AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಮರೂಪಿ ಬಿಎಂಟಿಸಿಗೆ ಮುಂದುವರಿದ ಬಲಿ: ಮಡಿವಾಳದಲ್ಲಿ ಬಸ್​​ ಡಿಕ್ಕಿಯಾಗಿ ವೃದ್ಧ ಸಾವು

ಬೆಂಗಳೂರಿನ ಮಡಿವಾಳದಲ್ಲಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ 65 ವರ್ಷದ ವೃದ್ಧ ದುರ್ಮರಣ ಹೊಂದಿದ್ದಾರೆ. ಚಾಲಕರ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದ್ದು, ಪಾದಚಾರಿಗೆ ಬಸ್​ ಡಿಕ್ಕಿಯಾಗುವ ಮುನ್ನ ಎರಡು ವಾಹನಗಳಿಗೂ ಗುದ್ದಿತ್ತು ಎಂಬುದು ಗೊತ್ತಾಗಿದೆ. ಅತ್ತ ಕೊಪ್ಪಳದಲ್ಲಿ ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಯಮರೂಪಿ ಬಿಎಂಟಿಸಿಗೆ ಮುಂದುವರಿದ ಬಲಿ: ಮಡಿವಾಳದಲ್ಲಿ ಬಸ್​​ ಡಿಕ್ಕಿಯಾಗಿ ವೃದ್ಧ ಸಾವು
ಬಿಎಂಟಿಸಿ ಬಸ್​​ ಡಿಕ್ಕಿಯಾಗಿ ವೃದ್ಧ ಸಾವು
ಕಿರಣ್​ ಸೂರ್ಯ
| Edited By: |

Updated on: Nov 20, 2025 | 12:16 PM

Share

ಬೆಂಗಳೂರು/ ಕೊಪ್ಪಳ, ನವೆಂಬರ್​ 20: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಬಸ್​​ಗಳ ಅಪಘಾತ ಮೇಲಿಂದ ಮೇಲೆ ವರದಿಯಾಗುತ್ತಿದ್ದು, ಚಾಲಕರ ಅಜಾಗರೂಕತೆಗೆ ಅಮಾಯರು ಬಲಿಯಾಗುತ್ತಿದ್ದಾರೆ. ಈ ನಡುವೆ ಇಂತಹುದ್ದೇ ಮತ್ತೊಂದು ಘಟನೆ ಮಡಿವಾಳದ ಬಸ್​ ನಿಲ್ದಾಣದ ಬಳಿ ನಡೆದಿದೆ. ಬಿಎಂಟಿಸಿ ಬಸ್​​ ಡಿಕ್ಕಿಯಾದ ಪರಿಣಾಮ ಮಡಿವಾಳ ನಿವಾಸಿ 65 ವರ್ಷದ ವೆಂಕಟರಾಮಪ್ಪ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಚಾಲಕ ಮತ್ತು ನಿರ್ವಾಹಕನನ್ನು ವಶಕ್ಕೆ ಪಡೆಯಲಾಗಿದೆ.

ತರಕಾರಿ ವ್ಯಾಪಾರಿಯಾಗಿದ್ದ ವೆಂಕಟರಾಮಪ್ಪ ಮಡಿವಾಳ ಮಾರ್ಕೆಟ್​​ಗೆ ತರಕಾರಿ ತರಲು ಹೋಗಿದ್ದಾಗ ದುರಂತ ಸಂಭವಿಸಿದೆ. ಸೇಂಟ್​​ಜಾನ್ಸ್ ಆಸ್ಪತ್ರೆ ಶವಾಗಾರದಲ್ಲಿರುವ ಮೃತದೇಹ ಇರಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಪಘಾತಕ್ಕೆ ಬಿಎಂಟಿಸಿ ಬಸ್​​ ಚಾಲಕನ ನಿರ್ಲಕ್ಷ್ಯ ಕಾರಣ ಎನ್ನಲಾಗಿದ್ದು,ವೆಂಕಟರಾಮಪ್ಪ ಅವರಿಗೆ ಬಸ್​ ಡಿಕ್ಕಿಯಾಗುವ ಮುನ್ನ ಎರಡು ವಾಹ‌ಗಳಿಗೂ ಗುದ್ದಿದೆ ಎಂದು ದಕ್ಷಿಣ ವಿಭಾಗದ ಟ್ರಾಫಿಕ್ ಡಿಸಿಪಿ ಗೋಪಾಲ್ ಬ್ಯಾಕೋಡ್ ಹೇಳಿದ್ದಾರೆ. ಘಟನೆ ಬಗ್ಗೆ ತನಿಖೆ ಮುಂದುವರಿದಿರೋದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕುಡಿದು ಬರ್ತಿದ್ದ ಡ್ರೈವರ್​ಗಳಿಗೆ ಲಂಚ ಪಡೆದು ಡ್ಯೂಟಿ, ಅಧಿಕಾರಿಗಳಿಗೆ ಶಾಕ್​ಕೊಟ್ಟ BMTC

ಸಿಗ್ನಲ್​ ದಾಟುತ್ತಿದ್ದ 9 ವರ್ಷದ ಬಾಲಕಿಯ ಮೇಲೆ ಬಿಎಂಟಿಸಿ ಬಸ್​​ ಚಕ್ರ ಹರಿದ ಪರಿಣಾಮ ಆಕೆ ಮೃತಪಟ್ಟಿದ್ದ ಘಟನೆ ಇತ್ತೀಚೆಗಷ್ಟೇ ರಾಜಾಜಿನಗರದಲ್ಲಿ ನಡೆದಿತ್ತು. ಪಾಂಚ ಜನ್ಯ ವಿದ್ಯಾಪೀಠ ಶಾಲೆಯಲ್ಲಿ ಐದನೇ ತರಗತಿ ವ್ಯಾಸಂಗ ಮಾಡುತ್ತಿದ್ದ 9 ವರ್ಷದ ಭುವನ ಘಟನೆಯಲ್ಲಿ ಮೃತಪಟ್ಟಿದ್ದರು. ಆ ಘಟನೆ ಮಾಸುವ ಮುನ್ನವೇ ಈಗ ಮತ್ತೊಂದು ಅವಘಡ ನಡೆದಿದೆ.

2 ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ

Koppal Accident

ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ

2 ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದ ಜೂರಟಗಿ ಬಳಿ ನಡೆದಿದೆ. ನಾಗರಾಜ್ ಜಾಲಿಹಾಳ(30), ಬಸವರಾಜ(35) ಮೃತ ದುರ್ದೈವಿಗಳಾಗಿದ್ದಾರೆ. ನಾಗರಾಜ್ ರಾಯಚೂರು ಜಿಲ್ಲೆಯ ಸಿಂಧನೂರು ಮೂಲದವಾರಿದ್ದರೆ, ಬಸವರಾಜ ಕಲಬುರಗಿ ಜಿಲ್ಲೆಯ ಜೇವರ್ಗಿಯವರು ಎಂಬುದು ಗೊತ್ತಾಗಿದೆ. ಘಟನಾ ಸ್ಥಳಕ್ಕೆ ಕಾರಟಗಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ