ಬೆಂಗಳೂರು, ಮಾ.4: ನಗರದ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಬಾಂಬ್ ಸ್ಫೋಟ (Bomb Blast) ಪ್ರಕರಣ ಸಂಬಂಧ ಸಿಸಿಬಿ (CCB) ಪೊಲೀಸರು ಹಾಗೂ ಎನ್ಐಎ (NIA) ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಕೆಫೆ ಮಾಲೀಕರು ಶಿವರಾತ್ರಿ ದಿನದಂದು ಕೆಫೆ ಪುನರಾರಂಭಿಸಲು ಮುಂದಾಗಿದ್ದಾರೆ. ಆದರೆ, ತನಿಖೆ ಹಂತದಲ್ಲಿ ಇರುವುದರಿಂದ ಮಾರ್ಚ್ 8 ರಂದು ಕೆಫೆ ರೀ ಓಪನ್ ಮಾಡಲು ಅನುಮತಿ ಸಿಗುವುದು ಬಹುತೇಕ ಅನುಮಾನವಾಗಿದೆ.
ಸ್ಫೋಟ ಸಂಬಂಧ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೊಂದೆಡೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎನ್ಐಎ ಪ್ರಕರಣ ದಾಖಲಿಸಿಕೊಂಡು ಅಖಾಡಕ್ಕಿಳಿದಿದೆ. ಈ ನಡುವೆ ಕೆಫೆ ಪುನರಾರಂಭಕ್ಕೆ ಮಾಲೀಕರು ಮುಂದಾಗಿದ್ದರೂ ಸ್ಥಳೀಯ ಪೊಲೀಸರಿಂದ ಎನ್ಒಸಿ ಪಡೆಯುವುದು ಅವಶ್ಯಕವಾಗಿದೆ. ಆದರೆ, ತನಿಖಾ ಹಂತವಾಗಿ ಕೆಫೆ ತೆರೆಯಲು ಪೊಲೀಸರು ಅನುಮತಿ ನೀಡಿಲ್ಲ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪರಿಣಾಮ: ಬೆಂಗಳೂರಿನ ಹೋಟೆಲ್ಗಳಲ್ಲಿ ಜಾರಿಯಾಗಲಿವೆ ಕಠಿಣ ಭದ್ರತಾ ನಿಯಮಗಳು, ಇಲ್ಲಿದೆ ವಿವರ
ಕಫೆ ಆರಂಭದ ಬಗ್ಗೆ ಮಾತನಾಡಿದ್ದ ಮಾಲೀಕ ರಾಘವೇಂದ್ರ ರಾವ್, ಶಿವರಾತ್ರಿಯಂದು ರಾಮೇಶ್ವರಂ ಪುನರ್ ಜನ್ಮವಾಗುತ್ತೆ. ಯಾವುದೇ ವ್ಯವಹಾರಿಕ ದ್ವೇಷದಿಂದ ಕೃತ್ಯ ನಡೆದಿಲ್ಲ. ಹೋಟೆಲ್ ಬ್ಯುಸಿನೆಸ್ ಮಾಡುವವರು ಈ ರೀತಿ ಕೃತ್ಯ ಮಾಡುವುದಿಲ್ಲ. ಅನ್ ಐಡೆಂಟಿಪೈಡ್ ಐಟಂ ಆಗಿದ್ದರೆ ನಾವು ಅದನ್ನು ಆ್ಯಪ್ನಲ್ಲಿ ಹಾಕುತ್ತಿದೆವು ಎಂದರು.
ನವಂಬರ್ನಲ್ಲಿ ಬಸವೇಶ್ವರ ನಗರದ ಬ್ರಾಂಚ್ನಲ್ಲಿ ಬ್ಯಾಗ್ ಪತ್ತೆಯಾಗಿತ್ತು. ಕೂಡಲೆ ಪೊಲೀಸರ ಗಮನಕ್ಕೆ ತಂದಿದ್ದೇವೆ. ಅದು ಯಾವುದೇ ಸಂಶಯಾಸ್ಪದ ವಸ್ತುಗಳು ಇರಲಿಲ್ಲ. ಪಂಚೆ ಮತ್ತು ವಸ್ತ್ರ ಇತ್ತು ಅಷ್ಟೇ. ಆದರೀಗ ಬಾಂಬ್ ಸ್ಫೋಟಗೊಂಡಿದೆ. ನಾವು ಗಾಯಾಳುಗಳ ಚಿಕಿತ್ಸೆ ವೆಚ್ಚ ಭರಿಸಲಿದ್ದೇವೆ ಎಂದು ರಾಘವೇಂದ್ರ ರಾವ್ ಈಗಾಗಲೇ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ