ಬೆಂಗಳೂರು: ಸ್ಕ್ರಾಪ್ ಗೋದಾಮಿಗೆ ಬೆಂಕಿ; ಎರಡು ಟ್ರಾಕ್ಟರ್, ಬೈಕ್ ಬೆಂಕಿಗಾಹುತಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 10, 2024 | 3:04 PM

ಪರಪ್ಪನ ಅಗ್ರಹಾರದ(Parappana Agrahara) ಬಳಿ ಇಂದು(ಏ.10) ಮುಂಜಾನೆ 3 ಗಂಟೆ ಸುಮಾರಿಗೆ ಸ್ಕ್ರಾಪ್ ಗೋದಾಮಿಗೆ ಬೆಂಕಿ ತಗುಲಿ ಧಗ ಧಗ ಹೊತ್ತಿ ಉರಿದಿದೆ. ಸುಮಾರು ಐದು ಎಕರೆ ಪ್ರದೇಶದಲ್ಲಿರುವ ಗೋದಾಮು ಇದಾಗಿದ್ದು, ಘಟನೆಯಲ್ಲಿ ಎರಡು ಟ್ರಾಕ್ಟರ್, ಒಂದು ಟಾಟಾ ಎಸ್ ಮತ್ತು ಬೈಕ್ ಬೆಂಕಿಗಾಹುತಿಯಾಗಿದೆ.

ಬೆಂಗಳೂರು: ಸ್ಕ್ರಾಪ್ ಗೋದಾಮಿಗೆ ಬೆಂಕಿ; ಎರಡು ಟ್ರಾಕ್ಟರ್, ಬೈಕ್ ಬೆಂಕಿಗಾಹುತಿ
ಬೆಂಗಳೂರು: ಸ್ಕ್ರಾಪ್ ಗೋದಾಮಿಗೆ ಬೆಂಕಿ
Follow us on

ಬೆಂಗಳೂರು, ಏ.10: ಪರಪ್ಪನ ಅಗ್ರಹಾರದ(Parappana Agrahara) ಬಳಿ ಇಂದು(ಏ.10) ಮುಂಜಾನೆ 3 ಗಂಟೆ ಸುಮಾರಿಗೆ ಸ್ಕ್ರಾಪ್ ಗೋದಾಮಿಗೆ ಬೆಂಕಿ ತಗುಲಿ ಧಗ ಧಗ ಹೊತ್ತಿ ಉರಿದಿದೆ. ಸುಮಾರು ಐದು ಎಕರೆ ಪ್ರದೇಶದಲ್ಲಿರುವ ಗೋದಾಮು ಇದಾಗಿದ್ದು, ಮೊದಲು ಸಿಲಿಂಡರ್ ಸ್ಪೋಟದಿಂದ ಬೆಂಕಿ ಹೊತ್ತುಕೊಂಡಿದೆ. ನಂತರ ಶಾರ್ಟ್ ಸರ್ಕ್ಯೂಟ್​ನಿಂದ ಇಡೀ ಗೋದಾಮಿಗೆ ವ್ಯಾಪಿಸಿದ್ದು, ನೋಡ ನೋಡುತ್ತಿದ್ದಂತೆ ಬೆಂಕಿಗಾಹುತಿಯಾಗಿದೆ. ಇದರಿಂದ ಆಕಾಶದೆತ್ತರಕ್ಕೆ ದಟ್ಟ ಹೊಗೆ ಅವರಿಸಿದ್ದು, ಇಡೀ ಏರಿಯಾ ದುರ್ವಾಸನೆಯಿಂದ ಕೂಡಿದೆ.

ಸತತ ಹತ್ತು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ನಿಯಂತ್ರಣಕ್ಕೆ

ಇನ್ನು ಸ್ಥಳಕ್ಕೆ ಆಗಮಿಸಿದ ಸುಮಾರು ಎಂಟು ಅಗ್ನಿಶಾಮಕ ಠಾಣೆ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಲಾಗಿ, ಸತತ ಹತ್ತು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಇನ್ನೂ ಕೂಡ ಸ್ಕ್ರಾಪ್​ನಿಂದ ಹೊಗೆಯಾಡುತ್ತಿದೆ. ಈ ಅಕ್ರಮ ಸ್ಕ್ರಾಪ್ ಗೋದಾಮಿನಲ್ಲಿ ಅಪಾರ ಪ್ರಮಾಣದಲ್ಲಿ ಪ್ಲಾಸ್ಟಿಕ್, ರಬ್ಬರ್, ಕೆಮಿಕಲ್ ವಸ್ತುಗಳ ದಾಸ್ತಾನು ಮಾಡಲಾಗಿದೆ. ಜೊತೆಗೆ ಬಾಂಗ್ಲಾ ವಲಸಿಗರ ಅಡ್ಡೆಯಾಗಿರುವ ಇಲ್ಲಿಗೆ ಅಕ್ರಮ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಹತ್ತಾರು ವರ್ಷಗಳಿಂದ ಆಕ್ರಮ ಸ್ಕ್ರಾಪ್ ಗೋದಾಮು ನಡೆಯುತ್ತಿದೆ. ಆದರೂ ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ.

ಇದನ್ನೂ ಓದಿ:ಎಲೆಕ್ಟ್ರಾನಿಕ್ ಬೈಕ್ ಸಾಗಿಸ್ತಿದ್ದ ಕಂಟೈನರ್​ಗೆ ಬೆಂಕಿ; 40 ಬೈಕ್​ಗಳ ಪೈಕಿ 20 ಬೆಂಕಿಗಾಹುತಿ

ಎರಡು ಟ್ರಾಕ್ಟರ್, ಒಂದು ಟಾಟಾ ಎಸ್ ಮತ್ತು ಬೈಕ್ ಬೆಂಕಿಗಾಹುತಿ

ಕೂಡ್ಲು ಶ್ರೀನಿವಾಸ್ ರೆಡ್ಡಿ ಎಂಬುವವರಿಗೆ ಸೇರಿದ ಜಮೀನು ಇದಾಗಿದ್ದು, ಮೀಜಾನ್ ಎಂಬುವವನು ಸ್ಕ್ರಾಪ್ ಗೋದಾಮು ಅಕ್ರಮವಾಗಿ ನಡೆಸುತ್ತಿದ್ದ. ಇನ್ನು ಘಟನೆಯಲ್ಲಿ ಎರಡು ಟ್ರಾಕ್ಟರ್, ಒಂದು ಟಾಟಾ ಎಸ್ ಮತ್ತು ಬೈಕ್ ಬೆಂಕಿಗಾಹುತಿಯಾಗಿದೆ. ಸುಮಾರು 100ಕ್ಕೂ ಅಧಿಕ ಮಂದಿ ಬಾಂಗ್ಲಾ ವಲಸಿಗರು ವಾಸವಿದ್ದ ಜಮೀನು ಇದಾಗಿದ್ದು, ಕಳೆದ ಎರಡು ವರ್ಷಗಳ ಹಿಂದೆ ಅಕ್ರಮ ಬಾಂಗ್ಲಾ ವಲಸಿಗರನ್ನು ತೆರವು ಮಾಡಿತ್ತು. ಬಳಿಕ ಸದರಿ ಜಮೀನಿನಲ್ಲಿ ಅಕ್ರಮ ಸ್ಕ್ರಾಪ್ ಗೋದಾಮ ನಡೆಸಲಾಗಿತ್ತು. ಸದ್ಯ ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಆಗಮಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ