us on

ಬೆಂಗಳೂರು: ಮೆಟ್ರೋ ಪಿಲ್ಲರ್​ ದುರಂತ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಮತ್ತೊಂದು ಅವಘಡ ನಡೆದಿದೆ. ಕಾರಿನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಮೆಟ್ರೋ ಸ್ಟೇಷನ್ ಮೇಲಿಂದ ಕಬ್ಬಿಣದ ತುಂಡು ​ಒಂದು ಕಾರಿನ ಮೇಲೆ ಬಿದ್ದಿರುವ ಘಟನೆ ಯಶವಂತಪುರದ ಸೋಪ್ ಫ್ಯಾಕ್ಟರಿ ಮೇಟ್ರೊ ಸ್ಟೇಷನ್‌ ಕೆಳಗೆ ನಡೆದಿದೆ. ಕಾರಿನ ಮಾಲೀಕ ರಿತೇಶ್ ಎಂಬುವರು ಹೋಗುವ ಸಮಯದಲ್ಲಿ ಕಾರು ಮೆಟ್ರೋ ಸ್ಟೇಷನ್ ಕೆಳಗೆ ಬಂದ ವೇಳೆ ಕಬ್ಬಿಣದ ತುಂಡು ಕಾರಿನ ಕ್ಲಾಸ್ ಮೇಲೆ ಬಿದ್ದಿದೆ.

ಇನ್ನು ಕಬ್ಬಿಣದ ತುಂಡು ಬಿದ್ದ ರಭಸಕ್ಕೆ ಕಾರಿನ ಗ್ಲಾಸ್ ಒಡೆದು ಹೋಗಿದೆ. ಈ ಕುರಿತು ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೇಟ್ರೋ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ಆಗಿದೆ ಎಂದು ಕಾರು ಮಾಲೀಕ ದೂರು ನೀಡಿದ್ದಾರೆ. ಈ ಘಟನೆ ಕುರಿತು ಕಬ್ಬಿಣದ ಪೀಸ್ ಎಲ್ಲಿಂದ ಬಿತ್ತು ಅನ್ನೋ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:BMRCL Recruitment 2023: ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ: ವೇತನ 1.40 ಲಕ್ಷ ರೂ.

ಕಳೆದು ತಿಂಗಳ ಮೆಟ್ರೋ ಪಿಲ್ಲರ್‌ ದುರಂತ  ಮಾಸುವ ಮುನ್ನವೇ ಮತ್ತೊಂದು ಘಟನೆ

ಜನವರಿ 10 ರಂದು ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ನ ಕಬ್ಬಿಣದ ರಾಡ್‌ಗಳು ದ್ವಿಚಕ್ರ ವಾಹನದ ಮೇಲೆ ಕುಸಿದು ಬಿದ್ದು, ಮಹಿಳೆ ಮತ್ತು ಆಕೆಯ ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ನಾಗವಾರದಲ್ಲಿ ನಡೆದಿತ್ತು. ಈ ವೇಳೆ ತಂದೆ ಪ್ರಾಣಾಪಾಯದಿಂದ ಪಾರಾಗಿದ್ದರು. ಕಲ್ಯಾಣ್ ನಗರದಿಂದ ಹೆಚ್‌ಆರ್‌ಬಿಆರ್ ಲೇಔಟ್‌ಗೆ ಹೋಗುವ ರಸ್ತೆಯಲ್ಲಿ ನಿರ್ಮಿಸಲಾಗುತ್ತಿದ್ದ ಮೆಟ್ರೊ ರೈಲ್ವೆ ಪಿಲ್ಲರ್‌ನ ಲೋಹದ ರಾಡ್​ಗಳು ರಸ್ತೆ ಮೇಲೆ ಕುಸಿದು ಬಿದ್ದಿದ್ದರಿಂದ ಘಟನೆ ನಡೆದಿತ್ತು.

ಧಾರವಾಡ ಮೂಲದ ಸಿವಿಲ್ ಇಂಜಿನಿಯರ್ ಲೋಹಿತ್ ಕುಮಾರ್ ಮತ್ತು ಮಾನ್ಯತಾ ಟೆಕ್ ಪಾರ್ಕ್​ನಲ್ಲಿರುವ ಮೋಟೋರೋಲಾ ಕಂಪನಿಯಲ್ಲಿ ವೃತ್ತಿ ಹೊಂದಿದ್ದ ತೇಜಸ್ವಿನಿ ನಾಗವಾರದಲ್ಲಿ ನೆಲೆಸಿದ್ದರು. ಅದರಂತೆ ಲೋಹಿತ್ ಅವರು ನಾಗವಾರದಿಂದ ಮಾನ್ಯತಾ ಟೆಕ್ ಪಾರ್ಕ್ ಬಳಿ ಪತ್ನಿಯನ್ನ ಬಿಟ್ಟು ನಂತರ ತನ್ನ ಇಬ್ಬರು ಮಕ್ಕಳನ್ನ ಬೇಬಿ ಸಿಟ್ಟಿಂಗ್​ಗೆ ಬಿಡಲು ತೆರಳುತ್ತಿದ್ದಾಗ ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಬಿದ್ದು ಸಾವನ್ನಪ್ಪಿದ್ದರು.

ಇದನ್ನೂ ಓದಿ:ಮೆಟ್ರೋ ಪಿಲ್ಲರ್​ ಬಿದ್ದು ತಾಯಿ ಮಗು ಸಾವು ಪ್ರಕರಣ: ಸರ್ಕಾರದ ಪರಿಹಾರ ತಿರಸ್ಕರಿಸಿದ ಕುಟುಂಬಸ್ಥರು

ಇದೀಗ ಇನ್ನು ಆ ಘಟನೆ ಮಾಸುವ ಮುನ್ನವೇ ಮತ್ತೋಂದು ಅವಘಡ ಆಗಿದ್ದು, ಪ್ರಾಣಾಪಾಯದಿಂದ ಕಾರು ಚಾಲಕ ಪಾರಾಗಿದ್ದಾನೆ. ಇನ್ನು ಇಂತಹ ಘಟನೆ ಪದೇ ಪದೇ ಮರುಕಳಿಸುತ್ತಿದ್ದರು. ಅಧಿಕಾರಿಗಳು ಮಾತ್ರ ಈ ಬಗ್ಗೆ ಮೌನವಾಗಿದ್ದಾರೆ. ಜೊತೆಗೆ ಕಳೆದ ಬಾರಿ ಆದ ಘಟನೆ ತನಿಖೆ ಇನ್ನೂ ನಡೆಯುತ್ತಿದ್ದು, ತಪ್ಪಿತಸ್ಥರಿಗೆ ಶಿಕ್ಕೆಯಾಗಿಲ್ಲ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಘಟನೆ ನಡೆದಿದೆ.


ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:56 am, Sat, 25 February 23