ಮಂಗಳೂರು: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ
ಸಿಡಿಲು ಬಡಿದು ನವವಿವಾಹಿತ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ನಿವಾಸಿ ಸೋಮಸುಂದರ್ (34) ಮೃತ ರ್ದುದೈವಿ. ಹತ್ತು ದಿನದ ಹಿಂದೆಯಷ್ಟೇ ವಿವಾಹವಾಗಿದ್ದ ಸೋಮಸುಂದರ್, ಸಂಜೆಯ ವೇಳೆ ಸುಬ್ರಮಣ್ಯ ಭಾಗದಲ್ಲಿ ಭಾರೀ ಸಿಡಿಲು ಬಡಿದಿದೆ.
ಮಂಗಳೂರು, ಮೇ.03: ಸಿಡಿಲು (lightning) ಬಡಿದು ನವವಿವಾಹಿತ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ನಿವಾಸಿ ಸೋಮಸುಂದರ್ (34) ಮೃತ ರ್ದುದೈವಿ. ಹತ್ತು ದಿನದ ಹಿಂದೆಯಷ್ಟೇ ವಿವಾಹವಾಗಿದ್ದ ಸೋಮಸುಂದರ್, ಸಂಜೆಯ ವೇಳೆ ಸುಬ್ರಮಣ್ಯ ಭಾಗದಲ್ಲಿ ಭಾರೀ ಸಿಡಿಲು ಬಡಿದಿದೆ. ಮಳೆ ಮುನ್ಸೂಚನೆ ಹಿನ್ನಲೆ ಅಂಗಳದಲ್ಲಿದ್ದ ಅಡಿಕೆ ರಾಶಿ ಮಾಡುತ್ತಿದ್ದ ವೇಳೆ ಸೋಮ ಸುಂದರ್ ಗೆ ಸಿಡಿಲು ಬಡಿದಿದ್ದು, ಆಸ್ಪತ್ರೆ ಗೆ ಸಾಗಿಸುವ ವೇಳೆ ಮೃತರಾಗಿದ್ದಾರೆ.
ಕಾರು ಓವರ್‌ಟೇಕ್ ವಿಚಾರಕ್ಕೆ ಗಲಾಟೆ, ಚಾಲಕನ ಮೇಲೆ ಹಲ್ಲೆ ಮಾಡಿ ಎಸ್ಕೇಪ್
ಬೆಂಗಳೂರು, ಕಾರು ಓವರ್‌ಟೇಕ್ ಮಾಡುವ ವಿಷಯವಾಗಿ ಗಲಾಟೆ ನಡೆದು, ಬಳಿಕ ಚಾಲಕನ ಮೇಲೆ ಹಲ್ಲೆ ಮಾಡಿ ಪರಾರಿಯಾದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಿದರಕಲ್ಲು ಬಳಿ ಇಂದು (ಮೇ.03) ಸಾಯಂಕಾಲ ನಡೆದಿದೆ.
ಇದನ್ನೂ ಓದಿ:ಬೆಂಗಳೂರು: ಗ್ರಾ.ಪಂಚಾಯತಿ ವಾಟರ್ಮ್ಯಾನ್ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ
ರಾಷ್ಟ್ರೀಯ ಹೆದ್ದಾರಿ4 ತುಮಕೂರು-ಬೆಂಗಳೂರು ಮಾರ್ಗವಾಗಿ ಎರಡು ಕಾರುಗಳು ಬರುತ್ತಿದ್ದು, ಈ ನಡುವೆ ಇನ್ನೋವಾ ಕಾರಿಗೆ ಶಿಫ್ಟ್ ಕಾರು ಚಾಲಕ ಓವರ್ ಟೇಕ್ ಮಾಡಿದ್ದ. ಇಷ್ಟಕ್ಕೆ ಕೋಪಗೊಂಡ ಇನ್ನೋವಾ ಕಾರಿನಲ್ಲಿದ್ದ ನಾಲ್ವರು ಶಿಫ್ಟ್ ಕಾರು ಚಾಲಕನಿಗೆ ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ.
ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್
ಇನ್ನು ಗಲಾಟೆ ಹಿನ್ನಲೆ ಸ್ಥಳೀಯರು ಸೇರುತ್ತಿದ್ದಂತೆ ಕಾರಿನ ಜೊತೆ ನಾಲ್ವರು ಪರಾರಿಯಾಗಿದ್ದಾರೆ. ಹೆದ್ದಾರಿಯಲ್ಲಿ ಗಲಾಟೆ ಹಾಗೂ ಹಲ್ಲೆಯಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಹಲ್ಲೆ ನಡೆಸಿ ಪರಾರಿಯಾದ ಇನ್ನೋವಾ ಕಾರಿನಲ್ಲಿದ್ದವರಿಗೆ ಪೊಲೀಸರ ಶೋಧ ನಡೆಸಿದ್ದಾರೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:25 pm, Fri, 3 May 24