AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ಟ್​ಟೈಮ್ ಕೆಲಸದ ಆಫರ್ ನಂಬಿ 67 ಲಕ್ಷ ರೂ. ಕಳೆದುಕೊಂಡ ಬೆಂಗಳೂರು ಉದ್ಯೋಗಿ

ಇತ್ತೀಚೆಗೆ ಆನ್ಲೈನ್ ವಂಚಕರ ಹಾವಳಿ ಹೆಚ್ಚಾಗಿದ್ದು, ಇದೀಗ ಮತ್ತೊಮ್ಮೆ ಬೆಂಗಳೂರಿನಲ್ಲಿ ಸೈಬರ್ ವಂಚಕರ ಜಾಲ ಪತ್ತೆಯಾಗಿದೆ. ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಟೆಲಿಗ್ರಾಮನಲ್ಲಿನ ಬಂದ ಪಾರ್ಟ್​ಟೈಮ್ ಕೆಲಸದ ಸಂದೇಶ ನಂಬಿ 67 ಲಕ್ಷ ರೂ. ಕಳೆದುಕೊಂಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪಾರ್ಟ್​ಟೈಮ್ ಕೆಲಸದ ಆಫರ್ ನಂಬಿ 67 ಲಕ್ಷ ರೂ. ಕಳೆದುಕೊಂಡ ಬೆಂಗಳೂರು ಉದ್ಯೋಗಿ
ಟೆಲಿಗ್ರಾಂನಲ್ಲಿ ಬಂದ ಪಾರ್ಟ್​ಟೈಮ್ ಕೆಲಸದ ಆಫರ್ ನಂಬಿ 67 ಲಕ್ಷ ಕಳೆದುಕೊಂಡ ಬೆಂಗಳೂರು ಉದ್ಯೋಗಿ
ಭಾವನಾ ಹೆಗಡೆ
|

Updated on: Oct 08, 2025 | 3:54 PM

Share

ಬೆಂಗಳೂರು, ಅಕ್ಟೋಬರ್ 8: ರಾಜ್ಯದಲ್ಲಾಗಲಿ, ದೇಶದಲ್ಲಾಗಲಿ ಸೈಬರ್ ವಂಚನೆ (Cyber Fraud) ಹೊಸದೇನಲ್ಲ. ಇತ್ತೀಚಿಗೆ ಬೆಂಗಳೂರಿನಲ್ಲಿ ಸಾಕಷ್ಟು ಪ್ರಕರಣಗಳು ಕೇಳಿಬಂದಿವೆ. ಈ ನಡುವೆ ಮತ್ತೊಂದು ಸೈಬರ್ ವಂಚನೆಯ ಘಟನೆ ನಡೆದಿದೆ. ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಟೆಲಿಗ್ರಾಮನಲ್ಲಿನ ಬಂದ ಪಾರ್ಟ್​ಟೈಮ್ ಕೆಲಸದ ಸಂದೇಶ ನಂಬಿ 67 ಲಕ್ಷ ರೂ. ಕಳೆದುಕೊಂಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹೆಚ್ಚು ಆದಾಯದ ಆಮಿಷವೊಡ್ಡಿ ಹಣ ದೋಚಿದರು

ಸತೀಶ್ ಕೆ (ಹೆಸರು ಬದಲಿಸಿದೆ) ಎಂಬ ಬೆಂಗಳೂರಿನ ನಿವಾಸಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಆನ್ಲೈನ್ ಮೋಸದ ಜಾಲಕ್ಕೆ ಸಿಲುಕಿ ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ಜನವರಿ 11, 2025 ರಂದು 47 ವರ್ಷದ ಸತೀಶ್, ತಮ್ಮ ಟೆಲಿಗ್ರಾಂ ಸಂದೇಶವೊಂದರಲ್ಲಿ ಬಂದ ಲಿಂಕನ್ನು ಒತ್ತಿದಾಗ ‘ಆ್ಯಮಜಾನ್ ಇಂಡಿಯಾ ಪಾರ್ಟ್​ಟೈಮ್ ಬೆನಿಫಿಟ್ ಜಾಬ್’ಎಂಬ ಗ್ರೂಪ್​ಗೆ ಸೇರ್ಪಡೆಯಾಗಿದ್ದಾರೆ. ಗ್ರೂಪಿಗೆ ಸೇರಿದ ನಂತರ ಅದರ ನಿರ್ವಾಹಕರಿಂದ ಇವರಿಗೆ ಸಾಲು ಸಾಲು ಸಂದೇಶಗಳು ಬಂದಿತ್ತು. ಆ ಸಂದೇಶಗಳಲ್ಲಿ ಆ್ಯಮಜಾನ್ ಉತ್ಪನ್ನಗಳ ವಿಮರ್ಶೆಯ ಮೂಲಕ ಹಣಗಳಿಸುವುದರ ಕುರಿತು ಮಾಹಿತಿಗಳಿತ್ತು. ಆದರೆ ಈ ಕೆಲಸ ಮಾಡಲು ಸತೀಶ್​ಗೆ ಹಣ ಪಾವತಿಸಿ ಕಮೀಶನ್ ಪಡೆಯುವಂತೆ ಹೇಳಿದ್ದಾರೆ.

ಮೊದಲಿಗೆ 1000 ರೂ. ಹೂಡಿಕೆ ಮಾಡಿದ ಸತೀಶ್​ಗೆ 1,650 ರೂ.ಮರುಪಾವತಿಸಲಾಗಿತ್ತು. ಈ ಆದಾಯವನ್ನು ನಂಬಿದ ಅವರು, ಇನ್ನೂ ಹಲವು ಬಾರಿ ಹೂಡಿಕೆ ಮಾಡಿದ್ದರು. ಕಾಲಕ್ರಮೇಣ ದೊಡ್ಡ ಮೊತ್ತದ ಹಣ ಪಾವತಿಸಿ ಹೆಚ್ಚು ಆದಾಯ ಪಡೆಯಬಹುದು ಎಂದು ಆಮಿಷವೊಡ್ಡಿ ಅವರನ್ನು ಇನ್ನಷ್ಟು ಹೂಡಿಕೆ ಮಾಡುವಂತೆ ಮಾಡಿದ್ದಾರೆ. ಮೋಸದ ಜಾಲಕ್ಕೆ ಸಿಲುಕಿದ್ದ ಸತೀಶ್, ಕೇವಲ 7 ತಿಂಗಳ ಅಂತರದಲ್ಲಿ ಬರೋಬ್ಬರಿ 67,63,950 ರೂ.ಗಳನ್ನು ಕಳೆದುಕೊಂಡಿದ್ದಾರೆ. ಎರಡು SBI ಖಾತಗಳು ಮತ್ತು ಒಂದು HDFC ಖಾತೆಗೆ ಹಣ ಕಳುಹಿಸಿದ ನಂತರ ಯಾವುದೇ ಆದಾಯ ಬರದೇ ಇದ್ದಾಗ ಸೈಬರ್ ಪೊಲೀಸರ ಮೊರೆ ಹೊಗಿದ್ದಾರೆ.

ನೀವು ಎಚ್ಚರವಹಿಸಬೇಕಾದ ವಿಷಯಗಳು

  • ಟೆಲಿಗ್ರಾಂ ಮತ್ತು ವಾಟ್ಸಾಪ್​ಗಳಲ್ಲಿ ಬರುವ ಪಾರ್ಟ್​ಟೈಮ್ ಕೆಲಸದ ಸಂದೇಶಗಳು
  • ಅತಿಹೆಚ್ಚು ಆದಾಯದ ಭರವಸೆ ನೀಡುವುದು
  • ಉತ್ಪನ್ನಗಳ ವಿಮರ್ಶೆಯಂತಹ ಕೆಲಸಗಳಿಗೆ ಹಣ ನೀಡುವುದಾಗಿ ಹೇಳುವುದು
  • ಗಳಿಸಿದ ಹಣ ಪಡೆಯಲು ಇನ್ನಷ್ಟು ಹಣ ಕೇಳುವುದು ಸಂದರ್ಶನವಿಲ್ಲದೇ ಕೆಲಸ ನೀಡುವುದು

ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್