Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಆರ್​ಐ ಕುರಿತ ಚಾಟ್​ಜಿಪಿಟಿ ಮಾಹಿತಿಯಿಂದ ಅಚ್ಚರಿಗೊಂಡ ಬೆಂಗಳೂರು ಉದ್ಯಮಿ

ಬೆಂಗಳೂರಿನ ಕ್ಯಾಪಿಟಲ್‌ಮೈಂಡ್‌ನ ಸಂಸ್ಥಾಪಕ ಮತ್ತು ಸಿಇಒ ದೀಪಕ್ ಶೆಣೈ ಅವರು ಚಾಟ್‌ಜಿಪಿಟಿಯನ್ನು ಬಳಸಿಕೊಂಡು ಮಾಡಿದ ಆವಿಷ್ಕಾರವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಕೃತಕ ಬುದ್ಧಿಮತ್ತೆ (AI) ದೈನಂದಿನ ಜೀವನದ ಅವಿಭಾಜ್ಯ ಅಂಗವಾಗುತ್ತಿದೆ. ಆಗಾಗ ಬಳಕೆದಾರರಿಗೆ ಅವರ ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತದೆ. ಈಗ, ಬೆಂಗಳೂರು ಮೂಲದ ಸಿಇಒ ತಮ್ಮ ಆರೋಗ್ಯ ರಕ್ಷಣೆಯಲ್ಲಿ ಎಐನ ಸಾಮರ್ಥ್ಯದ ಕುರಿತು ಹಂಚಿಕೊಂಡ ಮಾಹಿತಿಯೊಂದು ಆನ್‌ಲೈನ್‌ನಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಎಂಆರ್​ಐ ಕುರಿತ ಚಾಟ್​ಜಿಪಿಟಿ ಮಾಹಿತಿಯಿಂದ ಅಚ್ಚರಿಗೊಂಡ ಬೆಂಗಳೂರು ಉದ್ಯಮಿ
Bengaluru Ceo Deepak Shenoy
Follow us
ಸುಷ್ಮಾ ಚಕ್ರೆ
|

Updated on:Feb 01, 2025 | 7:57 PM

ಬೆಂಗಳೂರು: ಬೆಂಗಳೂರು ಮೂಲದ ಕ್ಯಾಪಿಟಲ್‌ಮೈಂಡ್‌ನ ಸಂಸ್ಥಾಪಕ ಮತ್ತು ಸಿಇಒ ದೀಪಕ್ ಶೆಣೈ ಅವರು ಚಾಟ್‌ಜಿಪಿಟಿಯನ್ನು ಬಳಸಿಕೊಂಡು ಮಾಡಿದ ಆವಿಷ್ಕಾರವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಎಐ ಚಾಟ್‌ಬಾಟ್ ದೀಪಕ್​ ಶೆಣೈ ಅವರ ಎಂಆರ್‌ಐ ರಿಪೋರ್ಟ್​ನ ವಿಶ್ಲೇಷಣೆ ಮಾಡಿ ಅವರ ಮೊಣಕಾಲಿನ ಸಮಸ್ಯೆಯಿಂದಾಗಿ ಡೀಪ್ ಸ್ಕ್ವಾಟ್‌ ಮಾಡಬಾರದು ಎಂದು ಯಾವ ರೀತಿ ಎಚ್ಚರಿಕೆ ನೀಡಿತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. ಇದು ಇದೀಗ ಆನ್​ಲೈನ್​ನಲ್ಲಿ ಚರ್ಚೆಯಾಗುತ್ತಿದೆ. ಆರೋಗ್ತ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನವನ್ನು ಯಾವ ರೀತಿ ಬಳಸಬಹುದು ಎಂಬುದನ್ನು ಇದು ಸಾಬೀತುಪಡಿಸಿದೆ.

“ನನ್ನ ಎಂಆರ್‌ಐ ವರದಿಯ ಚಾಟ್‌ಜಿಪಿಟಿ ವಿಶ್ಲೇಷಣೆಯಿಂದ ನಾನು ಡೀಪ್ ಸ್ಕ್ವಾಟ್‌ಗಳನ್ನು ಮಾಡುವುದನ್ನು ನಿಲ್ಲಿಸಬೇಕು ಎಂದು ಇದೀಗ ತಿಳಿದುಬಂದಿದೆ. ನಾನು ಸ್ಕ್ವಾಟ್​ಗಳನ್ನು ಮಾಡಲು ತರಬೇತಿ ಪಡೆಯುತ್ತಿದ್ದರಿಂದ ಚಾಟ್​ಜಿಪಿಟಿಯ ಈ ಸಲಹೆ ತುಂಬಾ ಆಸಕ್ತಿದಾಯಕವೆನಿಸಿತು” ಎಂದು ದೀಪಕ್ ಶೆಣೈ ಎಕ್ಸ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಶಿವಲಿಂಗದ ಮೇಲೆ ಕಾಲಿಟ್ಟು ರೀಲ್ಸ್ ಮಾಡಿದ ಯುವಕ; ವಿಡಿಯೋ ವೈರಲ್ ಆಗುತ್ತಿದ್ದಂತೆ ಅರೆಸ್ಟ್!

ಕುತೂಹಲಕಾರಿ ಎಕ್ಸ್ ಬಳಕೆದಾರರು “ಈ ರೆಕಮಂಡೇಷನ್ ಏಕೆ ಬಂತು?” ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ದೀಪಕ್, “ನನಗೆ ಮೊಣಕಾಲಿನ ಸಮಸ್ಯೆ ಇತ್ತು. ವೈದ್ಯರು MRI ಮಾಡಿಸಿಕೊಳ್ಳಲು ಸೂಚಿಸಿದರು. ನಾನು ಫೋಟೋಗಳನ್ನು ಹಾಕಿದ್ದೇನೆ. ನನ್ನ ಮೊಣಕಾಲಿನ ಕ್ಯಾಪ್​ಗೆ ಹಾನಿಯಾಗಿದೆ. ಅದರ ವಿಶ್ಲೇಷಣೆಯಲ್ಲಿ ಚಾಟ್​ಜಿಪಿಟಿ ದೀರ್ಘವಾದ ಸ್ಕ್ವಾಟ್‌ಗಳನ್ನು ಮಾಡಬಾರದು ಎಂದು ನನಗೆ ಸೂಚಿಸಿದೆ. ನಾನಿನ್ನೂ ವೈದ್ಯರನ್ನು ಭೇಟಿಯಾಗಿಲ್ಲ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:56 pm, Sat, 1 February 25