ಬೆಂಗಳೂರು: ಮಾದಕ ವಸ್ತು ಸಾಗಾಣಿಕೆ ಶಂಕೆ ಹಿನ್ನೆಲೆಯಲ್ಲಿ ನಗರ ಪ್ರವೇಶಿಸಿದ ಅಂತರಾಜ್ಯ ಬಸ್‌ಗಳು ಸೇರಿದಂತೆ ಕೆಲ ವಾಹನಗಳನ್ನು ಶನಿವಾರ ಮುಂಜಾನೆ ಸ್ನಿಫರ್ ಡಾಗ್ (ಶ್ವಾನದಳ)ದೊಂದಿಗೆ ಮತ್ತು ಸಿಸಿಬಿ ಪೊಲೀಸರು (CCB Police) ದಿಢೀರ ತಪಾಸಣೆ ನಡೆಸಿದರು. ಕೆಲ ದಿನಗಳ ಹಿಂದೆ ಬೆಂಗಳೂರಿಗೆ (Bengaluru) ಮಹಾರಾಷ್ಟ್ರದ ಮುಂಬೈ ಹಾಗೂ ಗೋವಾದಿಂದ ಬಸ್‌ಗಳಲ್ಲಿ ಡ್ರಗ್ಸ್ (Drugs) ಪೂರೈಕೆಯಾಗುತ್ತಿದೆ ಎಂಬ ಮಾಹಿತಿ ಸಿಸಿಬಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ 20ಕ್ಕೂ ಹೆಚ್ಚಿನ ಸಿಸಿಬಿ ಪೊಲೀಸರ ತಂಡ ನೆಲಮಂಗಲ ಟೋಲ್ ಬಳಿ ಬಸ್ ತಪಾಸಣೆ ನಡೆಸಿತು.
ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಬೆಂಗಳೂರಿಗೆ ತುಮಕೂರು ರಸ್ತೆ ಮೂಲಕವೇ ಬಹಳಷ್ಟು ಖಾಸಗಿ ಮತ್ತು ಸರ್ಕಾರಿ ಸಾರಿಗೆ ಅತಿ ಹೆಚ್ಚು ವಾಹನಗಳು ಆಗಮಿಸುತ್ತವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಸಮೀಪದ ಟೋಲ್ ಗೇಟ್ ಬಳಿ ಬಸ್ಗಳನ್ನು ಸಿಸಿಬಿ ಪೊಲೀಸರು ಶ್ವಾನ ದಳದೊಂದಿಗೆ ತಪಾಸಣೆ ನಡೆಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಡ್ರಗ್ ಪೆಡ್ಲರ್ನನ್ನು ಬಂಧಿಸಿದ ಸಿಸಿಬಿ, 2.50 ಲಕ್ಷ ಮೌಲ್ಯದ ಮಾದಕವಸ್ತು ವಶಕ್ಕೆ
ಈ ಬಗ್ಗೆ ಬೆಂಗಳೂರು ಪೊಲೀಸರು ಟ್ವೀಟ್ ಮಾಡಿ, ಅಂತರಾಜ್ಯದಿಂದ ಬಸ್ಗಳ ಮುಖಾಂತರ ಮಾದಕ ವಸ್ತು ಆಮದು ಆಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಅಂತರಾಜ್ಯದಿಂದ ನಗರಕ್ಕೆ ಬರುವ ಬಸ್ಗಳನ್ನು ಸಿಸಿಬಿ ಪೊಲೀಸರು ಮತ್ತು ನಗರ ಪೊಲೀಸರು ಜಂಟಿಯಾಗಿ ಶ್ವಾನ ದಳದೊಂದಿಗೆ ತಪಾಸಣೆ ನಡೆಸಿದೇವು” ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವರ್ಷ ಮೇ ತಿಂಗಳಲ್ಲಿ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ಮೋಹನ್ ಅವರು ನಗರವನ್ನು ಡ್ರಗ್ಸ್ ಮುಕ್ತವಾಗಿಸಲು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಬೆಂಗಳೂರಿನಲ್ಲಿನ ಡ್ರಗ್ಸ್ ಹಾವಳಿಯನ್ನು ಹೇಗೆ ತಡೆಗಟ್ಟಬೇಕು. ಮತ್ತು ನಗರವನ್ನು ಮಾದಕ ದ್ರವ್ಯ ಮುಕ್ತವಾಗಿಸಲು ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಬಳಿಕ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮುಂದಿನ ವರ್ಷಗಳಲ್ಲಿ ಬೆಂಗಳೂರನ್ನು ಮಾದಕ ದ್ರವ್ಯ ಮುಕ್ತ ನಗರವನ್ನಾಗಿ ಮಾಡಲು ಇಲಾಖೆಗೆ ನಿರ್ದೇಶನ ನೀಡಿದ್ದೇನೆ. ಪೊಲೀಸ್ ಇಲಾಖೆಯು ಡ್ರಗ್ಸ್ ವಿರುದ್ಧ ಸಮರ ಸಾರುದೆ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ