1 ಲಕ್ಷ ರೂ. ಪರಿಹಾರ ನೀಡುವಂತೆ ಆಪಲ್​ ಸಂಸ್ಥೆಗೆ ಆದೇಶಿಸಿದ ಕೋರ್ಟ್​​

ಒಂದು ಲಕ್ಷ ರೂ. ಪರಿಹಾರ ನೀಡುವಂತೆ ಬೆಂಗಳೂರಿನ ಸಿಟಿ ಗ್ರಾಹಕ ನ್ಯಾಯಾಲಯವು ಇಂದಿರಾನಗರದಲ್ಲಿರುವ ಆಪಲ್ ಇಂಡಿಯಾ ಮತ್ತು ಅದರ ಅಧಿಕೃತ ಸೇವಾ ಕೇಂದ್ರಕ್ಕೆ ಆದೇಶಿಸಿದೆ.

1 ಲಕ್ಷ ರೂ. ಪರಿಹಾರ ನೀಡುವಂತೆ ಆಪಲ್​ ಸಂಸ್ಥೆಗೆ ಆದೇಶಿಸಿದ ಕೋರ್ಟ್​​
ಸಾಂದರ್ಭಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Oct 02, 2023 | 7:58 AM

ಬೆಂಗಳೂರು ಅ.02: ಒಂದು ಲಕ್ಷ ರೂ. ಪರಿಹಾರ ನೀಡುವಂತೆ ಬೆಂಗಳೂರಿನ ಸಿಟಿ ಗ್ರಾಹಕ ನ್ಯಾಯಾಲಯವು (Bengaluru’s city consumer court) ಇಂದಿರಾನಗರದಲ್ಲಿರುವ ಆಪಲ್ ಇಂಡಿಯಾ (Apple India) ಮತ್ತು ಅದರ ಅಧಿಕೃತ ಸೇವಾ ಕೇಂದ್ರಕ್ಕೆ ಆದೇಶಿಸಿದೆ. ಅವೆಜ್ ಖಾನ್ ಅಕ್ಟೋಬರ್ 2021 ರಲ್ಲಿ, ಒಂದು ವರ್ಷದ ವಾರಂಟಿಯೊಂದಿಗೆ iPhone 13 ಫೋನ್​​ ಅನ್ನು ಖರೀದಿಸಿದರು. ಸ್ವಲ್ಪ ದಿನದ ಬಳಿಕ ಫೋನ್‌ನ ಬ್ಯಾಟರಿ ಮತ್ತು ಸ್ಪೀಕರ್ ಕೆಲಸ ಮಾಡುವುದನ್ನು ನಿಲ್ಲಿಸಿತು.

ಹೀಗಾಗಿ ಅವೆಜ್ ಖಾನ್ ಅವರು ಫೋನ್ ರಿಪೇರಿ ಮಾಡಿಕೊಡುವಂತೆ ಇಂದಿರಾನಗರದಲ್ಲಿರುವ ಐಪ್ಲಾನೆಟ್ ಕೇರ್ ಸೆಂಟರ್‌ಗೆ ನೀಡಿದರು. ಸೇವಾ ಕೇಂದ್ರದ ಸಿಬ್ಬಂದಿ ಕೆಲವು ದಿನಗಳ ನಂತರ ಅವೆಜ್​ ಖಾನ್‌ ಅವರಿಗೆ ಕರೆ ಮಾಡಿ ಅವರ ಫೋನ್ ಸರಿಪಡಿಸಲಾಗಿದ್ದು, ಬಂದು ತೆಗೆದುಕೊಂಡು ಹೋಗಿ ಎಂದು ಹೇಳಿದರು.

ಅದರಂತೆ ಅವೆಜ್​ ಖಾನ್ ಅವರು ಕೇರ್ ಸೆಂಟರ್​​ಗೆ ತೆರಳಿ ಫೋನ್ ಅನ್ನು ಪರಿಶೀಲಿಸಿದಾಗ, ಬ್ಯಾಟರಿ ಮತ್ತು ಸ್ಪೀಕರ್‌ನಲ್ಲಿನ ಸಮಸ್ಯೆ ಹಾಗೆ ಇರುವುದು ಕಂಡುಬಂದಿತು. ಈ ವಿಚಾರವನ್ನು ಅವೆಜ್​ ಖಾನ್​ ಸಿಬ್ಬಂದಿಗೆ ತಿಳಿಸಿ ಸರಿಯಾಗಿ ಫೋನ್ ರಿಪೇರಿ ಮಾಡುವಂತೆ ಹೇಳಿದರು. ಎರಡು ವಾರಗಳ ಬಳಿಕ ಕೇರ್ ಸೆಂಟರ್‌ ಸಿಬ್ಬಂದಿ ಅವೆಜ್​ ಖಾನ್​ ಅವರಿಗೆ ಕರೆ ಮಾಡಿ “ನಿಮ್ಮ ಫೋನ್‌ನಲ್ಲಿ ಅಂಟು ತರಹದ ವಸ್ತುವನ್ನು ಪತ್ತೆಯಾಗಿದ್ದು, ಸಮಸ್ಯೆಯು ವಾರಂಟಿ ನೀತಿಯ ಅಡಿಯಲ್ಲಿ ಬರುವುದಿಲ್ಲ ಮತ್ತು ಅದನ್ನು ಸರಿಪಡಿಸಲು ಅವರು ಹೆಚ್ಚುವರಿ ಹಣವನ್ನಿ ನೀಡಬೇಕೆಂದು ಹೇಳಿದರು.

ಇದನ್ನೂ ಓದಿ: ಸೋಷಿಯಲ್ ಮೀಡಿಯಾ ಬಳಕೆಗೂ ವಯೋಮಿತಿ ನಿಗದಿಪಡಿಸಿ: ಕೇಂದ್ರಕ್ಕೆ ಸರ್ಕಾರಕ್ಕೆ ಹೈಕೋರ್ಟ್​ ಸಲಹೆ

ಅವೆಜ್​ ಖಾನ್ ಅವರು ಆಪಲ್ ಇಂಡಿಯಾಗೆ ಮೇಲ್ ಮೂಲಕ ಸಮಸ್ಯೆಯನ್ನು ವಿವರಿಸಿದರು. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ಬೇಸರಗೊಂಡ ಅವೆಜ್​ ಖಾನ್​ ಅವರು ಆಪಲ್ ಇಂಡಿಯಾ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿ, ಅವರಿಗೆ ಕಾನೂನು ನೋಟಿಸ್ ಕಳುಹಿಸಿದರು. ಬೆಂಗಳೂರು ಶಾಂತಿನಗರದಲ್ಲಿರುವ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಅನ್ಯಾಯದ ವ್ಯಾಪಾರ ಪದ್ಧತಿಯ ದೂರು ದಾಖಲಾಗಿತ್ತು.

ಆದರೆ ಪ್ರತಿವಾದದಲ್ಲಿ, ಆಪಲ್ ಇಂಡಿಯಾ ವಕೀಲರು ದೂರಿನಲ್ಲಿ ಸತ್ಯಾಂಶಗಳ ಕೊರತೆಯಿದೆ ಮತ್ತು ಹಾನಿಯನ್ನು ‘ಆಕಸ್ಮಿಕ’ ಎಂದು ಕರೆದರು. ಆದರೆ, ಗ್ರಾಹಕರಿಗೆ ಆಗಿರುವ ತೊಂದರೆಗಾಗಿ ಹೆಚ್ಚುವರಿ 20,000 ರೂ. ಪರಿಹಾರವಾಗಿ 79,999 ರೂ. ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಈ ಪರಿಹಾರದಲ್ಲಿ ಅವರು ಐಫೋನ್ ಖರೀದಿಸಲು ಪಾವತಿಸಿದ ಬೆಲೆ ಮತ್ತು ಆಪಲ್ ಇಂಡಿಯಾದಿಂದ ತನಗೆ ಉಂಟಾದ ಸಂಕಷ್ಟವನ್ನು ಒಳಗೊಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:57 am, Mon, 2 October 23

ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ