ಬೆಂಗಳೂರು: ಟಾಟಾ ಏಸ್ ಚಾಲಕನಿಂದ ಡ್ರ್ಯಾಗರ್ (dagger) ಹಿಡಿದು ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿರುವಂತಹ ಘಟನೆ ರಾಮಮೂರ್ತಿನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ. ಮೊಬೈಲ್ನಲ್ಲಿ ಮಾತಾಡುತ್ತಾ ಸ್ಕೂಟರ್ಗೆ ಟಾಟಾ ಏಸ್ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಇದನ್ನು ಪ್ರಶ್ನೆ ಮಾಡಿದ್ದ ಪ್ರಕಾಶ್ ಎಂಬುವರಿಗೆ ಚಾಲಕನಿಂದ ಬೆದರಿಕೆ ಹಾಕಲಾಗಿದೆ. ಘಟನೆ ಕುರಿತು ಪೊಲೀಸ್ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿರುವ ಸವಾರ ಪ್ರಕಾಶ್, ವಿಡಿಯೋ ಸಮೇತ ದೂರು ನೀಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕಳ್ಳತನವನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದ ಕದೀಮನನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ವೇಲೂರು ನಿವಾಸಿ ದೀನ್ ದಯಾಳನ್ (48) ಬಂಧಿತ ಆರೋಪಿ. ತಮಿಳುನಾಡಿನಲ್ಲಿ ಕಳ್ಳತನ ಕೇಸ್ನಲ್ಲಿ ಅಲೆದು ಸಾಕಾಯ್ತು ಅಂತ ಬೆಂಗಳೂರಿನಲ್ಲಿ ಕೇಸ್ ಮಾಡಲಾಗಿದೆ. ಆರೋಪಿ ಲಾರಿ ಕದ್ದು ಪೊಲೀಸರ ಬಲೆಗೆ ಬಿದಿದ್ದಾನೆ.
ಕುಟುಂಬ ನಿರ್ವಹಣೆಗೆಂದೆ ಕಳ್ಳತನ ಮಾಡುತ್ತಿದ್ದ. ಬಂಧಿತ ಆರೋಪಿಗೆ ಇಬ್ಬರ ಹೆಂಡತಿಯರು. ಈ ಹಿಂದೆ ವೇಲೂರಿನಲ್ಲಿ ರೋಡ್ ರೋಲರ್ ಸಹ ಕದ್ದು ಸಿಕ್ಕಿ ಬಿದ್ದಿದ್ದ. ಬಳಿಕ ಬೆಂಗಳೂರಿನಲ್ಲಿ ಲಾರಿ ಕಳ್ಳತನ ಮಾಡಿದ್ದ. ಕಳ್ಳತನವಾದ ಬೆನ್ನಲ್ಲೆ ಸಿಸಿಟಿವಿಗಳ ಬೆನ್ನು ಬಿದ್ದ ಪೊಲೀಸರು ಕೃತ್ಯ ನಡೆದ 11 ಗಂಟೆಯಲ್ಲೇ ಆರೋಪಿಯನ್ನು ಬಂಧಿಸಲಾಗಿದೆ. ಕೊಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬಾಗಲಕೋಟೆ: ಮಕ್ಕಳ ಕಳ್ಳರೆಂದು ಭಾವಿಸಿ ಕಾರಿನಲ್ಲಿದ್ದವರನ್ನು ಬೆನ್ನತ್ತಿದ ಜನರು ಬಳಿಕ ಕಾರಿಗೆ ಬೆಂಕಿ ಹಚ್ಚಿದ ಘಟನೆ ತಾಲ್ಲೂಕಿನ ಖಜ್ಜಿಡೋಣಿ ಗ್ರಾಮದಲ್ಲಿರುವ ಬಾಗಲಕೋಟೆ ಬೆಳಗಾವಿ ಹೆದ್ದಾರಿ ಬಳಿ ನಡೆದಿದೆ. ಕಾರಿನಲ್ಲಿರುವ ಪ್ರಯಾಣಿಕರು ಮಕ್ಕಳ ಕಳ್ಳರೆಂದು ಭಾವಿಸಿದ ಹನರು ಚಿಕ್ಕೂರು ಗ್ರಾಮದಿಂದ ಚೇಸ್ ಮಾಡಲು ಆರಂಭಿಸಿದ್ದಾರೆ. ಈ ವೇಳೆ ಕಾರು ವೇಗವಾಗಿ ಖಜ್ಜಿಡೋಣಿ ಗ್ರಾಮದ ಕಡೆ ಬಂದಿದೆ. ಆದರೂ ಬೆನ್ನುಬಿಡಿದ ಜನರು ಕಾರನ್ನು ತಡೆದು ಪ್ರಶ್ನಿಸಿದ್ದಾರೆ.
ಈ ವೇಳೆ ಕೆಲವು ಕಿಡಿಗೇಡಿಗಳು ಕಾರಿಗೆ ಬೆಂಕಿ ಹಚ್ಚಿದ್ದು, ಸುಟ್ಟು ಕರಕಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಲೋಕಾಪುರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಕಾರಿನಲ್ಲಿದ್ದ ಪ್ರಯಾಣಿಕರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು: ಚಿಕ್ಕ ಮಕ್ಕಳು ಚಾಕೋಲೆಟ್, ಚಿಪ್ಸ್ ಸೇರಿದಂತೆ ತಿಂಡಿ ತಿನಿಸುಗಳಿಗೆ ಹಠ ಮಾಡುವುದನ್ನ ನಾವು ನೋಡಿದ್ದೇವೆ. ಇನ್ನು ಕೇಳಿದ್ದನ್ನು ಕೊಡಿಸಲಿಲ್ಲ ಎಂದು ಹಠ ಹಿಡಿಯುವುದು, ಅಳುವುದು ಸಾಮಾನ್ಯ. ಆದ್ರೆ, ಇಲ್ಲೋರ್ವ ಎರಡು ಮಕ್ಕಳ ತಾಯಿಯೊಬ್ಬರು, ಪತಿ ಚಾಕೊಲೇಟ್ ತಂದು ಕೊಡಲಿಲ್ಲ ಎಂದು ಬೇಸತ್ತು ಪತ್ನಿ ಆತ್ಮಹತ್ಯೆಶ್ರ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಹೌದು.. ಈ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನಂದಿನಿ(30) ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಇದನ್ನೂ ಓದಿ: ಆರೋಪಿ ಪುನೀತ್ ಕೆರೆಹಳ್ಳಿ ತಂಡವನ್ನು ರಾಜಸ್ಥಾನದಿಂದ ರಾಮನಗರಕ್ಕೆ ಕರೆತರಲು ಪೊಲೀಸ್ ಸಿದ್ಧತೆ
6 ವರ್ಷದ ಹಿಂದೆ ಮದುವೆಯಾಗಿದ್ದ ಮೃತ ನಂದಿನಿಗೆ ಇಬ್ಬರು ಮಕ್ಕಳಿದ್ದಾರೆ. ಇನ್ನು ನಂದಿನಿ ಪತಿ ಸಲೂಲ್ನಲ್ಲಿ ಕೆಲಸ ಮಾಡಿಕೊಂಡಿದ್ದ. ಅದರಂತೆ ನಿನ್ನೆ(ಏಪ್ರಿಲ್ 06) ಬೆಳಗ್ಗೆ ಪತಿ ಕೆಲಸಕ್ಕೆ ಹೋಗುವಾಗ ಚಾಕೋಲೆಟ್ ತೆಗೆದುಕೊಂಡು ಬರುವಂತೆ ಹೇಳಿದ್ದಳಂತೆ. ಆದ್ರೆ, ಮಧ್ಯಾಹ್ನವಾದರೂ ಪತಿ ಚಾಕೋಲೆಟ್ ತಂದು ಕೊಟ್ಟಿಲ್ಲ. ಅಲ್ಲದೇ ಫೋನ್ ಮಾಡಿದ್ದರೂ ಪತಿ ಸ್ವೀಕರಿಸಿಲ್ವಂತೆ. ಇದರಿಂದ ಮನನೊಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.