ಬೆಂಗಳೂರು: ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್, ಸುಲಿಗೆ

ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ಮೂಲಕ ಸುಲಿಗೆ ಮಾಡುತ್ತಿದ್ದ ಆರು ಆರೋಪಿಗಳನ್ನು ಬೆಂಗಳೂರಿನ ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು: ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್, ಸುಲಿಗೆ
ಸಾಂದರ್ಭಿಕ ಚಿತ್ರ
Follow us
Prajwal Kumar NY
| Updated By: ವಿವೇಕ ಬಿರಾದಾರ

Updated on:Feb 01, 2025 | 10:39 AM

ಬೆಂಗಳೂರು, ಫೆಬ್ರವರಿ 01: ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ (Honeytrap) ಮೂಲಕ ಖೆಡ್ಡಾಕ್ಕೆ ಕೆಡವಿಕೊಂಡು ಸುಲಿಗೆ ಮಾಡುತ್ತಿದ್ದ ನಾಲ್ವರು ಮಹಿಳೆಯರು ಸೇರಿದಂತೆ ಆರು ಆರೋಪಿಗಳನ್ನು ಹೆಬ್ಬಾಳ ಠಾಣೆ  ಪೊಲೀಸರು (Hebbal Police) ಬಂಧಿಸಿದ್ದಾರೆ. ಗೀತಾ, ಮಂಜುಳಾ, ವಿಜಯಲಕ್ಷ್ಮಿ, ಲೀಲಾವತಿ, ಹರೀಶ್, ವೆಂಕಟೇಶ ಬಂಧಿತ ಆರೋಪಿಗಳು.

ಕೆಲ ದಿನಗಳ ಹಿಂದೆ ಸಂತ್ರಸ್ತ ಯುವಕನಿಗೆ ಆರೋಪಿ ಮಂಜುಳ ಪರಿಚಿತರಾಗಿದ್ದಳು. ಪರಸ್ಪರ ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದರು. ಸಂತ್ರಸ್ತ ಯುವಕ “ತಾನು ವಧು ಹುಡುಕುತ್ತಿದ್ದು ಕನ್ಯೆ ಇದ್ದರೆ ಹೇಳಿ” ಎಂದು ಮಂಜುಳಗೆ ಹೇಳಿದ್ದರು. ಸಂತ್ರಸ್ತ ಯುವಕ ಜನವರಿ 20 ರಂದು ಮಂಜುಳಾಗೆ ಕರೆ ಮಾಡಿ ವಿಚಾರಿಸಿದಾಗ, ಹೆಬ್ಬಾಳದ ತನ್ನ ಸ್ನೇಹಿತೆ ಮನೆಗೆ ಹೋದರೆ ಕನ್ಯೆ ತೋರಿಸುವುದಾಗಿ ಹೇಳಿದ್ದಳು.

ಅದರಂತೆ ಮಂಜುಳ ಸ್ನೇಹಿತೆ ವಿಜಯಲಕ್ಷ್ಮಿ ಮನೆಗೆ ಸಂತ್ರಸ್ತ ಯುವಕ ಹೋಗಿದ್ದನು. ಮನೆಯಲ್ಲಿ ಲೀಲಾವತಿ ಎಂಬ ಯುವತಿಯನ್ನು ಯುವಕನಿಗೆ ವಿಜಯಲಕ್ಷ್ಮಿ ಪರಿಚಯ ಮಾಡಿಸಿದ್ದಾಳೆ. “ಟೀ ತಯಾರಿಸುತ್ತಿರು ಬರುತ್ತೇನೆ” ಎಂದು ಹೇಳಿ, ಯುವಕನಿಂದ ಹಣ ಪಡೆದು ವಿಜಯಲಕ್ಷ್ಮಿ ಮನೆಯಿಂದ ತೆರಳಿದ್ದಾಳೆ.

ಇದನ್ನೂ ಓದಿ: ಸುಂದರಿಯ ಬಲೆಗೆ ಬಿದ್ದ 57ರ ವ್ಯಕ್ತಿ: ಪೊಲೀಸರ ಸೋಗಿನಲ್ಲಿ ಹನಿಟ್ರ್ಯಾಪ್​, ಪ್ರಮುಖ ಆರೋಪಿ ಸೇರಿ ಗ್ಯಾಂಗ್​ ಅರೆಸ್ಟ್

ಮನೆಯಲ್ಲಿ ಒಂಟಿಯಾಗಿದ್ದ ಸಂತ್ರಸ್ತ ಯುವಕ ಮತ್ತು ಲೀಲಾವತಿ ಇಬ್ಬರೇ ಇದ್ದಾರೆ. ಈ ವೇಳೆ ಪೊಲೀಸರ ಸೋಗಿನಲ್ಲಿ ಗೀತಾ, ಹರೀಶ ಮತ್ತು ವೆಂಕಟೇಶ ಬಂದಿದ್ದಾರೆ. ಮನೆಯಲ್ಲಿ ವೈಶ್ಯಾವಾಟಿಕೆ ನಡೆಸುತ್ತಿದ್ದೀರಾ? ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ಸಂತ್ರಸ್ತ ಯುವಕ, ಆರೋಪಿಗಳಿಗೆ ಪೋನ್ ಪೇ ಮೂಲಕ 50 ಸಾವಿರ ಹಣ ಕಳುಹಿಸಿದ್ದಾನೆ.

ಬಳಿಕ, ತಾನು ಮೋಸ ಹೋಗಿದ್ದೇನೆ ಎಂದು ತಿಳಿದ ಸಂತ್ರಸ್ತ ಯುವ, ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಆರು ಜನ ಆರೋಪಿಗಳನ್ನ ಬಂಧಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:38 am, Sat, 1 February 25

ಸೆಲೆಬ್ರಿಟಿಗಳಿಲ್ಲದೆ ಸರಳವಾಗಿ ಮದುವೆಯಾದ ಬಿಲಿಯನೇರ್ ಮಗ ಜೀತ್ ಅದಾನಿ
ಸೆಲೆಬ್ರಿಟಿಗಳಿಲ್ಲದೆ ಸರಳವಾಗಿ ಮದುವೆಯಾದ ಬಿಲಿಯನೇರ್ ಮಗ ಜೀತ್ ಅದಾನಿ
ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು
ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು
ರಕ್ಷಿತಾರನ್ನು ಮದುವೆಯಾದಾಗ ಅಂಬರೀಶ್ ಹೇಳಿದ್ದನ್ನು ಮೆಲಕು ಹಾಕಿದ ಪ್ರೇಮ್
ರಕ್ಷಿತಾರನ್ನು ಮದುವೆಯಾದಾಗ ಅಂಬರೀಶ್ ಹೇಳಿದ್ದನ್ನು ಮೆಲಕು ಹಾಕಿದ ಪ್ರೇಮ್
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ