ಸೆ.11 ಬೆಂಗಳೂರು ಬಂದ್; ಯಾರಿಗೆಲ್ಲ ಸಮಸ್ಯೆ, ಸಾರಿಗೆ ಸಂಘಟನೆಗಳ ಪ್ರಮುಖ ಬೇಡಿಕೆಗಳೇನು?
Bengaluru Bandh: ಆಟೋ, ಟ್ಯಾಕ್ಸಿ, ಖಾಸಗಿ ಬಸ್ ನಂಬಿ ರಸ್ತೆಗಿಳಿದ್ರೆ ನಿಮ್ಮ ಕಥೆ ಗೊವೀಂದಾ. ಸೋಮವಾರ ನಿಮಗೂ ಖಾಸಗಿ ವಾಹನ ಸಿಗಲ್ಲ, ನಿಮ್ಮ ಮಕ್ಕಳನ್ನ ಶಾಲೆಗೆ ಕರೆದೊಯ್ಯುಲು ಖಾಸಗಿ ವಾಹನ ಬರಲ್ಲ. ಇಂದು ರಾತ್ರಿ 12 ಗಂಟೆಯಿಂದಲೇ ಖಾಸಗಿ ವಾಹನಗಳು 32ಕ್ಕೂ ಹೆಚ್ಚು ಸಂಘಟನೆಯಡಿ 7 ಲಕ್ಷಕ್ಕೂ ಹೆಚ್ಚು ವಾಹನಗಳಿಂದ ಬಂದ್ ನಡೆಯಲಿದೆ.
ಸಾಂದರ್ಭಿಕ ಚಿತ್ರ
Follow us on
ಬೆಂಗಳೂರು, ಸೆ.10: ಸರ್ಕಾರದ ವಿರುದ್ಧ ಸಮರಕ್ಕೆ ಖಾಸಗಿ ಸಾರಿಗೆ ಸಂಘಟನೆಗಳು ಮುಂದಾಗಿವೆ(Bengaluru Bandh). ಹೀಗಾಗಿ ಸೋಮವಾರದಿಂದ(ಸೆ.11) ನಗರದ ಎಲ್ಲಾ ಆಟೋ, ಕ್ಯಾಬ್, ಖಾಸಗಿ ಬಸ್ಗಳ ಡ್ರೈವರ್ ಮತ್ತು ಓನರ್ಸ್ಗಳು ಬೆಂಗಳೂರು ಬಂದ್ಗೆ ಬೆಂಬಲ ಕೊಡಲು ಮುಂದಾಗಿದ್ದಾರೆ. ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳಲಾಗ್ತಿದೆ. ಇದೇ ತಿಂಗಳ ಸೋಮವಾರ ಸೆಪ್ಟೆಂಬರ್ 11 ರಂದು ಸಂಪೂರ್ಣ ಬೆಂಗಳೂರು ಸ್ತಬ್ಧವಾಗುವ ನಿರೀಕ್ಷೆ ಇದೆ. ಆಟೋ, ಟ್ಯಾಕ್ಸಿ, ಖಾಸಗಿ ಬಸ್ ನಂಬಿ ರಸ್ತೆಗಿಳಿದ್ರೆ ನಿಮ್ಮ ಕಥೆ ಗೊವೀಂದಾ. ಸೋಮವಾರ ನಿಮಗೂ ಖಾಸಗಿ ವಾಹನ ಸಿಗಲ್ಲ, ನಿಮ್ಮ ಮಕ್ಕಳನ್ನ ಶಾಲೆಗೆ ಕರೆದೊಯ್ಯುಲು ಖಾಸಗಿ ವಾಹನ ಬರಲ್ಲ. ಇಂದು ರಾತ್ರಿ 12 ಗಂಟೆಯಿಂದಲೇ ಖಾಸಗಿ ವಾಹನಗಳು 32ಕ್ಕೂ ಹೆಚ್ಚು ಸಂಘಟನೆಯಡಿ 7 ಲಕ್ಷಕ್ಕೂ ಹೆಚ್ಚು ವಾಹನಗಳಿಂದ ಬಂದ್ ನಡೆಯಲಿದೆ.
ಬಂದ್ ನ ರೂಪುರೇಷೆ ಹೇಗೆ?
ಭಾನುವಾರ ಮಧ್ಯ ರಾತ್ರಿಯಿಂದಲೇ ಸ್ತಬ್ದವಾಗಲಿದೆ ಖಾಸಗಿ ಸಾರಿಗೆ ಓಡಾಟ.
ಸೋಮವಾರ ಮಧ್ಯರಾತ್ರಿವರೆಗೆ ಅದೇ ರೀತಿ ಪರಿಸ್ಥಿತಿ ಕಾಪಾಡುವಂತೆ ಒಕ್ಕೂಟ ಮನವಿ.
ಏರ್ಪೋಟ್ ಟ್ಯಾಕ್ಸಿ ಸಂಪೂರ್ಣ ಸ್ಥಗಿತ ಗೊಳಿಸುವುದು.
ನಗರದೊಳಗೆ ಬೃಹತ್ ಮೆರವಣಿಗೆಗೆ ಪ್ಲ್ಯಾನ್.
ಮೆರವಣಿಗೆ ಬಳಿಕ ಫ್ರೀಡಂ ಪಾರ್ಕ್ ನಲ್ಲಿ ಶಕ್ತಿ ಪ್ರದರ್ಶನ.
ಪ್ರತಿಭಟನೆ, ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ಬೇರೆ ಜಿಲ್ಲೆಗಳ ಚಾಲಕರಿಗೂ ಮನವಿ.
ಯಾರಿಗೆಲ್ಲ ಹೆಚ್ಚು ಎಫೆಕ್ಟ್ ಸಾಧ್ಯತೆ?
ಸರ್ಕಾರಿ ಸಾರಿಗೆ ಬಿಟ್ಟು ಖಾಸಗಿ ಸಾರಿಗೆ ಬಳಕೆ ಮಾಡುವವರಿಗೆ ಹೆಚ್ಚು ಎಫೆಕ್ಟ್ ಸಾಧ್ಯತೆ.
ಏರ್ಪೋಟ್ ಟ್ಯಾಕ್ಸಿ ಸಂಪೂರ್ಣ ಸ್ಥಗಿತ ಹಿನ್ನೆಲೆ ಏರ್ಪೋಟ್ ಪ್ರಯಾಣಿರಿಗೆ ತೊಂದರೆಯಾಗವು ಸಾಧ್ಯತೆ.
ಓಲಾ, ಊಬರ್ ಬಳಕೆದಾರರಿಗೆ ಸಮಯಕ್ಕೆ ಸರಿಯಾಗಿ ಆಟೋ ಸಿಗದೇ ಇರಬಹುದು.
ಕಾರ್ಪೋರೆಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಬಸ್ ಗಳು ಕೂಡ ಬಂದ್ ಗೆ ಬೆಂಬಲ ಸೂಚಿಸಿದ್ದು ಇವು ರಸ್ತೆಗಿಳಿಯೋದು ಡೌಟ್. ಕಂಪನಿಗಳಿಗೆ ಹೋಗುವವರಿಗೆ ತೊಂದರೆ ಸಾಧ್ಯತೆ.
ಖಾಸಗಿ ವಾಹನಗಳ ಮೂಲಕ ಮಕ್ಕಳನ್ನ ಶಾಲೆಗೆ ಕಳುಹಿಸುವವರಿಗೂ ಬಿಸಿ ತಟ್ಟಲಿದೆ.
ಸಾರಿಗೆ ಬಸ್ ಬಿಟ್ಟು, ಖಾಸಗಿ ಬಸ್ ಗಳಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೆ.
ಗೂಡ್ಸ್ ವಾಹನಗಳನ್ನ ಬಳಕೆ ಮಾಡುವವರಿಗೆ ವಾಹನಗಳು ಸಿಗದೇ ಇರಬಹುದು.
ನಗರದಲ್ಲಿ 3 ಲಕ್ಷ ಆಟೋ, 1.5ಲಕ್ಷ ಟ್ಯಾಕ್ಸಿ, 20ಸಾವಿರ ಗೂಡ್ಸ್ ವಾಹನಗಳು, 5ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು, 80ಸಾವಿರ ಸಿಟಿ ಟ್ಯಾಕ್ಸಿ, ಕಾರ್ಪೋರೆಟ್ ಕಂಪನಿ ಬಸ್ ಗಳು ಬಂದ್
ಒಟ್ಟು 5ಲಕ್ಷಕ್ಕೂ ಹೆಚ್ಚು ವಾಹನಗಳು ಸ್ತಬ್ದವಾಗುವ ಸಾಧ್ಯತೆ