ಬೆಂಗಳೂರು: ಎಂಎಲ್ಸಿ ಕಾರಿನ ನಂಬರ್ ಬಳಸಿ, ಕದ್ದ ಕಾರು ಮಾರಾಟಕ್ಕೆ ಯತ್ನ; ಆರೋಪಿ ಬಂಧನ
ಜೆಡಿಎಸ್ ಎಂಎಲ್ಸಿ ಭೋಜೇಗೌಡ ಅವರ ಕಾರಿನ ನಂಬರ್ ಬಳಸಿ, ಕದ್ದ ಕಾರನ್ನ ಮಾರಾಟ ಮಾಡಲು ಯತ್ನಿಸಿದ್ದ ಐಕ್ಯೂ ಕಾರ್ ಶೋ ರೂಂನ ಮಾಲೀಕನನ್ನ ಬಂಧಿಸಲಾಗಿದೆ.
ಬೆಂಗಳೂರು: ಕದ್ದ ಕಾರುಗಳ ನಂಬರ್ ಬದಲಾಯಿಸಿ ಮಾರಾಟ ಮಾಡಿರುವ ಕುರಿತು ನಾವು ಆಗಾಗ ಕೇಳುತ್ತಿರುತ್ತೇವೆ. ಆದರೆ ಇದೀಗ ಬೆಂಗಳೂರಿನ ಪ್ರತಿಷ್ಠಿತ ಕಾರು ಶೋ ರೂಂ ಒಂದರಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ. ಜೆಡಿಎಸ್ ಎಂಎಲ್ಸಿ ಆಗಿರುವ ಭೋಜೇಗೌಡ ಅವರ ಕಾರಿನ ನಂಬರ್ ಬಳಸಿ, ಕದ್ದ ಕಾರನ್ನ ಮಾರಾಟ ಮಾಡಲು ಯತ್ನಿಸಲಾಗಿದೆ. ಇದೀಗ ಕಾರು ಶೋ ರೂಂ ಮಾಲೀಕ ಶಹಬಾಜ್ನನ್ನ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ.
ನಗರದ ಕೆಪಿಸಿಸಿ ಕಚೇರಿ ಬಳಿ ಇರುವ ಪ್ರತಿಷ್ಟಿತ ಕಾರು ಶೋರೂಂನ ಎದುರುಗಡೆ ಎಂಎಲ್ಸಿ ಕಾರಿನ ನಂಬರ್ ಇರುವ ಕಾರೊಂದು ನಿಂತಿತ್ತು. ಇದನ್ನ ನೋಡಿದ ಭೋಜೇಗೌಡ ಅವರ ಪಿಎ ಮಾದೇಶ್ ಶಾಕ್ ಆಗಿದ್ದಾರೆ. ಅನುಮಾನಗೊಂಡ ಮಾದೇಶ್ ಶೋರೂಂನಲ್ಲಿ ವಿಚಾರಿಸಿದ್ದಾರೆ. ಈ ವೇಳೆ ಕಾರು ಮಾರಾಟಕ್ಕಿಟ್ಟಿರುವ ಬಗ್ಗೆ ಗೊತ್ತಾಗಿದೆ.
ಕೂಡಲೇ ಎಂಎಲ್ಸಿ ಭೋಜೇಗೌಡ ಪಿಎ ಮಾದೇಶ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದು,. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಬಳಿಕ ಕದ್ದ ಕಾರುಗಳಿಗೆ ನಂಬರ್ ಚೇಂಜ್ ಮಾಡಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ