AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಕಂಟೋನ್ಮೆಂಟ್‌ ರೈಲ್ವೇ ನಿಲ್ದಾಣಕ್ಕೆ ಹೊಸ ರೂಪ: ಏನೆಲ್ಲಾ ಸೌಲಭ್ಯ ಇರಲಿವೆ ಗೊತ್ತಾ?

Bengaluru Cantonment Railway Station Redeveloped: ರಾಜಧಾನಿ ಬೆಂಗಳೂರಿನ ಕಂಟೋನ್ಮೆಂಟ್‌ ರೈಲು ನಿಲ್ದಾಣವು 2025ರ ವೇಳೆಗೆ ವಿಶ್ವ ದರ್ಜೆಯ ಪ್ರಯಾಣಿಕರ ಸೌಕರ್ಯಗಳನ್ನು ಒಳಗೊಳ್ಳುವ ಮೂಲಕ ಹೊಸ ರೂಪ ಪಡೆಯಲಿದೆ. 480 ಕೋಟಿ ರೂ. ವೆಚ್ಚದಲ್ಲಿಈ ರೈಲು ನಿಲ್ದಾಣದ ನವೀಕರಣ ಯೋಜನೆ ಶುರುವಾಗಿದೆ. ಹಾಗಾದ್ರೆ, ಈ ರೈಲ್ವೇ ನಿಲ್ದಾಣದಲ್ಲಿ ಏನೆಲ್ಲಾ ವಿಶೇಷತೆಗಳು ಇರಲಿವೆ ಎನ್ನುವ ಸಂಪೂರ್ಣ ವಿವರ ಈ ಕೆಳಗಿನಂತಿದೆ ನೋಡಿ.

ಬೆಂಗಳೂರಿನ ಕಂಟೋನ್ಮೆಂಟ್‌ ರೈಲ್ವೇ ನಿಲ್ದಾಣಕ್ಕೆ ಹೊಸ ರೂಪ: ಏನೆಲ್ಲಾ ಸೌಲಭ್ಯ ಇರಲಿವೆ ಗೊತ್ತಾ?
ಕಂಟೋನ್ಮೆಂಟ್‌ ರೈಲ್ವೇ ನಿಲ್ದಾಣ
TV9 Web
| Edited By: |

Updated on:Nov 09, 2023 | 9:16 AM

Share

ಬೆಂಗಳೂರು, (ನವೆಂಬರ್ 09): ದೂರದ ರೈಲುಗಳು ಮತ್ತು ಉಪನಗರ ರೈಲುಗಳ ಸೇವೆ ಕಲ್ಪಿಸುವ ಮೂರು ಪ್ರಮುಖ ನಿಲ್ದಾಣಗಳಲ್ಲಿ ಬೆಂಗಳೂರಿನ ಕಂಟೋನ್ಮೆಂಟ್‌ ರೈಲು ನಿಲ್ದಾಣವು (Bengaluru Cantonment Railway Station) ಒಂದಾಗಿದೆ. ಇದೀಗ ಈ ನಿಲ್ದಾಣ ಹೊಸ ರೂಪ ಪಡೆದುಕೊಳ್ಳಲಿದೆ. ಹೌದು.. 480 ಕೋಟಿ ರೂ. ವೆಚ್ಚದಲ್ಲಿಈ ರೈಲು ನಿಲ್ದಾಣದ ನವೀಕರಣ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, 2025ರ ವೇಳೆಗೆ ವಿಶ್ವ ದರ್ಜೆಯ ಸೌಕರ್ಯಗಳನ್ನು ಒಳಗೊಳ್ಳುವ ಮೂಲಕ ಹೊಸ ರೂಪ ಪಡೆಯಲಿದೆ. ಇನ್ನು ಈ ರೈಲ್ವೇ ನಿಲ್ದಾನದಲ್ಲಿ ಸಾವಿರ ಕಾರು ಹಾಗೂ 1000 ಬೈಕ್​ ನಿಲ್ಲಿಸಲು ಬೃಹತ್​ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ.

ಹೌದು..1000 ಬೈಕ್‌ ಹಾಗೂ 1000 ಕಾರು ಒಟ್ಟು 2000 ವಾಹನಗಳ ನಿಲುಗಡೆಗೆ ಬಹು ಮಹಡಿ ವಾಹನ ನಿಲುಗಡೆ ಸಂಕೀರ್ಣ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಈಗಾಗಲೇ ಕೆಲಸಗಳು ಸಹ ಭರದಿಂದ ಸಾಗಿದೆ. ಇನ್ನು ಈ ಕಾಮಗಾರಿಯನ್ನು ಬಿಜೆಪಿ ಸಂಸದ ಪಿಸಿ ಮೋಹನ್ ವೀಕ್ಷಿಸಿ ಈ ರೈಲ್ವೇ ನಿಲ್ದಾಣದ ಬಗ್ಗೆ ಮಾಹಿತಿ ನೀಡಿದರು.

, ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು 480 ಕೋಟಿ ರೂಪಾಯಿ ವೆಚ್ಚದಲ್ಲಿ ಮರು ಅಭಿವೃದ್ಧಿಗೊಳಿಸಲಾಗುತ್ತಿದ್ದು, ಮಲ್ಟಿಲೆವೆಲ್ ಬೇಸ್‌ಮೆಂಟ್ ಪಾರ್ಕಿಂಗ್ ಸೌಲಭ್ಯದಲ್ಲಿ 1000 ಕಾರುಗಳು ಮತ್ತು ಸಾವಿರ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ಸೌಲಭ್ಯಕ್ಕೆ ಕೂಡ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ರೈಲ್ವೇ ನಿಲ್ದಾಣ ಏನೆಲ್ಲಾ ಸೌಲಭ್ಯ ಇರಲಿವೆ?

ಲಾರ್ಜ್‌ ವೇಟಿಂಗ್‌ ರೂಮ್‌, ಹೆಚ್ಚುವರಿ ಟಿಕೆಟ್‌ ಕೌಂಟರ್‌ಗಳು, ಸೋಲಾರ್‌ ಪವರ್‌ ಮೇಲ್ಚಾವಣಿ, ನಾಲ್ಕು ಫೂಟ್‌ ಓವರ್‌ ಬ್ರಿಡ್ಜ್‌ ಹಾಗೂ ಬೈಕ್‌ ಮತ್ತು ಕಾರುಗಳ ನಿಲುಗಡೆಗೆ 2000 ವಾಹನಗಳನ್ನು ಪಾರ್ಕಿಂಗ್‌ ಮಾಡಲು ಸಾಧ್ಯವಾಗುವಂತಹ ಬಹು ಮಹಡಿ ವಾಹನ ನಿಲುಗಡೆ ಸಂಕೀರ್ಣ ವ್ಯವಸ್ಥೆಯನ್ನು ಈ ಯೋಜನೆಯಡಿ ಕಲ್ಪಿಸಲಾಗುತ್ತಿದೆ. ಹಿಂಭಾಗದಲ್ಲಿ ತಲಾ 500 ಬೈಕ್‌, ಕಾರು ಹಾಗೂ ಮುಂಭಾಗದಲ್ಲಿ ತಲಾ 500 ಬೈಕ್‌ ಮತ್ತು ಕಾರುಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ನಿಲ್ದಾಣವು ವಸಂತನಗರದಿಂದ ಅದರ ಮುಖ್ಯ ದ್ವಾರವನ್ನು ಮತ್ತು ಮಿಲ್ಲರ್ಸ್ ರಸ್ತೆಯಿಂದ ಅದರ ಎರಡನೇ ಪ್ರವೇಶ ದ್ವಾರವನ್ನು ಹೊಂದಿರುತ್ತದೆ. ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಗೆ ತೆರಳಲು ವಾಕ್‌ವೇಯನ್ನು ಸಂಪರ್ಕಿಸುವ ಹೆಚ್ಚುವರಿ ಎಫ್‌ಒಬಿಗೆ ಅವಕಾಶ ಕಲ್ಪಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದರು

2022ರ ಜೂನ್‌ 20ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಕಂಟೋನ್ಮೆಂಟ್‌ ರೈಲು ನಿಲ್ದಾಣದ ನವೀಕರಣ ಯೋಜನೆಗೆ ಚಾಲನೆ ನೀಡಿದ್ದರು. ಈ ಕೆಲಸ ಆರಂಭವಾಗಿ 4 ತಿಂಗಳಾಗಿದ್ದು, ಶೇ.10ರಷ್ಟು ಕೆಲಸವಾಗಿದೆ. 2025 ರ ಅಕ್ಟೋಬರ್‌ ವೇಳೆಗೆ ವಿಶ್ವ ದರ್ಜೆ ಪ್ರಯಾಣಿಕರ ಸೌಕರ್ಯಗಳೊಂದಿಗೆ ಹೊಸ ವಿನ್ಯಾಸ ಪಡೆಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:42 am, Thu, 9 November 23

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್