BMTC Accident: ಕಿಲ್ಲರ್ ಬಿಎಂಟಿಸಿ ಬಸ್‌ಗೆ ಮತ್ತೊಬ್ಬರು ಬಲಿ, ಮೂವರಿಗೆ ಗಾಯ

ನಾಗವಾರ-ಯಲಹಂಕ ಮಾರ್ಗದಲ್ಲಿ ಸರಣಿ ಅಪಘಾತವಾಗಿದೆ. ಎರಡು ಕಾರು, ದ್ವಿಚಕ್ರ ವಾಹನಕ್ಕೆ ಬಸ್‌ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ಓರ್ವರು ಮೃತಪಟ್ಟಿದ್ದಾರೆ.

BMTC Accident: ಕಿಲ್ಲರ್ ಬಿಎಂಟಿಸಿ ಬಸ್‌ಗೆ ಮತ್ತೊಬ್ಬರು ಬಲಿ, ಮೂವರಿಗೆ ಗಾಯ
ಕಿಲ್ಲರ್ ಬಿಎಂಟಿಸಿ ಬಸ್‌ಗೆ ಮತ್ತೊಬ್ಬರು ಬಲಿ
Follow us
TV9 Web
| Updated By: ಆಯೇಷಾ ಬಾನು

Updated on:Jan 28, 2023 | 10:08 AM

ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಬಸ್​ಗಳಿಂದ(BMTC Accident) ಸಾವು ಸಂಭವಿಸುತ್ತಿರುವ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಕೆಲ ದಿನಗಳ ಹಿಂದಷ್ಟೇ ಯಶವಂತಪುರದ ಸತ್ವ ಅಪಾರ್ಟ್​​ಮೆಂಟ್​ ಬಳಿ ಅಪಘಾತ ಸಂಭವಿಸಿತ್ತು. ಈಗ ಮತ್ತೆ ಕಿಲ್ಲರ್ ಬಿಎಂಟಿಸಿ ಬಸ್​ಗೆ ಮತ್ತೊಂದು ಬಲಿ ಸಂಭವಿಸಿದೆ. ನಾಗವಾರ-ಯಲಹಂಕ ಮಾರ್ಗದಲ್ಲಿ ಭಾರತೀಯ ಸಿಟಿ ಕ್ರಾಸ್ ಬಳಿ ಸರಣಿ ಅಪಘಾತವಾಗಿದೆ. ಎರಡು ಕಾರು, ದ್ವಿಚಕ್ರ ವಾಹನಕ್ಕೆ ಬಸ್‌ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ಓರ್ವರು ಮೃತಪಟ್ಟಿದ್ದಾರೆ. ಬೈಕ್ ಸವಾರ ಅಯೂಬ್ (35) ಮೃತ ದುರ್ದೈವಿ. ಸಂಜೆ 7.30 ರ ಸುಮಾರಿಗೆ ಘಟನೆ ನಡೆದಿದೆ.

ಕೆಲ ದಿನಗಳ ಹಿಂದೆ ವನಿತಾ ಎಂಬ ಮಹಿಳೆ ಕೂಡ ಬಿಎಂಟಿಸಿ ಬಸ್​ ಚಾಲಕನ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದರು. ಫೋನ್ ಕರೆ ಬಂದಿತ್ತು ಎಂಬ ಕಾರಣಕ್ಕೆ ಗಾಡಿ ಸೈಡಿಗೆ ಹಾಕಿ ವಿನುತಾ ಮಾತನಾಡುತ್ತಿದ್ದರು. ಈ ವೇಳೆ ಹಿಂದೆಯೇ ಬಸ್ ನಿಲ್ದಾಣದಲ್ಲಿ ಜನರನ್ನು ಹತ್ತಿಸಿ ಕೊಳ್ಳುತ್ತಿದ್ದ ಬಸ್ ಚಾಲಕ ಏಕಾಏಕಿ ಬಸ್ ಮೂವ್ ಮಾಡಿದ್ದ. ಆಗ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಈಗ ಮತ್ತೆ ಬಿಎಂಟಿಸಿ ಬಸ್​ಗೆ ಮತ್ತೊಂದು ಜೀವ ಬಲಿಯಾಗಿದೆ.

ಇದನ್ನೂ ಓದಿ:  Bengaluru Accident: ಖಾಸಗಿ ಬಸ್​ ಡಿಕ್ಕಿ ಹೊಡೆದು ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು

ನಾಗವಾರ ಹಾಗೂ ಯಲಹಂಕ ಮಾರ್ಗವಾಗಿ ಸಂಚರಿಸ್ತಿದ್ದ 290ed ಬಸ್ ಬೆಳ್ಳಳ್ಳಿ ಕಡೆಯಿಂದ ಹೆಗಡೆನಗರ ಮಾರ್ಗವಾಗಿ ಹೊಗ್ತಿತ್ತು. ಇದೇ ಸಮಯದಲ್ಲಿ ಭಾರತೀಯ ಸಿಟಿ ಜಂಕ್ಷನ್ ಬಳಿ ಟ್ರಾಫಿಕ್ ವಾರ್ಡನ್ ಸೂಚನೆ ಮೇರೆಗೆ ಬೈಕ್​ಗಳು ನಿಂತಿದ್ದವು. ಈ ವೇಳೆ ಹಿಂದೆಯಿಂದ ಅತೀ ವೇಗದಲ್ಲಿ ಬಂದ ಬಿಎಂಟಿಸಿ ಬಸ್, ಚಾಲಕನ ನಿಯಂತ್ರಣ ತಪ್ಪಿ 2 ಕಾರುಗಳಿಗೆ ಡಿಕ್ಕಿ ಹೊಡೆದಿದೆ ನಂತರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ನಾಲ್ವರಿಗೆ ಗಾಯಗಳಾಗಿದ್ದು ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅಯೂಬ್ ಮೃತಪಟ್ಟಿದ್ದಾರೆ. ರಫಿಯುಲ್ಲಾ ಖಾನ್, ಮುಸಾದ್ಧೀಕ್, ಮುನ್ನಾವರ್ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕ ಹಾಗೂ ಬಸ್​ನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿದ್ದಾಗಿ ಚಾಲಕ ಗೋವಿಂದರಾಜು ಹೇಳಿಕೆ ನೀಡಿದ್ದಾರೆ.

ಸಂಚಾರಿ ಪೊಲೀಸರ ಬೇಜವಾಬ್ದಾರಿ ಬಗ್ಗೆ ಸ್ಥಳೀಯರ ಆಕ್ರೋಶ

ಘಟನೆಯ ಪ್ರತ್ಯಕ್ಷದರ್ಶಿ ನವೀದ್ ಸಂಚಾರಿ ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ದಿನಕ್ಕೆ ಈ ಸರ್ಕಲ್ ನಲ್ಲಿ ಐದಾರು ಅಪಘಾತ ಕಾಮನ್. ಈ ಸರ್ಕಲ್ ನಲ್ಲಿ ಸರಿಯಾಗಿ ಸಂಚಾರಿ ಪೊಲೀಸರು ಇರುವುದಿಲ್ಲ. ಒಂದು ಹಂಪ್ ಇಲ್ಲ. ಸಿಗ್ನಲ್ ಇಲ್ಲ. ದಿನ ಅಪಘಾತ ನಡೆತ್ತಾನೇ ಇರುತ್ತೆ. ಖಾಸಗಿ ಸೆಕ್ಯೂರಿಟಿಗಳು ಸಿಗ್ನಲ್‌ನಲ್ಲಿ ಮ್ಯಾನೇಜ್ ಮಾಡ್ತಾರೆ. ನಿನ್ನೆ ಆ ಸಿಬ್ಬಂದಿಗೂ ಅಪಘಾತದಲ್ಲಿ ಗಾಯ ಆಗಿದೆ. ಸಂಚಾರಿ ಪೊಲೀಸರು ಈ ಸರ್ಕಲ್ ಬಗ್ಗೆ ಗಮನ ಹರಿಸಬೇಕು ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:07 am, Sat, 28 January 23

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ