ಹದಗೆಟ್ಟ ಬೆಂಗಳೂರು ರಸ್ತೆಗೆ ಮತ್ತೊಂದು ಬಲಿ: ಮಹಿಳೆ ದುರಂತ ಸಾವು

ಬೆಂಗಳೂರಿನ ಹುಳಿಮಾವಿನಲ್ಲಿ ಹದಗೆಟ್ಟ ರಸ್ತೆಗಳಿಂದಾಗಿ ಭೀಕರ ಅಪಘಾತವೊಂದು ನಡೆದಿದೆ. ದುರಂತದಲ್ಲಿ ಗೋಕಾಕ್ ಮೂಲದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಹಾಳಾದ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದ ಮಹಿಳೆ ಮೇಲೆ ಟಿಪ್ಪರ್ ಹರಿದಿದೆ. ಸದ್ಯ ಹುಳಿಮಾವು ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಕೇಸ್​​ ದಾಖಲಾಗಿದೆ.

ಹದಗೆಟ್ಟ ಬೆಂಗಳೂರು ರಸ್ತೆಗೆ ಮತ್ತೊಂದು ಬಲಿ: ಮಹಿಳೆ ದುರಂತ ಸಾವು
ಮಹಿಳೆ ಸಾವು
Edited By:

Updated on: Nov 20, 2025 | 9:44 PM

ಬೆಂಗಳೂರು, ನವೆಂಬರ್​ 20: ನಗರದಲ್ಲಿ ಹದಗೆಟ್ಟ ರಸ್ತೆಯಿಂದ ಮತ್ತೊಂದು ಬಲಿ (death) ಆಗಿದೆ. ಸ್ನೇಹಿತೆ ಜೊತೆಗೆ ತೆರಳುತ್ತಿದ್ದಾಗ ಬೈಕ್​ನಿಂದ ಬಿದ್ದ ಮಹಿಳೆ (woman) ಮೇಲೆ ಟಿಪ್ಪರ್​​ ಹರಿದು ಮೃತಪಟ್ಟಿರುವಂತಹ ಘಟನೆ ಹುಳಿಮಾವಿನ ಸರಸ್ವತಿಪುರಂನಲ್ಲಿ ನಡೆದಿದೆ. ಗೋಕಾಕ್​ ಮೂಲದ ಶಾಂತಮ್ಮ(46) ಮೃತ ಮಹಿಳೆ. ಹುಳಿಮಾವು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು?

ಶಾಂತಮ್ಮ ಅವರು ಕಮ್ಮನಹಳ್ಳಿಯಲ್ಲಿ ಮಗನ ಜೊತೆಗೆ ವಾಸವಿದ್ದರು. ಇಂದು ಸ್ನೇಹಿತೆ ಜೊತೆಗೆ ಬೈಕ್​ನಲ್ಲಿ ಹೊರಗಡೆ ತೆರಳುತ್ತಿದ್ದರು. ಈ ವೇಳೆ ಹಾಳಾದ ರಸ್ತೆಯಲ್ಲಿ ಹೋಗುತ್ತಿರುವಾಗ ನಿಯಂತ್ರಣ ತಪ್ಪಿ ಬೈಕ್​ನಿಂದ ಬಿದ್ದ ಶಾಂತಮ್ಮ ಮೇಲೆ ಹರಿದ ಟಿಪ್ಪರ್ ಹರಿದಿದೆ. ಹುಳಿಮಾವಿನ ಸರಸ್ವತಿಪುರಂನಲ್ಲಿ ಈ ಭೀಕರ ದುರಂತ ಸಂಭವಿಸಿದೆ.

ಬಿಎಂಟಿಸಿ ಬಸ್​​ಗೆ ಒಂದೇ ದಿನ ಇಬ್ಬರು ವೃದ್ಧರು ಬಲಿ

ಬೆಂಗಳೂರಿನಲ್ಲಿ ಇಂದು ಒಂದೇ ಬಿಎಂಟಿಸಿ ಬಸ್​ಗೆ ಇಬ್ಬರು ಬಲಿಯಾಗಿರುವಂತಹ ಘಟನೆ ನಡೆದಿದೆ. ಇಬ್ಬರೂ ಕೂಡ ವೃದ್ಧರು. ಬಿಎಂಟಿಸಿಯ ಡಿಪೋ– 2 ಶಾಂತಿನಗರಕ್ಕೆ ಸೇರಿದ ಡಿಸೇಲ್ ಬಸ್, ಎಸ್ಎಂವಿಟಿ ರೈಲ್ವೆ ನಿಲ್ದಾಣದಿಂದ ಸಿಲ್ಕ್ ಬೋರ್ಡ್​ಗೆ ಹೋಗುತ್ತಿದ್ದ KA-57-F2973 ನಂಬರಿನ ಬಸ್ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದ ವೃದ್ಧನ ತಲೆ ಮೇಲೆ ಹರಿದ ಪರಿಣಾಮ, ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 6-30 ರ ಸುಮಾರಿಗೆ ನಡೆದಿದೆ. 65 ವರ್ಷದ ವೆಂಕಟರಾಮಯ್ಯ ಮೃತ ದುದೈರ್ವಿ.

ಇದನ್ನೂ ಓದಿ: ಯಮರೂಪಿ ಬಿಎಂಟಿಸಿಗೆ ಮುಂದುವರಿದ ಬಲಿ: ಮಡಿವಾಳದಲ್ಲಿ ಬಸ್​​ ಡಿಕ್ಕಿಯಾಗಿ ವೃದ್ಧ ಸಾವು

ಇನ್ನು ಬಸ್ ಚಕ್ರಕ್ಕೆ ಸಿಲುಕಿ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ವಿಜಯನಗರ ಎಂಸಿ ಲೇಔಟ್ ಬಸ್ ಬಳಿ ನಡೆದಿದೆ. ಸುಶೀಲಾ (70) ಮೃತ ದುದೈರ್ವಿ. ಕೆಂಗೇರಿಯಿಂದ ಯಲಹಂಕಗೆ ಹೋಗುತ್ತಿದ್ದ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ KA-51-AH-4246 ನಿಂದ ಇಳಿದು ಬಲಭಾಗದ ರಸ್ತೆ ದಾಟುವಾಗ ತಾನು ಸಂಚಾರ ಮಾಡಿದ್ದ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದ ಪರಿಣಾಮ, ಬಸ್ ಬಲಭಾಗದ ಚಕ್ರ ಸುಶೀಲಮ್ಮ ತಲೆ ಮೇಲೆ ಹರಿದಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.