ಬೆಂಗಳೂರು: ಸೆಂಟ್ರಲ್ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ; ಪ್ರಕರಣದ ತನಿಖಾಧಿಕಾರಿಯಾಗಿ ಎಸ್ ಮುರುಗನ್ ನೇಮಕ

ಬೆಂಗಳೂರು: ಸೆಂಟ್ರಲ್ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ; ಪ್ರಕರಣದ ತನಿಖಾಧಿಕಾರಿಯಾಗಿ ಎಸ್ ಮುರುಗನ್ ನೇಮಕ
ಸೆಂಟ್ರಲ್ ಜೈಲು

ಪರಪ್ಪನ ಅಗ್ರಹಾರ ಜೈಲು ಭೇಟಿ ಮುಗಿಸಿ ಹೈಕೋರ್ಟ್ ನ್ಯಾಯಧೀಶರು ವಾಪಸ್ ಹೊರಟಿದ್ದಾರೆ. ನ್ಯಾಯಾಧೀಶ ವೀರಪ್ಪ ಮತ್ತು ದಿನೇಶ್ ಕುಮಾರ್ ದಿಢೀರ್ ಭೇಟಿ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

TV9kannada Web Team

| Edited By: ganapathi bhat

Jan 29, 2022 | 3:28 PM

ಬೆಂಗಳೂರು: ಇಲ್ಲಿನ ಸೆಂಟ್ರಲ್‌ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ಸಂಬಂಧ ಅಕ್ರಮದ ಬಗ್ಗೆ ಟಿವಿ9 ವರದಿ ಮಾಡಿತ್ತು. ಟಿವಿ9 ಕನ್ನಡ ವರದಿ ಹಿನ್ನೆಲೆ ಎಚ್ಚೆತ್ತ ರಾಜ್ಯ ಸರ್ಕಾರ ಪ್ರಕರಣದ ತನಿಖಾಧಿಕಾರಿಯಾಗಿ ಎಸ್. ಮುರುಗನ್ ನೇಮಕ ಮಾಡಿದೆ. ಸಂವಹನ, ಲಾಜಿಸ್ಟಿಕ್ಸ್, ಆಧುನೀಕರಣ ವಿಭಾಗದ ಎಡಿಜಿಪಿಯನ್ನು ನೇಮಿಸಲಾಗಿದೆ. ಸಹಾಯಕ ತನಿಖಾಧಿಕಾರಿಯಾಗಿ ಉತ್ತರ ವಲಯದ ಕಾರಾಗೃಹ ಉಪ ಮಹಾನಿರೀಕ್ಷಕರಾದ ಸೋಮಶೇಖರ್ ನೇಮಕ ಮಾಡಲಾಗಿದೆ. ಸೆಂಟ್ರಲ್​ ಜೈಲಿನಲ್ಲಿ ಅಕ್ರಮಗಳ ಬಗ್ಗೆ ಟಿವಿ9 ವರದಿ ಬಿತ್ತರಿಸಿತ್ತು. ದುಡ್ಡು ಕೊಟ್ಟರೆ ಏನುಬೇಕಾದ್ರೂ ಸಿಗುತ್ತೆ ಎಂದು ಟಿವಿ9 ವರದಿ ಮಾಡಿತ್ತು.

ಪರಪ್ಪನ ಅಗ್ರಹಾರ ಜೈಲು ಭೇಟಿ ಮುಗಿಸಿ ಹೈಕೋರ್ಟ್ ನ್ಯಾಯಧೀಶರು ವಾಪಸ್ ಹೊರಟಿದ್ದಾರೆ. ನ್ಯಾಯಾಧೀಶ ವೀರಪ್ಪ ಮತ್ತು ದಿನೇಶ್ ಕುಮಾರ್ ದಿಢೀರ್ ಭೇಟಿ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ವರದಿಯಿಂದ ಪರಪ್ಪನ ಅಗ್ರಹಾರ ಜೈಲಿಗೆ ದಿಢೀರ್ ಭೇಟಿ ನೀಡಲಾಗಿದೆ. ಭೇಟಿ ವೇಳೆ ಯಾವುದೇ ಅಕ್ರಮ‌‌ ಕಂಡು ಬಂದಿಲ್ಲ. ಜೈಲಿನಲ್ಲಿ ವ್ಯವಸ್ಥೆಯಲ್ಲಿ ಲೋಪಗಳು ಕಾಣಲಿಲ್ಲ. ಪುರುಷ ಮತ್ತು ಮಹಿಳಾ ಖೈದಿಗಳ ಬ್ಯಾರಕ್ ಭೇಟಿ ನೀಡಲಾಗಿದೆ. ಅಡುಗೆ ಮನೆಗೆ ಸಹ ಭೇಟಿ ನೀಡಿ ಆಹಾರ ರುಚಿ ಪರಿಶೀಲನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಆಹಾರದ ಗುಣಮಟ್ಟ ಸಹ ಉತ್ತಮವಾಗಿದೆ. ಕೈದಿಗಳ ಜೊತೆ ಮುಕ್ತವಾಗಿ ಚರ್ಚೆ ಮಾಡಲಾಗಿದೆ. ಈ ವೇಳೆ ಯಾವುದೇ ಗುರುತರ ಆರೋಪ ಮಾಡಿಲ್ಲ. ಆದ್ರೆ ಜೈಲಿನ ಧೋರಣೆ ಬಗ್ಗೆ ಕೆಲ ಕೈದಿಗಳಿಂದ ದೂರು ಕೇಳಿಬಂದಿದೆ. ತಪ್ಪು ಮಾಡಿ ಬಂದಿರುವ ಕೈದಿಗಳಿಗೆ ಅಂತಹ ಧೋರಣೆ ಸಾಮಾನ್ಯ. ಕೊಲೆಗಡುಕ ವಾಲ್ಮೀಕಿ ರಾಮಾಯಣ ಬರೆದಿದ್ದಾನೆ. ಕೃಷ್ಣನ ಜನ್ಮ ಸ್ಥಳ ಸಹ ಜೈಲಾಗಿದೆ. ಮೈಕ್ ಮೂಲಕ ಜೈಲು ಬಂಧಿಗಳ ಹಕ್ಕು ಬಗ್ಗೆ ಅರಿವು ಮೂಡಿಸಲಾಯಿತು. ಸದ್ಯ ಈಗಲೇ ಕ್ಲೀನ್ ಚಿಟ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮತ್ತೆ ಹಲವು ಬಾರಿ ಇದೇ ರೀತಿ ಜೈಲಿಗೆ ಅನಿರೀಕ್ಷಿತ ಭೇಟಿ ನೀಡ್ತೇವೆ. ಜೈಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. 9 ರಿಂದ 10 ವರ್ಷ ಜೈಲು ವಾಸ ಅನುಭವಿಸಿದರ ಪಟ್ಟಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಿ ಬಿಡುಗಡೆಗೆ ಕ್ರಮ ಕೈಗೊಳ್ಳುತ್ತೇವೆ. ಜೈಲು ಭೇಟಿ ವಿಷಯ ಮೊದಲೇ ತಿಳಿದಿರುವ ಸಾಧ್ಯತೆ ಇದೆ. ಅಕ್ರಮದ ಬಗ್ಗೆ ಮಾಹಿತಿ ಸಿಕ್ಕರೆ ಕಾನೂನು ಪ್ರಾಧಿಕಾರದಿಂದ ಕ್ರಮ ಕೈಗೊಳ್ಳುತ್ತೇವೆ ಎಂದು ಹೈಕೋರ್ಟ್ ಜಡ್ಜ್ ವೀರಪ್ಪ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Parappana Agrahara Jail: ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ದಾಳಿ; ಗಾಂಜಾ ಸೇದುವ ಚಿಲುಮೆ ಪತ್ತೆ!

ಇದನ್ನೂ ಓದಿ: Hacker Shreeki: ಬರಿಗಾಲಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗೆ ಬಂದ ಹ್ಯಾಕರ್ ಶ್ರೀಕಿ

Follow us on

Related Stories

Most Read Stories

Click on your DTH Provider to Add TV9 Kannada