ಬಿಎಂಟಿಸಿ ಬಸ್ ಹರಿದು ಮಹಿಳೆ ಸಾವು

ಬೆಂಗಳೂರಿನ ನಾಯಂಡನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರಿನ ಬಾಗಿಲು ಹಠಾತ್ತಾಗಿ ತೆರೆದ ಕಾರಣ ಬೈಕ್​ನಿಂದ ಕೆಳಗೆ ಬಿದ್ದ ಮಹಿಳೆಯ ಮೇಲೆ ಬಿಎಂಟಿಸಿ ಬಸ್ ಹರಿದಿದೆ. ಕಾಮಾಕ್ಷಿಪಾಳ್ಯದ 42 ವರ್ಷದ ಸರೋಜಾ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬ್ಯಾಟರಾಯನಪುರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಎಂಟಿಸಿ ಬಸ್ ಹರಿದು ಮಹಿಳೆ ಸಾವು
ಬಿಎಂಟಿಸಿ ಬಸ್​
Follow us
Jagadisha B
| Updated By: ವಿವೇಕ ಬಿರಾದಾರ

Updated on: Feb 02, 2025 | 7:40 AM

ಬೆಂಗಳೂರು, ಫೆಬ್ರವರಿ 02: ಬೈಕ್​​ನಿಂದ ಕೆಳಗೆ ಬಿದ್ದ ಮಹಿಳೆ ಮೇಲೆ ಬಿಎಂಟಿಸಿ (BMTC) ಹರಿದ ಘಟನೆ ಬೆಂಗಳೂರಿನ ನಾಯಂಡನಹಳ್ಳಿ ಬಳಿ ನಡೆದಿದೆ. ಕಾಮಾಕ್ಷಿಪಾಳ್ಯದ ನಿವಾಸಿ ಸರೋಜಾ (42) ಮೃತ ದುರ್ದೈವಿ. ಜ್ಞಾನಭಾರತಿಯಲ್ಲಿ ಮದುವೆ ಮುಗಿಸಿಕೊಂಡು ರಾತ್ರಿ 9.30 ರ ಸುಮಾರಿಗೆ ಹೋಂಡಾ ಆ್ಯಕ್ಟಿವಾದಲ್ಲಿ ಸೋದರನ ಜೊತೆ ಬೈಕ್​ನಲ್ಲಿ ಸರೋಜ ಮನೆಗೆ ಹೊರಟಿದ್ದರು.

ದಾರಿಯಲ್ಲಿ ಮುಂದೆ ನಿಂತಿದ್ದ ಕಾರಿನ ಡೋರ್ ಏಕಾಏಕಿ ತೆರೆದಿದೆ. ಇದರಿಂದ, ಡೋರ್​​ಗೆ ಟಚ್ ಆಗಿ ಬೈಕ್​ನ ಹಿಂಬದಿ ಕುಳತಿದ್ದ ಸರೋಜಾ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂದೆ ಬರುತ್ತಿದ್ದ ಬಿಎಂಟಿಸಿ ಬಸ್ ಸರೋಜಾ ಮೇಲೆ ಹರಿದಿದೆ. ಸರೋಜಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

2024ರಲ್ಲಿ ಒಂದೇ ತಿಂಗಳಲ್ಲಿ 4 ಸಾವು

ಅಕ್ಟೋಬರ್ 09 : ಬಿಎಂಟಿಸಿಗೆ ಮೂರು ವರ್ಷದ ಮಗು ಬಲಿ

ಅಕ್ಟೋಬರ್ 14 : ಬಸ್​ ಡಿಕ್ಕಿಯಾಗಿ ಇಂಜಿನಿಯರಿಂಗ್​ ವಿದ್ಯಾರ್ಥಿ ಸಾವು

ಅಕ್ಟೋಬರ್ 22 : ಬೈಕ್​ಗೆ ಬಸ್​ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

ಅಕ್ಟೋಬರ್ 29 : ಬಿಎಂಟಿಸಿ ಬಸ್​ ಡಿಕ್ಕಿಯಾಗಿ ಬೈಕ್​ ಸವಾರ ಬಲಿ

ಡಿಸೆಂಬರ್ 28 : ಬಿಎಂಟಿಸಿ ಬಸ್​ ಡಿಕ್ಕಿಯಾಗಿ ಪಾದಚಾರಿ ಮಹಿಳೆ ಸಾವು

ಇದನ್ನೂ ಓದಿ: ಬಿಎಂಟಿಸಿ ಬಸ್​ ಚಾಲಕನ ಸಡನ್ ಬ್ರೇಕ್​​ಗೆ ಆಯತಪ್ಪಿ ಬಿದ್ದ ಮಹಿಳಾ ಕಂಡಕ್ಟರ್

ಮನೆ ಮುಂದೆ ನಿಲ್ಲಿಸಿದ್ದ ಬೈಕ್​ ಕಳ್ಳತನ

ಬೆಂಗಳೂರಿನ ಸಾರಕ್ಕಿಯ 3ನೇ ಮುಖ್ಯರಸ್ತೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್​ ಕಳ್ಳತನವಾಗಿದೆ. ಶನಿವಾರ ನಸುಕಿನ ಜಾವ 3.40ರ ಸುಮಾರಿಗೆ ರಘು ಎಂಬುವರಿಗೆ ಸೇರಿದ ಬೈಕ್ ಕಳ್ಳತನವಾಗಿದೆ. ಕಳ್ಳ ಬೈಕ್​ ಕದಿಯುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಬೈಕ್​ ಮಾಲೀಕ ರಘುರಿಂದ ಜೆ.ಪಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ತಬ್ಬಿ ಬೀಳ್ಕೊಟ್ಟ ಫ್ರಾನ್ಸ್​ ಅಧ್ಯಕ್ಷ
ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ತಬ್ಬಿ ಬೀಳ್ಕೊಟ್ಟ ಫ್ರಾನ್ಸ್​ ಅಧ್ಯಕ್ಷ
ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ
ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ
ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ
ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ!
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ!
ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್
ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್
ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ
ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ
ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್,  ಬಡ್ಡಿ ಯಲ್ಲಪ್ಪನಾದ!
ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್,  ಬಡ್ಡಿ ಯಲ್ಲಪ್ಪನಾದ!
ಪತ್ನಿಗೆ ಸಿಲ್ಕ್​ ಸೀರೆ ಖರೀದಿಸಿದ ಡಿಕೆ ಶಿವಕುಮಾರ್: ಬೆಲೆ ಎಷ್ಟು ಗೊತ್ತಾ?
ಪತ್ನಿಗೆ ಸಿಲ್ಕ್​ ಸೀರೆ ಖರೀದಿಸಿದ ಡಿಕೆ ಶಿವಕುಮಾರ್: ಬೆಲೆ ಎಷ್ಟು ಗೊತ್ತಾ?
ಫ್ರಾನ್ಸ್​ ಮಹಾಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಪ್ರಧಾನಿ ಮೋದಿ ನಮನ
ಫ್ರಾನ್ಸ್​ ಮಹಾಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಪ್ರಧಾನಿ ಮೋದಿ ನಮನ
ದುಷ್ಕೃತ್ಯ ನಿಲ್ಲಿಸಿ ಮುಖ್ಯವಾಹಿನಿಗೆ ಬರುವ ಪ್ರಯತ್ನದಲ್ಲಿದ್ದ ಬಾಗಪ್ಪ
ದುಷ್ಕೃತ್ಯ ನಿಲ್ಲಿಸಿ ಮುಖ್ಯವಾಹಿನಿಗೆ ಬರುವ ಪ್ರಯತ್ನದಲ್ಲಿದ್ದ ಬಾಗಪ್ಪ