ಶಬ್ದ ಮಾಲಿನ್ಯ: ಬೆಂಗಳೂರು ಪಬ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್​​ಗಳ ವಿರುದ್ಧ ಪ್ರಕರಣ ದಾಖಲು

ಶಬ್ದ ಮಾಲಿನ್ಯಕ್ಕೆ ಕಾರಣವಾದ ಪಬ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್​ಗಳ ವಿರುದ್ಧ ಬೆಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಬ್ದ ಮಾಲಿನ್ಯ: ಬೆಂಗಳೂರು ಪಬ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್​​ಗಳ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು ಪೊಲೀಸ್​ ಕಮಿಷನರ್​ ಕಚೇರಿ
Follow us
ವಿವೇಕ ಬಿರಾದಾರ
|

Updated on:Jun 04, 2023 | 8:09 PM

ಬೆಂಗಳೂರು: ವೀಕೆಂಡ್​ ಹಿನ್ನೆಲೆ ನಗರದಲ್ಲಿ ತಡರಾತ್ರಿವರೆಗು ಪಬ್ (Pub) ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ​(Bar and Restaurant) ​ತೆರೆದಿರುತ್ತಿದ್ದು, ಅಲ್ಲಿಯ ಡಿಜೆ ಹಾಡುಗಳಿಂದ ಶಬ್ದ ಮಾಲಿನ್ಯ (Noise Pollution) ಉಂಟಾಗುತ್ತಿದೆ. ಇದನ್ನು ತಡೆಗಟ್ಟಲು ಬೆಂಗಳೂರು ನಗರ ಪೊಲೀಸರು (Bengaluru City Police) ಕಾರ್ಯಾಚರಣೆ ನಡೆಸಿದ್ದಾರೆ. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆದಿದ್ದು, ಕೇಂದ್ರ ವಿಭಾಗದಲ್ಲಿನ 4 ಪಬ್​ಗಳ ಮೇಲೆ, ಪಶ್ಚಿಮ ವಿಭಾಗದಲ್ಲಿ 10, ದಕ್ಷಿಣ ವಿಭಾಗ 8 ಮತ್ತು ಬ್ಯಾಡರಹಳ್ಳಿ ಇಂಡಸ್ಟ್ರಿಯಲ್ ಏರಿಯಾದ 2 ಕಾರ್ಖಾನೆಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಲೈಂಗಿಕ ಕ್ರಿಯೆಗೆ ಆಹ್ವಾನಿಸಿ ವ್ಯಕ್ತಿಯಿಂದ ಹಣ ಸುಲಿಗೆ ಮಾಡಿದ ಮಹಿಳೆ

4 ದಿನಗಳಲ್ಲಿ 38 ಡ್ರಗ್​​​​ ಪೆಡ್ಲರ್​ಗಳನ್ನು ಬಂಧಿಸಿದ ಬೆಂಗಳೂರು ಪೊಲೀಸ್​

ನಗರದ 8 ವಿಭಾಗಗಳಲ್ಲಿ ಕಳೆದ 4 ದಿನಗಳಲ್ಲಿ 38 ಡ್ರಗ್​​ ಪೆಡ್ಲರ್ (drug peddlers) ​ಗಳನ್ನು ಪೊಲೀಸರು ಬಂಧಿಸಿದ್ದಾರೆ. 55 ಕೆಜಿ ಗಾಂಜಾ, 215 ಗ್ರಾಂ ಗಾಂಜಾ ಎಣ್ಣೆ, 768 ಗ್ರಾಂ ಅಫೀಮು, 15 ಗ್ರಾಂ ಸಿಂಥೆಟಿಕ್ ಡ್ರಗ್ಸ್​ ವಶಕ್ಕೆ ಪಡೆದಿದ್ದರು. ಡ್ರಗ್ಸ್​ ವ್ಯಸನಿಗಳು ಸೇರಿದಂತೆ 347 ಜನರ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ರಾಜ್ಯ ಇತ್ತೀಚೆಗೆ ಡ್ರಗ್ಸ್​ , ಗಾಂಜಾ ಜಾಲಗಳು ಪತ್ತೆಯಾಗುತ್ತಿದ್ದು, ಈ ಹಿನ್ನಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿತ್ತು.

ಕಾಲೇಜು, ಪಿಜಿಗಳ ಬಳಿ ಡ್ರಗ್ ಮಾರಾಟ: ಡ್ರಗ್​​ ಪೆಡ್ಲರ್ ಬಂಧಿಸಿದ ಪೊಲೀಸರು

ಕಾಲೇಜು, ಪಿಜಿಗಳ ಬಳಿ ಡ್ರಗ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಇತ್ತೀಚೆಗೆ ಬೆಂಗಳೂರು ಪೊಲೀಸರು ಬಂಧಿಸಿದ್ದರು. ಫಯಾಜ್ ಪಾಷಾ ಅಲಿಯಾಸ್ ಪಿಲ್ಲು ಬಂಧಿತ ಡ್ರಗ್ ಪೆಡ್ಲರ್. ಗುಬ್ಬಲಾಳ ಬಳಿಯ ಖಾಲಿ ಜಾಗವೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ತಲಘಟ್ಟಪುರ ಠಾಣಾ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು.

ಬಂಧಿತ ಆರೋಪಿ ಪಿಲ್ಲುನಿಂದ 10.50 ಲಕ್ಷ ಮೌಲ್ಯದ 15 ಕೆಜಿ ಗಾಂಜಾ, ನಗದು ಮತ್ತು ಬೈಕ್ ಜಪ್ತಿ ಮಾಡಿದ್ದರು. ಆರೋಪಿ ವಿರುದ್ಧ ಬನಶಂಕರಿ, ಜಯನಗರ, ಕೋರಮಂಗಲ, ಕೆ.ಎಸ್.ಲೇಔಟ್ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ​​ ದಾಖಲಾಗಿದ್ದವು. ಸದ್ಯ ಆರೋಪಿಯನ್ನು ಬಂಧಿಸಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು.

ಜೈಲಿನಲ್ಲಿದ್ದುಕೊಂಡೇ ಹೆಂಡತಿ–ಮಕ್ಕಳಿಂದ ಗಾಂಜಾ ದಂಧೆ

ಜೈಲಿನಲ್ಲಿ ಕೂತು ಕೊಂಡೇ ತನ್ನ ಹೆಂಡತಿ ಮಕ್ಕಳಿಂದ ಆರೋಪಿ ಗಾಂಜಾ ದಂಧೆ ಮುಂದುವರೆಸಿದ್ದು ಮಹಿಳೆ ಪೊಲೀಸರ ಬಲೆಗೆ ಬಿದ್ದಿದ್ದಳು. ಗಾಂಜಾ ದಂಧೆಯಲ್ಲಿ ಒಂದು ತಿಂಗಳ ಹಿಂದೆ ಜೆಜೆ ನಗರ ಪೊಲೀಸರಿಂದ ಅರೆಸ್ಟ್ ಆಗಿ ಜೈಲು ಪಾಲಾಗಿದ್ದ ಮುಜ್ಜು ಎಂಬುವವನ ಹೆಂಡತಿ ನಗ್ಮಾ, ಗಾಂಜಾ ಸಾಗಿಸುವಾಗ ಕಲಾಸಿಪಾಳ್ಯ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಬಳಿಕ ಪೊಲೀಸರು ಆಕೆಯನ್ನೂ ಜೈಲಿಗಟ್ಟಿದ್ದರು.

ಗಂಡ-ಹೆಂಡತಿ ಇಬ್ಬರೂ ಪರಪ್ಪನ ಅಗ್ರಹಾರ ಸೇರಿದ್ದು, ಮಕ್ಕಳು ಅನಾಥರಾಗಿದ್ದಾರೆ. ಈ ಗಂಡ-ಹೆಂಡತಿ ತಮ್ಮ ಚಿಕ್ಕ ಮಕ್ಕಳನ್ನೇ ಬಳಸಿಕೊಂಡಿ ಗಾಂಜಾ ದಂಧೆ ನಡೆಸುತ್ತಿದ್ದರು ಎಂಬುವುದು ಪತ್ತೆಯಾಗಿತ್ತು. ಗಾಂಜಾ ತರಲು ತನ್ನ ಮೂವರು ಮಕ್ಕಳೇ ಅಸ್ತ್ರವಾಗಿ ಬಳಸಿಕೊಂಡಿದ್ದಳು ಎನ್ನಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:43 pm, Sun, 4 June 23