AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್ ಸೋಗಿನಲ್ಲಿ ಲೇಡೀಸ್ ಪಿಜಿ ಮೇಲೆ ದಾಳಿ: ಹನಿಟ್ರ್ಯಾಪ್​ ಮಾಡುತ್ತಿದ್ದ ಆರೋಪಿ ಸೇರಿ ಗ್ಯಾಂಗ್ ಅಂದರ್

ಬೆಂಗಳೂರಿನ HAL ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್​ ಅಂತ ಹೇಳಿ ದರೋಡೆ ಮಾಡಿರುವುದು ಬೆಳಕಿಗೆ ಬಂದಿದೆ. ಯುವತಿಗೆ ಪರಿಚಯವಾಗಿದ್ದ ವ್ಯಕ್ತಿಯೇ ತನ್ನ ಗ್ಯಾಂಗ್ ಜೊತೆ ಸೇರಿ ಪೊಲೀಸರೆಂದು ನಟಿಸಿ ರಾಬರಿ ಮಾಡಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಆರು ಜನರನ್ನು ಬಂಧಿಸಲಾಗಿದೆ.

ಪೊಲೀಸ್ ಸೋಗಿನಲ್ಲಿ ಲೇಡೀಸ್ ಪಿಜಿ ಮೇಲೆ ದಾಳಿ: ಹನಿಟ್ರ್ಯಾಪ್​ ಮಾಡುತ್ತಿದ್ದ ಆರೋಪಿ ಸೇರಿ ಗ್ಯಾಂಗ್ ಅಂದರ್
ಬಂಧಿತ ಗ್ಯಾಂಗ್​​
ಗಂಗಾಧರ​ ಬ. ಸಾಬೋಜಿ
|

Updated on:Nov 24, 2025 | 7:54 PM

Share

ಬೆಂಗಳೂರು, ನವೆಂಬರ್​ 24: ನಗರದಲ್ಲಿ ಒಂದು ಕಡೆ ಅಸಲಿ‌ ಪೊಲೀಸರೇ ದರೋಡೆಗೆ (Robbery) ಕೈ ಹಾಕಿ ಸಿಕ್ಕಿಬಿದ್ದರೇ, ಮತ್ತೊಂದು ಕಡೆ ನಕಲಿ ಪೊಲೀಸರ ಕಾಟವೂ ಹೆಚ್ಚಾಗಿದೆ. ಪಿಜಿಯೊಂದರ ಯುವತಿಗೆ (girl) ಪರಿಚಯವಾಗಿದ್ದ ಯುವಕ ತನ್ನ ಗ್ಯಾಂಗ್ ಜೊತೆ ರಾಬರಿ ಕೃತ್ಯವೆಸಗಿ ಇದೀಗ ಪೊಲೀಸರ ಅತಿಥಿ ಆಗಿರುವಂತಹ ಘಟನೆ ಹೆಚ್​​ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇತ್ತೀಚೆಗಷ್ಟೇ ನಡೆದ ಎರಡು ರಾಬರಿ ಪ್ರಕರಣಗಳಲ್ಲಿ ಅಸಲಿ ಪೊಲೀಸರೇ ಕಿಂಗ್​​ಪಿನ್ ಆಗಿದ್ದು ಪೊಲೀಸ್ ಇಲಾಖೆಗೆ ದೊಡ್ಡ ಮುಜುಗರ ತಂದಿತ್ತು. ಆದರೆ ಸಿಲಿಕಾನ್ ಸಿಟಿ ಜನರಿಗೆ ನಕಲಿ ಪೊಲೀಸರು ಕೂಡ ದುಸ್ವಪ್ನವಾಗುತ್ತಿದ್ದಾರೆ.

ಇದನ್ನೂ ಓದಿ: ರಾತ್ರೋರಾತ್ರಿ ಕಾಲ್ ಸೆಂಟರ್ ಉದ್ಯೋಗಿಗಳ ಕಿಡ್ನ್ಯಾಪ್: 12 ಗಂಟೆಯೊಳಗೆ ಆರೋಪಿಗಳು ಅಂದರ್

ಅಂತಹದೆ ಒಂದು ಗ್ಯಾಂಗ್,​​ ಹೆಚ್​​ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸ್ಪೈಸ್ ಗಾರ್ಡನ್ ಪಿಜಿಯಲ್ಲಿ ಪೊಲೀಸರ ಹೆಸರು ಹೇಳಿ ದರೋಡೆ ಮಾಡಿ ಅಂದರ್ ಆಗಿದೆ. ಕೇರಳ ಮೂಲದ ನಜಾಸ್, ಸರುಣ್, ಬೆಂಗಳೂರಿನ ವಿಷ್ಣು ಕೆ.ಟಿ, ದಿವಾಕರ್, ಮಧುಕುಮಾರ್, ಕಿರಣ್. ಇವರೇ ಆ ನಕಲಿ ಪೊಲೀಸ್ ಗ್ಯಾಂಗ್​​​ನ ಕಿಲಾಡಿಗಳು.

ನಡೆದದ್ದೇನು?

ಇತ್ತೀಚೆಗೆ ಪಿಜಿ ಯುವತಿಗೆ ಟೀ ಅಂಗಡಿಯಲ್ಲಿ ನಜಾಸ್ ಪರಿಚಯವಾಗಿದ್ದ. ಆತನ ಹುಟ್ಟುಹಬ್ಬ ಆಚರಣೆ ಮಾಡಲು ಕೋ ಲಿವಿಂಗ್ ಪಿಜಿಗೆ ಯುವತಿ ಕರೆದಿದ್ದಳು. ತನ್ನ ಗೆಳೆಯನ ಜೊತೆ ನಜಾಸ್​​ ಯುವತಿ ಪಿಜಿಗೆ ಹೋಗಿದ್ದ. ಮಧ್ಯರಾತ್ರಿಯಲ್ಲಿ ಬಾಗಿಲು ತಟ್ಟಿದ್ದ ಶಬ್ದವಾಗಿದೆ. ಬಾಗಿಲು ತೆಗೆದಾಗ ನಾವು ಪೊಲೀಸರು ಅಂತ ನಾಲ್ಕೈದು ಜನರ ಗ್ಯಾಂಗ್​ ರೂಮ್​​ ಸರ್ಚ್​ ಮಾಡಿದ್ದಾರೆ. ಯುವತಿಯರ ಬಳಿಯಿದ್ದ ಎರಡು ಮೊಬೈಲ್ ರಾಬರಿ ಮಾಡಿದ್ದು,  5 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಕೊಡದಿದ್ದರೆ ಮತ್ತೆ ಬರುವುದಾಗಿ ಬೆದರಿಕೆ ಹಾಕಿದ್ದಾರೆ.

ನಜಾಸ್ ಯಾವಾಗ ಯುವತಿ ಪಿಜಿಗೆ ಹೊಗುತ್ತಾನೋ ಅಲ್ಲಿ ಏನಾದರೂ ಸಿಗಬಹುದು ಅಂತ ತನ್ನ ಗೆಳೆಯರಿಗೆ ಕರೆ ಮಾಡಿ ರಾಬರಿ ಪ್ಲಾನ್ ಮಾಡಿದ್ದ. ಅದರಂತೆ ಎಂಟ್ರಿ ಆಗಿದ್ದ ಐವರು ಆರೋಪಿಗಳು ಗಾಂಜಾ ಇದೆಯಾ ಅಂತ ಹೆದರಿಸಿ ಹಣ ಕೀಳಲು ಯತ್ನಿಸಿದ್ದರು. ಆದರೆ ಹಣ ಇಲ್ಲ ಅಂತ ಗೊತ್ತಾಗಿದೆ. ಆದರೆ ಘಟನೆ ಬಗ್ಗೆ ಬೆಳಗ್ಗೆ HAL ಪೊಲೀಸರಿಗೆ ಮಾಹಿತಿ‌ ನೀಡಲಾಗಿದೆ. ತನಿಖೆ ವೇಳೆ ನಜಾಸ್ ರಾಬರಿ ಪ್ಲಾನ್ ಮಾಡಿದ್ದು ಬಯಲಾಗಿದೆ.

ಇದನ್ನೂ ಓದಿ: ಬೆಂಗಳೂರು ದರೋಡೆ: ಕಾನ್ಸ್​ಟೇಬಲ್​ ಸಸ್ಪೆಂಡ್​, ಇನ್ಮುಂದೆ ಇನ್ಸ್​ಪೆಕ್ಟರ್​ ಗಮನಕ್ಕೆ ತರದೆ ಕೇಸ್ ನಡೆಸುವಂತಿಲ್ಲ

ಸದ್ಯ ತನಿಖೆ ವೇಳೆ ಆರೋಪಿಗಳ ಪೈಕಿ ಸರುಣ್ ಈ ಹಿಂದೆ ಹನಿಟ್ರ್ಯಾಪ್ ಕೇಸ್​ನಲ್ಲಿ ಅರೆಸ್ಟ್ ಆಗಿದ್ದು ಗೊತ್ತಾಗಿದೆ. ಆದರೆ ಇದೇ ಅನುಭವ ಇಟ್ಟಕೊಂಡು ರಾಬರಿ ಮಾಡಲು ಮುಂದಾಗಿ ಮತ್ತೆ ಲಾಕ್ ಆಗಿದ್ದಾನೆ. ಒಟ್ಟಿನಲ್ಲಿ ಅಪರಿಚಿತರನ್ನ ರೂಮ್​​ಗೆ ಕರೆದುಕೊಂಡು ಹೋಗುವ ಮುನ್ನ ಯಾರೇ ಆದರೂ ಎಚ್ಚರಿಕೆ ವಹಿಸುವುದು ಅಗತ್ಯ.

ವರದಿ: ಪ್ರದೀಪ್ ಚಿಕ್ಕಾಟಿ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:52 pm, Mon, 24 November 25