ಅನುಮತಿ ಪಡೆದುಕೊಂಡಿದ್ದೆ ಬೇರೆ, ಮಾಡುತ್ತಿರುವುದೇ ಬೇರೆ: ಅಗ್ನಿ ಅವಘಡ ಬಳಿಕ ರೆಸ್ಟೋರೆಂಟ್ ಮಾಲೀಕನ ನಿಜಾಂಶ ಬಟಾಬಯಲು
ನಗರದ ವಿವಿಧ ಪ್ರದೇಶಗಳಲ್ಲಿ ಕಳೆದ ಒಂದು ವರ್ಷದಲ್ಲಿ ಹಲವು ಅಗ್ನಿ ದುರಂತಗಳು ಸಂಭವಿಸಿವೆ. ಕಳೆದ ಒಂದು ತಿಂಗಳಲ್ಲಿ ವಿಜಯನಗರ, ಚಾಮರಾಜಪೇಟೆ, ಲಗ್ಗೆರೆ ಮತ್ತು ಬುಧವಾರ ಕೋರಮಂಗಲದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದು ಹೀಗೆ..

ಬೆಂಗಳೂರು ಅ.19: ಬುಧವಾರ ಕೊರಮಂಗಲದ (Kormangala) ಫೋರಂ ಮಾಲ್ ಮುಂಭಾಗದಲ್ಲಿರುವ ಮಡ್ಪೈಪ್ ಆರನೇ ಮಹಡಿಯಲ್ಲಿ 8 ರಿಂದ10 ಸಿಲಿಂಡರ್ಗಳು ಸ್ಫೋಟಗೊಂಡು ಅಗ್ನಿ ಅವಘಡ (Fire Accident) ಸಂಭವಿಸಿತ್ತು. ಘಟನೆ ಸಂಬಂಧ ತನಿಖೆ ನಡೆಯುತ್ತಿದ್ದು, ಮಹತ್ವದ ಅಂಶವೊಂದು ಬಹಿರಂಗವಾಗಿದೆ. ಮಡ್ಪೈಪ್ಗೆ ಹೋಟೆಲ್ ನಡೆಸಲು ಮಾತ್ರ ಅವಕಾಶ ನೀಡಲಾಗಿದೆ. ಆದರೆ ಅಕ್ರಮವಾಗಿ ಹುಕ್ಕಬಾರ್ ಕೂಡ ನೆಡಸಲಾಗುತ್ತಿದೆ. ಈ ಬಗ್ಗೆ ಗೃಹ ಸಚಿವ ಪರಮೇಶ್ವರ ಮಾತನಾಡಿ ಮಡ್ಪೈಪ್ ಮಾಲಿಕರಿಗೆ ಹೋಟೆಲ್ ನಡೆಸಲು ಮಾತ್ರ ಅವಕಾಶವಿದೆ. ಆದರೆ ಇಲ್ಲಿ ಅಕ್ರಮವಾಗಿ ಹುಕ್ಕಾಬಾರ್ ನಡೆಸುತ್ತಿದ್ದರು ಎಂದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕೋರಮಂಗಲ ಸಿಲಿಂಡರ್ ಬ್ಲಾಸ್ಟ್ ಪ್ರಕರಣದಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಬಿಬಿಎಂಪಿ ಕೊಟ್ಟಿರುವ ಅನುಮತಿಯೇ ಬೇರೆ, ಇಲ್ಲಿ ನಡೆಯುತ್ತಿರುವುದೇ ಬೇರೆ. ಅನುಮತಿ ಕೊಟ್ಟ ನಂತರ ಬಿಬಿಎಂಪಿ ಪರಿಶೀಲನೆ ಮಾಡಬೇಕಿತ್ತು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತೆ ಎಂದು ಹೇಳಿದರು.
ಯಾವ ರೀತಿ ಸಿಲಿಂಡರ್ ಕಾರಣವೇನು ಎಂಬುವುದು ಗೊತ್ತಿಲ್ಲ. ಒಂದರ ನಂತರ ಒಂದು ಸಿಲಿಂಡರ್ ಸ್ಪೋಟಗೊಂಡಿವೆ. ಎಲ್ಲರೂ ತಪ್ಪಿಸಿಕೊಂಡಿದ್ದಾರೆ. ಒಬ್ಬ ಕಟ್ಟಡದಿಂದ ಜಿಗಿದಿದ್ದು, ಅಪಾಯದಿಂದ ಪಾರಾಗಿದ್ದಾನೆ. ಅತ್ತಿಬೆಲೆ ಪಟಾಕಿ ದುರಂತ, ಹೋಟೆಲ್ ದುರಂತ ನಂತರ ಕಠಿಣ ಕ್ರಮಕ್ಕೆ ಮುಂದಾಗುತ್ತಿದ್ದೇವೆ. ಬೆಂಗಳೂರಿನ ಎಲ್ಲ ರೆಸ್ಟೊರೆಂಟ್ಗಳಲ್ಲೂ ತಪಾಸಣೆ ನಡೆಸಲಾಗುತ್ತೆ ಎಂದು ತಿಳಿಸಿದರು.
ಯಾರದ್ದೋ ಆಕ್ರಮದಿಂದ ಅಮಾಯಕರು ಮೃತರಾಗುತ್ತಿದ್ದಾರೆ. ಬೆಂಗಳೂರಲ್ಲಿ ಪಟಾಕಿ ವಿಚಾರಕ್ಕೆ ಕೆಲ ಕಟ್ಟನಿಟ್ಟಿನ ನಿಯಮಗಳನ್ನು ಜಾರಿ ಮಾಡುತ್ತೇವೆ. ಇಂದು ಮಧ್ಯಾಹ್ನ ಪಟಾಕಿ ವಿಚಾರಕ್ಕೆ ಸಭೆ ನಡೆಸಿ ತಿರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಉಮುಖ್ಯಮಂತ್ರಿ ಡಿಕೆ ಶಿವಕುಮಾರ್ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಸೂಚಿರುವ ವಿಚಾರವಾಗಿ ಮಾತನಾಡಿದ ಅವರು ಡಿಕೆ ಶಿವಕುಮಾರ್ ಕಾನೂನು ಮೂಲಕ ಉತ್ತರ ಕೊಡುತ್ತಾರೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಕ್ತವಾದ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:42 pm, Thu, 19 October 23



