ಎಲೆಕ್ಟ್ರಾನಿಕ್ ಬೈಕ್ ಸಾಗಿಸ್ತಿದ್ದ ಕಂಟೈನರ್ಗೆ ಬೆಂಕಿ; 40 ಬೈಕ್ಗಳ ಪೈಕಿ 20 ಬೆಂಕಿಗಾಹುತಿ
ರಾಜ್ಯ ಗಡಿಭಾಗ ತಮಿಳುನಾಡಿನ ಥಳಿರಸ್ತೆಯ ಉಳಿವೀರಹಳ್ಳಿಯಲ್ಲಿ ಎಲೆಕ್ಟ್ರಾನಿಕ್ ಬೈಕ್ ಸಾಗಿಸುತ್ತಿದ್ದ ಕಂಟೈನರ್ಗೆ ಬೆಂಕಿ ತಗುಲಿ ಕಂಟೈನರ್ ಜೊತೆಗೆ 20 ಎಲೆಕ್ಟ್ರಾನಿಕ್ ಬೈಕ್ಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ. ವಾಹನದಲ್ಲಿದ್ದ 40 ಎಲೆಕ್ಟ್ರಾನಿಕ್ ಬೈಕ್ಗಳ ಪೈಕಿ 20 ಬೈಕ್ಗಳು ಬೆಂಕಿಗಾಹುತಿಯಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ಠಾಣಾ ಸಿಬ್ಬಂದಿ ಆಗಮಿಸಿದ್ದು, ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ, ಮಾ.01: ಎಲೆಕ್ಟ್ರಾನಿಕ್ ಬೈಕ್(Electric Bike)ಸಾಗಿಸುತ್ತಿದ್ದ ಕಂಟೈನರ್ಗೆ ಬೆಂಕಿ ತಗುಲಿ ಕಂಟೈನರ್ ಜೊತೆಗೆ 20 ಎಲೆಕ್ಟ್ರಾನಿಕ್ ಬೈಕ್ಗಳು ಬೆಂಕಿಗಾಹುತಿಯಾದ ಘಟನೆ ರಾಜ್ಯ ಗಡಿಭಾಗ ತಮಿಳುನಾಡಿನ ಥಳಿರಸ್ತೆಯ ಉಳಿವೀರಹಳ್ಳಿಯಲ್ಲಿ ನಡೆದಿದೆ. ಕಂಪನಿಯಿಂದ 40 ಎಲೆಕ್ಟ್ರಾನಿಕ್ ಬೈಕ್ಗಳನ್ನು ತುಂಬಿಕೊಂಡು ಬರುತ್ತಿದ್ದ ವಾಹನ, ಬೆಂಗಳೂರಿನ ಜಯನಗರ ಶೋ ರೂಮ್ಗೆ ಬರಬೇಕಿತ್ತು. ಆದರೆ, ಮಾರ್ಗ ಮಧ್ಯೆ ರಸ್ತೆಯಲ್ಲಿಯೇ ವಿದ್ಯುತ್ ತಂತಿ ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ತಗುಲಿದ ಕೂಡಲೇ ಕಂಟೈನರ್ ಧಗದಧಗನೆ ಹೊತ್ತಿ ಉರಿದಿದ್ದು. ವಾಹನದಲ್ಲಿದ್ದ 40 ಎಲೆಕ್ಟ್ರಾನಿಕ್ ಬೈಕ್ಗಳ ಪೈಕಿ 20 ಬೈಕ್ಗಳು ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಠಾಣಾ ಸಿಬ್ಬಂದಿ ಆಗಮಿಸಿದ್ದು, ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಕುರಿತು ಮತ್ತಿಗೆರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ; ಮೂವರಿಗೆ ಗಂಭೀರ ಗಾಯ
ಚಾಮರಾಜನಗರ: ತಾಲೂಕಿನ ಬದನಗುಪ್ಪೆ ಕೈಗಾರಿಕಾ ವಲಯ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾದ ಘಟನೆ ನಡೆದಿದ್ದು, ಬಸ್ನಲ್ಲಿದ್ದ 30ಕ್ಕೂ ಹೆಚ್ಚು ಮಂದಿಯಲ್ಲಿ ಮೂವರು ಗಂಭೀರ ಗಾಯವಾಗಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯವಾಗಿದೆ. ಕೂಡಲೇ ಗಾಯಾಳುಗಳಿಗೆ ಸಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾರ್ಮೆಂಟ್ಸ್ ಪ್ಯಾಕ್ಟರಿಯಿಂದ ಬರುವ ವೇಳೆ ಈ ದುರ್ಘಟನೆ ನಡೆದಿದ್ದು, ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಗೋದಾಮಿನಲ್ಲಿ ಬೆಂಕಿ ಅವಘಡ: 30 ರಿಂದ 40 ವಾಹನಗಳು ಬೆಂಕಿಗಾಹುತಿ
ಬ್ರೆಕ್ ಫೇಲಾಗಿ ಆಟೋ, ಸ್ಕೂಟಿಗೆ ಡಿಕ್ಕಿ ಹೊಡೆದ ಕೆಎಸ್ಆರ್ಟಿಸಿ ಬಸ್
ಗದಗ: ನಗರದ ಹಳೆ ಬಸ್ ನಿಲ್ದಾಣದ ಬಳಿ ಕೆಎಸ್ಆರ್ಟಿಸಿ ಬಸ್ವೊಂದು ಬ್ರೇಕ್ ಫೇಲಾಗಿ ಆಟೋ ಹಾಗೂ ಸ್ಕೂಟಿಗೆ ಡಿಕ್ಕಿಯಾಗಿ ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಬಸ್ನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದು, ಆಟೋದಲ್ಲಿದ್ದ ಓರ್ವ ಯುವಕ, ವಿದ್ಯಾರ್ಥಿನಿಗೆ ಗಾಯವಾಗಿದೆ. ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಈ ಬಸ್ ಗದಗ ನಗರದ ಬಸ್ ನಿಲ್ದಾಣದಿಂದ ಹಾತಲಗೇರಿ ಗ್ರಾಮಕ್ಕೆ ಹೊರಟಿತ್ತು. ಈ ಕುರಿತು ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ