ಮಂಡ್ಯ: ತಲೆ ಮೇಲೆ ವಿದ್ಯುತ್ ಕಂಬ ಬಿದ್ದು ರೈತ ಸ್ಥಳದಲ್ಲೇ ಸಾವು; ಪರಿಹಾರಕ್ಕಾಗಿ ಗ್ರಾಮಸ್ಥರ ಆಗ್ರಹ
ಮದ್ದೂರು ತಾಲೂಕಿನ ಚೆನ್ನಮ್ಮನ ಕೊಪ್ಪಲು ಗ್ರಾಮದಲ್ಲಿ ತಡ ರಾತ್ರಿ ಟಿಸಿ ಅಳವಡಿಸಲು ಹೋದಾಗ ತಲೆ ಮೇಲೆ ವಿದ್ಯುತ್ ಕಂಬ ಬಿದ್ದು ರೈತ ಕರೀಗೌಡ(60) ಎಂಬಾತ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಮಂಡ್ಯ: ಮದ್ದೂರು ತಾಲೂಕಿನ ಚೆನ್ನಮ್ಮನ ಕೊಪ್ಪಲು ಗ್ರಾಮದಲ್ಲಿ ತಲೆ ಮೇಲೆ ವಿದ್ಯುತ್ ಕಂಬ ಬಿದ್ದು ರೈತ ಕರೀಗೌಡ(60) ಎಂಬಾತ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಟ್ರಾನ್ಸ್ಫಾರ್ಮರ್ ಅಳವಡಿಸಲು ರಾತ್ರಿ ಸೆಸ್ಕ್ ಸಿಬ್ಬಂದಿ ರೈತ ಕರೀಗೌಡನನ್ನ ಕರೆದುಕೊಂಡು ಹೋಗಿದ್ದು, ಟಿಸಿ ಅಳವಡಿಸುವ ವೇಳೆ ವಿದ್ಯುತ್ ಕಂಬ ಬಿದ್ದು ಈ ದುರ್ಘಟನೆ ನಡೆದಿದೆ. ಮೃತ ರೈತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರ ಆಗ್ರಹ ಮಾಡುತ್ತಿದ್ದು, ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬಂಗಾರಪೇಟೆ ತಾಲೂಕಿನಲ್ಲಿ ಸಾಲಗಾರರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಮಹಿಳೆ
ಕೋಲಾರ: ಸಾಲಗಾರರ ಕಿರುಕುಳಕ್ಕೆ ಬೇಸತ್ತು ಪದ್ಮಾ(35) ಎಂಬ ಮಹಿಳೆ ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಅತ್ತಿಗಿರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ವರಲಕ್ಷ್ಮೀ ಎಂಬುವವರಿಂದ ಅತ್ತಿಗಿರಿಯ ಭಾಗ್ಯ, ಸಮ್ರತಿ, ಪ್ರೇಮಾ ಎಂಬ ಸ್ನೇಹಿತೆಯರಿಗೆ $1 ಲಕ್ಷ ಸಾಲ ಕೊಡಿಸಲು ಮಧ್ಯಸ್ಥಿಕೆ ವಹಿಸಿದ್ದ ಪದ್ಮಾ, ಸಾಲ ಮರುಪಾವತಿಸದೆ ಆಕೆಯ ಸ್ನೇಹಿತೆಯರು ಪದ್ಮಾ ಮೇಲೆ ಹಾಕಿದ್ದಾರೆ. ಇದರಿಂದ ಬೇಸತ್ತ ಪದ್ಮಾ ನನ್ನ ಸಾವಿಗೆ ಸ್ನೇಹಿತೆಯರೇ ಕಾರಣ ಎಂದು ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಈ ಕುರಿತು ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡ ಭಾಗ್ಯ, ಸಮ್ರತಿ, ಪ್ರೇಮಾಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ:ರಸ್ತೆ ಅಪಘಾತ ಜಾಸ್ತಿಯಾಗುವುದಕ್ಕೆ ಉತ್ತಮ ರಸ್ತೆಗಳೇ ಕಾರಣ: ಮಧ್ಯಪ್ರದೇಶದ ಬಿಜೆಪಿ ಶಾಸಕ
ಭಾರತೀಯ ಸಿಟಿ ಕ್ರಾಸ್ ಬಳಿ ಬಿಬಿಎಂಟಿಸಿ ಸರಣಿ ಅಪಘಾತ; ಓರ್ವ ಸಾವು
ಬೆಂಗಳೂರು: ಭಾರತೀಯ ಸಿಟಿ ಕ್ರಾಸ್ ಬಳಿ ನಿನ್ನೆ(ಜ.27) ಸಂಜೆ 7.30ರ ಸುಮಾರಿಗೆ ಭೀಕರ ಸರಣಿ ಅಪಘಾತವಾಗಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿ ಮುಂದಿದ್ದ ಮೂರು ಬೈಕ್, ಎರಡು ಕಾರ್ ಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಬಸ್ ಕೆಳಗೆ ಸಿಲುಕಿದ್ದ ಆಯುಬ್ ಎಂಬಾತ ಸಾವನಪ್ಪಿದ್ದಾನೆ. ಈ ಕುರಿತು ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ