AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಸಂಬಂಧಿಕರು ಕಸ್ಟಮ್ಸ್‌ ಬಲೆಗೆ ಬಿದ್ದಿದ್ದಾರೆ ಎಂದು ಕರೆ ಬಂದರೆ ಎಚ್ಚರ! ಏರ್​ಪೋರ್ಟ್​ ಕಸ್ಟಮ್ಸ್ ಇಲಾಖೆ ಹೈ ಅಲರ್ಟ್​

ಬೆಂಗಳೂರಿನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಜನರನ್ನು ವಂಚಿಸುವ ಜಾಲ ಪತ್ತೆಯಗಿದ್ದು, ಆರ್ಥಿಕ ದುರ್ಬಲರನ್ನು ಗುರಿಯಾಗಿಸಿಕೊಂಡು ವಿದೇಶದಿಂದ ಬರುವ ಪ್ರಯಾಣಿಕರನ್ನು ತಡೆದಿದ್ದೇವೆಂದು ಹೇಳಿ ಹಣ ದೋಚಲಾಗುತ್ತಿದೆ.ಈ ಬಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣದ ಕಸ್ಟಮ್ಸ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಇಂತಹ ವಂಚನೆಗೆ ಒಳಗಾದರೆ 1930 ಸೈಬರ್ ಕ್ರೈಂ ಸಹಾಯವಾಣಿಗೆ ಕರೆ ಮಾಡುವಂತೆ ತಿಳಿಸಿದೆ.

ನಿಮ್ಮ ಸಂಬಂಧಿಕರು ಕಸ್ಟಮ್ಸ್‌ ಬಲೆಗೆ ಬಿದ್ದಿದ್ದಾರೆ ಎಂದು ಕರೆ ಬಂದರೆ ಎಚ್ಚರ! ಏರ್​ಪೋರ್ಟ್​ ಕಸ್ಟಮ್ಸ್ ಇಲಾಖೆ ಹೈ ಅಲರ್ಟ್​
ಕಸ್ಟಮ್ಸ್ ಇಲಾಖೆ ಹೈ ಅಲರ್ಟ್​
ಭಾವನಾ ಹೆಗಡೆ
|

Updated on: Dec 27, 2025 | 11:18 AM

Share

ಬೆಂಗಳೂರು, ಡಿಸೆಂಬರ್ 27: ಬೆಂಗಳೂರಿನಲ್ಲಿ (Bengaluru) ಕಸ್ಟಮ್ಸ್ ಅಧಿಕಾರಿಗಳಂತೆ ನಟಿಸಿ ಜನರನ್ನು ವಂಚಿಸುವ ವಂಚನಾ ಜಾಲ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆ ಸಾರ್ವಜನಿಕರಿಗೆ ಹೈ ಅಲರ್ಟ್ ನೀಡಿದೆ. ವಂಚಕರ ಜಾಲದಿಂದ ತಪ್ಪಿಸಿಕೊಳ್ಳಲು ಜಾಗರೂಕರಾಗಿರುವುದರ ಜೊತೆಗೆ ವಂಚನೆಗೊಳಗಾದ ಸಮದರ್ಭದಲ್ಲಿ ಸೈಬರ್ ಕ್ರೈಂ ಹೆಲ್ಪ್‌ಲೈನ್ಗೆ ಕರೆ ಮಾಡುವಂತೆ ಕಸ್ಟಮ್ಸ್ ಇಲಾಖೆ ಎಚ್ಚರಿಸಿದೆ.

ಆರ್ಥಿಕವಾಗಿ ಹಿಂದುಳಿದ ವರ್ಗದ ಜನರೇ ಇವರ ಟಾರ್ಗೆಟ್

ಕಸ್ಟಮ್ಸ್ ಅಧಿಕಾರಿಗಳೆಂದು ಹೇಳಿಕೊಂಡು, ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನು ಕಸ್ಟಮ್ಸ್‌ನಲ್ಲಿ ತಡೆಹಿಡಿದಿದ್ದೇವೆ ಎಂದು ಸುಳ್ಳು ಹೇಳಿ, ಸಮಸ್ಯೆ ಬಗೆಹರಿಸಲು ಹಣ ಪಾವತಿಸಬೇಕು ಎಂದು ಬೆದರಿಸಿ ಹಣ ದೋಚಲಾಗುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ವಂಚಕರು ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರನ್ನು ಗುರಿಯಾಗಿಸಿಕೊಂಡು, ಫೋನ್ ಕರೆ, ಸಾಮಾಜಿಕ ಜಾಲತಾಣ ಮತ್ತು ಮೆಸೇಜಿಂಗ್ ಆ್ಯಪ್‌ಗಳ ಮೂಲಕ ಭಯ ಸೃಷ್ಟಿಸಿ ವಂಚನೆ ಮಾಡುತ್ತಿದ್ದಾರೆ. ಪ್ರಯಾಣಿಕನೊಬ್ಬ ಕಸ್ಟಮ್ಸ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ, ತಕ್ಷಣ ದಂಡ ಅಥವಾ ಸುಂಕ ಪಾವತಿಸದಿದ್ದರೆ ಜೈಲು ಶಿಕ್ಷೆ ಅಥವಾ ಕಿರುಕುಳ ಎದುರಾಗಲಿದೆ ಎಂದು ಬೆದರಿಸುತ್ತಾರೆ ಎಂದು ಹೇಳಲಾಗಿದೆ.

ವಂಚಕರ ಜಾಲ ಹೇಗಿರುತ್ತೆ ನೋಡಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಸ್ಟಮ್ಸ್ ಕಮಿಷನರ್, ಕಸ್ಟಮ್ಸ್ ಅಧಿಕಾರಿಗಳು ಎಂದಿಗೂ ಫೋನ್, ವಾಟ್ಸಾಪ್ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಹಣ ಕೇಳುವುದಿಲ್ಲ. ವೈಯಕ್ತಿಕ ಬ್ಯಾಂಕ್ ಖಾತೆ, ಯುಪಿಐ ಅಥವಾ ಡಿಜಿಟಲ್ ವಾಲೆಟ್‌ಗೆ ಹಣ ವರ್ಗಾಯಿಸಲು ಹೇಳುವುದಿಲ್ಲ. ಎಲ್ಲಾ ಸರ್ಕಾರಿ ಪಾವತಿಗಳು ಅಧಿಕೃತ ಕೌಂಟರ್ ಅಥವಾ ಆನ್‌ಲೈನ್ ಪೋರ್ಟಲ್ ಮೂಲಕ ರಸೀದಿಯೊಂದಿಗೆ ಮಾತ್ರ ನಡೆಯುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.

ವಂಚಕರ ಜಾಲವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಧಿಕಾರಿಗಳು, ಮೊದಲಿಗೆ ಆನ್‌ಲೈನ್‌ನಲ್ಲಿ ಸಂಪರ್ಕಿಸಿ ನಂತರ ಸಂಬಂಧಿಕ ಅಥವಾ ಸ್ನೇಹಿತ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ ಎಂದು ಹೇಳುತ್ತಾರೆ. ಹಣ ವರ್ಗಾವಣೆ ಮಾಡಿದ ತಕ್ಷಣ ಸಂಪರ್ಕ ಕಡಿತಗೊಳಿಸುತ್ತಾರೆ ಎಂದು ವಿವರಿಸಿದ್ದಾರೆ.

ವಂಚನೆಯ ಕರೆಗಳು ಬಂದಲ್ಲಿ ಇಲಾಖೆಯನ್ನೇ ಸಂಪರ್ಕಿಸಿ

ಸುಂಕ ಪಾವತಿ ವಿಚಾರದಲ್ಲಿ ಯಾವುದೇ ಪ್ರಯಾಣಿಕನಿಗೂ ಕಿರುಕುಳ ನೀಡುವುದಿಲ್ಲವೆಂದು ಹೇಳಿರುವ ಕಸ್ಟಮ್ಸ್ ಇಲಾಖೆ, ಎಲ್ಲಾ ಪ್ರಕ್ರಿಯೆಗಳು ಸಿಸಿಟಿವಿ ಮೇಲ್ವಿಚಾರಣೆಯಲ್ಲೇ ನಡೆಯುತ್ತವೆ ಎಂದು ತಿಳಿಸಿದೆ. ಇಂತಹ ವಂಚನೆಯ ಕರೆಗಳು ಬಂದಲ್ಲಿ commrapacc-cusblr@gov.in ಗೆ ಇಮೇಲ್ ಮಾಡುವಂತೆ ಅಥವಾ ಸೈಬರ್ ಕ್ರೈಂ ಹೆಲ್ಪ್‌ಲೈನ್ 1930 ಗೆ ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ವಂಚಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಸ್ಟೈಲಿಶ್ ಆಗಿ ಗಿಲ್ಲಿಗೆ ಆಲ್​ ದಿ ಬೆಸ್ಟ್ ಹೇಳಿದ ಶಿವಣ್ಣ; ವಿಡಿಯೋ ನೋಡಿ
ಸ್ಟೈಲಿಶ್ ಆಗಿ ಗಿಲ್ಲಿಗೆ ಆಲ್​ ದಿ ಬೆಸ್ಟ್ ಹೇಳಿದ ಶಿವಣ್ಣ; ವಿಡಿಯೋ ನೋಡಿ
ಸಿದ್ದರಾಮಯ್ಯ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ, ಮುಂದೇನಾಯ್ತು?
ಸಿದ್ದರಾಮಯ್ಯ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ, ಮುಂದೇನಾಯ್ತು?
ಎಲ್ಲೆಲ್ಲೂ ಗಿಲ್ಲಿ, ಎಲ್ಲೆಲ್ಲೂ ಗಿಲ್ಲಿ: ಅಭಿಮಾನಿಗಳ ಪ್ರೀತಿಯ ಅಭಿಯಾನ ನೋಡಿ
ಎಲ್ಲೆಲ್ಲೂ ಗಿಲ್ಲಿ, ಎಲ್ಲೆಲ್ಲೂ ಗಿಲ್ಲಿ: ಅಭಿಮಾನಿಗಳ ಪ್ರೀತಿಯ ಅಭಿಯಾನ ನೋಡಿ
ಆಸ್ತಿಗಾಗಿ 4 ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನೇ ಕೊಂದ ಪಾಪಿ ಅಣ್ಣ!
ಆಸ್ತಿಗಾಗಿ 4 ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನೇ ಕೊಂದ ಪಾಪಿ ಅಣ್ಣ!
ಮದುವೆಗೆ ಏನಾದರೂ ತೊಂದ್ರೆ ಆದ್ರೆ ಗಿಲ್ಲಿಯೇ ಕಾರಣ; ನೇರವಾಗಿ ಹೇಳಿದ ಕಾವ್ಯಾ
ಮದುವೆಗೆ ಏನಾದರೂ ತೊಂದ್ರೆ ಆದ್ರೆ ಗಿಲ್ಲಿಯೇ ಕಾರಣ; ನೇರವಾಗಿ ಹೇಳಿದ ಕಾವ್ಯಾ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗೆ ಚುನಾವಣೆಯಲ್ಲಿ ಗೆಲುವು
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗೆ ಚುನಾವಣೆಯಲ್ಲಿ ಗೆಲುವು
ಡಿಕೆಶಿ ದೆಹಲಿ ಪ್ರವಾಸ: ರಾಹುಲ್ ಗಾಂಧಿ ಭೇಟಿ ಬಗ್ಗೆ ಸ್ಫೋಟಕ ಹೇಳಿಕೆ
ಡಿಕೆಶಿ ದೆಹಲಿ ಪ್ರವಾಸ: ರಾಹುಲ್ ಗಾಂಧಿ ಭೇಟಿ ಬಗ್ಗೆ ಸ್ಫೋಟಕ ಹೇಳಿಕೆ
ಬಳ್ಳಾರಿ ಗಲಭೆ; ನಾಳೆ ನಡೆಯಲಿರುವ ಪ್ರತಿಭಟನೆ ಬಗ್ಗೆ SP ಹೇಳಿದ್ದಿಷ್ಟು
ಬಳ್ಳಾರಿ ಗಲಭೆ; ನಾಳೆ ನಡೆಯಲಿರುವ ಪ್ರತಿಭಟನೆ ಬಗ್ಗೆ SP ಹೇಳಿದ್ದಿಷ್ಟು
ಹಾಸನದಲ್ಲಿ ಕಾಡಾನೆಗಳ ತುಂಟಾಟ! ಪರಸ್ಪರ ಕೋರೆ ಮರ್ದಿಸಿದ ಗಜಪಡೆ
ಹಾಸನದಲ್ಲಿ ಕಾಡಾನೆಗಳ ತುಂಟಾಟ! ಪರಸ್ಪರ ಕೋರೆ ಮರ್ದಿಸಿದ ಗಜಪಡೆ
ಪೌರಾಯುಕ್ತೆಗೆ ನಿಂದನೆ ಪ್ರಕರಣ: ಬ್ಯಾನರ್ ತೆಗೆಸೋಕೆ ಇತ್ತು ಬಲವಾದ ಕಾರಣ
ಪೌರಾಯುಕ್ತೆಗೆ ನಿಂದನೆ ಪ್ರಕರಣ: ಬ್ಯಾನರ್ ತೆಗೆಸೋಕೆ ಇತ್ತು ಬಲವಾದ ಕಾರಣ