ಬೆಂಗಳೂರು: ನಗರ ಪೊಲೀಸ್ ಆಯುಕ್ತ ಕಮಲ್ಪಂತ್ಗೆ (Bengaluru City Police Commissioner) ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾ ಸೋಂಕು (Coronavirus) ದೃಢಪಟ್ಟಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಸೋಂಕಿನಿಂದ ಚೇತರಿಸಿಕೊಂಡು, ಗುಣಮುಖರಾಗಿದ್ದಾರೆ. ಕಳೆದ ಒಂದು ವಾರದಿಂದ ಪೊಲೀಸ್ ಆಯುಕ್ತರು ಹೋಮ್ ಐಸೊಲೇಶನ್ನಲ್ಲಿದ್ದರು. ತಮ್ಮೊಡನೆ ಸಂಪರ್ಕಕ್ಕೆ ಬಂದವರು ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ಅವರು ಸಲಹೆ ಮಾಡಿದ್ದಾರೆ.
ಸಿಎಂಗೆ ಆರೋಗ್ಯ ತಪಾಸಣೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ರಕ್ತದೊತ್ತಡ, ಶುಗರ್, ರಕ್ತ ಹೆಪ್ಪುಕಟ್ಟುವುದಕ್ಕೆ ಸಂಬಂಧಿಸಿದಂತೆ ಹಲವು ತಪಾಸಣೆಗಳನ್ನು ನಡೆಸಲಾಯಿತು. ಡಿ-ಡೈಮರ್ ಟೆಸ್ಟ್ ಹಾಗೂ ಶ್ವಾಸಕೋಶ ಎಕ್ಸ್ರೇ ತೆಗೆಸಲಾಯಿತು. ಇಸಿಜಿ ಹಾಗೂ ಇಕೋ ಟೆಸ್ಟ್ ಮಾಡಿ ಹೃದಯದ ಆರೋಗ್ಯ ತಪಾಸಣೆ ಮಾಡಲಾಯಿತು. ಕೊವಿಡ್-19 ಟೆಸ್ಟ್ಗೆ ಗಂಟಲುದ್ರವ ಸಂಗ್ರಹಿಸಸಲಾಯಿತು. ಈ ಹಿಂದೆ ನಡೆಸಿದ್ದ ಟೆಸ್ಟ್ನಲ್ಲಿ ಮುಖ್ಯಮಂತ್ರಿಗೆ ಕೊವಿಡ್ ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಹಲವು ಪರೀಕ್ಷೆಗಳಿಗೆ ಒಳಪಡಿಸಲಾಯಿತು.
ಎರಡನೇ ಬಾರಿ ತಪಾಸಣೆ ಮಾಡಿದಾಗ ಮುಖ್ಯಮಂತ್ರಿಗೆ ಕೊರೊನಾ ವರದಿ ನೆಗೆಟಿವ್ ಬಂದಿದೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಮುಖ್ಯಮಂತ್ರಿಯ ಗಂಟಲುದ್ರವ ಮಾದರಿಯನ್ನು ತಪಾಸಣೆಗೆ ಒಳಪಡಿಸಲಾಗಿತ್ತು.
ಇದನ್ನೂ ಓದಿ: Corona Review Meeting: ಕೊರೊನಾ ಪರಿಸ್ಥಿತಿ ಪರಾಮರ್ಶೆ: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ
Published On - 5:03 pm, Mon, 17 January 22