ಬೆಂಗಳೂರು: ಗಣೇಶ ಮೂರ್ತಿ ವಿಸರ್ಜನೆಗೆ 462 ಸಂಚಾರಿ ಟ್ಯಾಂಕರ್, 41 ಕೆರೆಗಳನ್ನು ಗುರುತಿಸಿದ ಬಿಬಿಎಂಪಿ

|

Updated on: Sep 06, 2024 | 9:34 AM

ಗಣೇಶ ಹಬ್ಬ ಬಂತೆಂದರೆ ಸಾಕು, ಬೆಂಗಳೂರಿನಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಯೇ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಇದೀಗ ಗಣೇಶ ಮೂರ್ತಿಗಳ ವಿಸರ್ಜನೆಗೆ ಬಿಬಿಎಂಪಿ 462 ಸಂಚಾರಿ ಟ್ಯಾಂಕರ್, 41 ಕೆರೆಗಳನ್ನು ಗುರುತಿಸಿದಿದೆ. ಸಂಚಾರಿ ಟ್ಯಾಂಕರ್​ಗಳು ಮತ್ತು ಕೆರೆಗಳ ವಿವರ ಇಲ್ಲಿದೆ.

ಬೆಂಗಳೂರು: ಗಣೇಶ ಮೂರ್ತಿ ವಿಸರ್ಜನೆಗೆ 462 ಸಂಚಾರಿ ಟ್ಯಾಂಕರ್, 41 ಕೆರೆಗಳನ್ನು ಗುರುತಿಸಿದ ಬಿಬಿಎಂಪಿ
ಬೆಂಗಳೂರು: ಗಣೇಶ ಮೂರ್ತಿ ವಿಸರ್ಜನೆಗೆ 462 ಸಂಚಾರಿ ಟ್ಯಾಂಕರ್, 41 ಕೆರೆಗಳನ್ನು ಗುರುತಿಸಿದ ಬಿಬಿಎಂಪಿ
Follow us on

ಬೆಂಗಳೂರು, ಸೆಪ್ಟೆಂಬರ್ 6: ಗಣೇಶ ಚತುರ್ಥಿ ಹಬ್ಬದ ಆಚರಣೆಗೆ ಬೆಂಗಳೂರು ನಗರ ಸಿದ್ಧವಾಗುತ್ತಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದಾದ್ಯಂತ ಗಣಪತಿ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಿದೆ. ಬಿಬಿಎಂಪಿಯು ಬೆಂಗಳೂರಿನಾದ್ಯಂತ ಗಣಪತಿ ಮೂರ್ತಿ ವಿಸರ್ಜನೆಗೆ 462 ಸಂಚಾರಿ ಟ್ಯಾಂಕರ್‌ಗಳನ್ನು ಸಿದ್ಧಪಡಿಸಿದೆ.

ನಾಗರೀಕರು ಈ ಸೌಲಭ್ಯಗಳನ್ನು ಪಡೆದುಕೊಂಡು ಮೂರ್ತಿಗಳನ್ನು ಈ ಟ್ಯಾಂಕರ್​ಗಳಲ್ಲಿ ವಿಸರ್ಜಿಸಬಹುದು. ಅಥವಾ ಗಣೇಶ ಮೂರ್ತಿ ವಿಸರ್ಜನೆಗೆ ಗುರುತಿಸಿರುವ ಹತ್ತಿರದ ಕಲ್ಯಾಣಿ ಅಥವಾ ಕೆರೆಗೆ ವಿಸರ್ಜನೆ ಮಾಡಬಹುದು ಎಂದು ಬಿಬಿಎಂಪಿ ತಿಳಿಸಿದೆ. ಈ ಉದ್ದೇಶಕ್ಕಾಗಿ ಸುಮಾರು 41 ಕೆರೆಗಳನ್ನು ಗುರುತಿಸಲಾಗಿದೆ ಮತ್ತು ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ತಾತ್ಕಾಲಿಕ ಕಲ್ಯಾಣಿಗಳನ್ನು ನಿರ್ಮಾಣ ಮಾಡಲಾಗಿದೆ.

ಬೆಂಗಳೂರು ಪೂರ್ವ ವಲಯದಲ್ಲಿ ಅತಿ ಹೆಚ್ಚು ಸಂಚಾರಿ ಟ್ಯಾಂಕರ್‌ಗಳ (138) ವ್ಯವಸ್ಥೆ ಮಾಡಲಾಗಿದೆ. ನಂತರ ಪಶ್ಚಿಮ ವಲಯದಲ್ಲಿ (84) ಹೆಚ್ಚಿನ ಟ್ಯಾಂಕರ್​ಗಳ ವ್ಯವಸ್ಥೆ ಮಾಡಲಾಗಿದೆ.

ಪೆಂಡಾಲ್​ಗೆ ಅರ್ಜಿ ಸಲ್ಲಿಸಲು 63 ಏಕ ಗವಾಕ್ಷಿ ಕೇಂದ್ರಗಳ ಸ್ಥಾಪನೆ

ಸಾರ್ವಜನಿಕ ಗಣೇಶೋತ್ಸವಗಳ ಆಯೋಜನೆಗೆ ಪೆಂಡಾಲ್​ ಹಾಕಲು ಅನುಮತಿಗಾಗಿ ಅರ್ಜಿ ಸಲ್ಲಿಸಲು ಬೆಂಗಳೂರಿನಾದ್ಯಂತ 63 ಏಕ ಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. ಗಣೇಶೋತ್ಸವಗಳ ಆಯೋಜಕರು ಈ ಕೇಂದ್ರಗಳ ಮೂಲಕ ಅನುಮತಿಗಾಗಿ ಅರ್ಜಿ ಸಲ್ಲಿಸಬಹುದು ಮತ್ತು ನಗರದಲ್ಲಿ ಗಣೇಶ ಮಂಟಪವನ್ನು ಸ್ಥಾಪಿಸಲು ಇದು ಕಡ್ಡಾಯವಾಗಿದೆ ಎಂದು ಬಿಬಿಎಂಪಿ ಹೇಳಿದೆ.

ಇದನ್ನೂ ಓದಿ: ಗಣೇಶ ಚತುರ್ಥಿ: ಸೆಪ್ಟೆಂಬರ್​ 07 ರಂದು ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ

ಗಣೇಶೋತ್ಸವಗಳ ಆಯೋಜನೆಗೆ ಪೆಂಡಾಲ್ ಸ್ಥಾಪನೆಗೆ ಸಲ್ಲಿಕೆಯಾಗುವ ಅರ್ಜಿಗಳ ಪರಿಶೀಲನೆ ಸಂಬಂಧ ಬಿಬಿಎಂಪಿ ನೋಡಲ್ ಅಧಿಕಾರಿಗಳನ್ನು ನೇಮಿಸಿದೆ ಮತ್ತು ಪೆಂಡಾಲ್‌ಗಳು ಬರುವ ಪ್ರದೇಶವನ್ನು ಪರಿಶೀಲಿಸಲು ಪೊಲೀಸ್ ಮತ್ತು ಬೆಸ್ಕಾಂ ಅಧಿಕಾರಿಗಳೊಂದಿಗೆ ತಂಡವನ್ನು ರಚಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ