ಬೆಂಗಳೂರು: ಗೃಹಸಚಿವರ ಆಪ್ತ ಕಾರ್ಯದರ್ಶಿ ಎಂದು ಸ್ನೇಹಿತನಿಗೇ ವಂಚನೆ; ಸರ್ಕಾರಿ ಕೆಲಸದ ಆಸೆಗೆ ಬಿದ್ದು ಹಣ ಕಳೆದುಕೊಂಡ ಉದ್ಯಮಿ

ಎಸ್​ಡಿಎ ಕೆಲಸಕ್ಕೆ 10 ಲಕ್ಷ ಆಗುತ್ತದೆ. ಈ  ಸರ್ಕಾರಿ ಕೆಲಸ ಮಿಸ್ ಮಾಡಿಕೊಳ್ಳಬೇಡ ಎಂದು ಆರೋಪಿ ಶ್ರೀನಿವಾಸ್ ನಂಬಿಸಿದ್ದ. ಇದಕ್ಕೆ ಯಾಮಾರಿದ್ದ ಉದ್ಯಮಿ ರಾಮಚಂದ್ರ ಅವರು 2021 ರಿಂದ ಹಂತ ಹಂತವಾಗಿ ಹತ್ತು ಲಕ್ಷ ನೀಡಿ, ಇದೀಗ ಹಣ ಕಳೆದುಕೊಂಡು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಬೆಂಗಳೂರು: ಗೃಹಸಚಿವರ ಆಪ್ತ ಕಾರ್ಯದರ್ಶಿ ಎಂದು ಸ್ನೇಹಿತನಿಗೇ ವಂಚನೆ; ಸರ್ಕಾರಿ ಕೆಲಸದ ಆಸೆಗೆ ಬಿದ್ದು ಹಣ ಕಳೆದುಕೊಂಡ ಉದ್ಯಮಿ
ಪ್ರಾತಿನಿಧಿಕ ಚಿತ್ರ
Edited By:

Updated on: Nov 30, 2023 | 3:51 PM

ಬೆಂಗಳೂರು, ನ.30: ಗೃಹಸಚಿವರ ಆಪ್ತ ಕಾರ್ಯದರ್ಶಿ(private secretary) ಎಂದು ಸ್ನೇಹಿತನಿಗೇ ವಂಚನೆ ಮಾಡಿದ ಘಟನೆ ನಡೆದಿದೆ. ಸರ್ಕಾರಿ ಕೆಲಸ(Government job)ದ ಆಸೆಗೆ ಬಿದ್ದ ರಿಯಲ್ ಎಸ್ಟೇಟ್ ಉದ್ಯಮಿ ರಾಮಚಂದ್ರ ಎಂಬುವವರು ಹಣ ಕಳೆದುಕೊಂಡಿದ್ದಾರೆ. ನಕಲಿ ಆಪ್ತ ಕಾರ್ಯದರ್ಶಿ ಶ್ರೀನಿವಾಸ್, ಎಸ್​ಡಿಎ ಕೆಲಸ ಕೊಡಿಸುತ್ತೇನೆ, ಮೂರು ವರ್ಷ ಅದು ತಾತ್ಕಾಲಿಕವಾಗಿರುತ್ತದೆ. ಅದಾದ ಬಳಿಕ ಪರ್ಮನೆಂಟ್ ಆಗುತ್ತದೆ ಎಂದು ಆರೋಪಿ ನಂಬಿಸಿದ್ದ.

ಎಸ್​ಡಿಎ ಕೆಲಸಕ್ಕೆ 10 ಲಕ್ಷ ರೂ.

ಇನ್ನು ಎಸ್​ಡಿಎ ಕೆಲಸಕ್ಕೆ 10 ಲಕ್ಷ ಆಗುತ್ತದೆ. ಈ  ಸರ್ಕಾರಿ ಕೆಲಸ ಮಿಸ್ ಮಾಡಿಕೊಳ್ಳಬೇಡ ಎಂದು ಆರೋಪಿ ಶ್ರೀನಿವಾಸ್ ನಂಬಿಸಿದ್ದ. ಇದಕ್ಕೆ ಯಾಮಾರಿದ್ದ ಉದ್ಯಮಿ ರಾಮಚಂದ್ರ ಅವರು 2021 ರಿಂದ ಹಂತ ಹಂತವಾಗಿ ಹತ್ತು ಲಕ್ಷ ನೀಡಿದ್ದರು. ಹಣ ನೀಡಿ ಎರಡು ವರ್ಷಗಳ ಕಾಲ ಆರ್ಡರ್ ಕಾಪಿ ಬರುತ್ತೆ ಎಂದು ಕಾದು ಉದ್ಯಮಿ ಕೂತಿದ್ದರು. ಆದರೆ, ಇದಾದ ಬಳಿಕ ಆರ್ಡರ್ ಕಾಪಿ ಅಲ್ಲ, ಎಸ್ ಡಿ ಎ ಕೆಲಸವೇ ಇಲ್ಲ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ:ಡಿಜಿಟಲ್ ಟೋಪಿ! 113 ರೂ ರಿಫಂಡ್​​ಗಾಗಿ 4.9 ಲಕ್ಷ ರೂಪಾಯಿ ಕಳೆದುಕೊಂಡ ಡಾಕ್ಟರ್​​, Google ಕ್ಯಾಬ್ ಕಸ್ಟಮರ್​​ ಹೆಸರಿನಲ್ಲಿ ಸೈಬರ್​ ವಂಚನೆ

ಈ ಹಿನ್ನಲೆ ವಂಚನೆಯಾಗಿರುವ ಬಗ್ಗೆ ಅರಿವಾಗುತ್ತಿದ್ದಂತೆ ಹಣ ವಾಪಾಸ್ ಕೇಳಿದ್ದಾರೆ. ಹಣ ಕೊಡದಿದ್ದರೆ ಕೇಸು ಹಾಕುವುದಾಗಿ ಹೇಳಿದಾಗ ಶ್ರೀನಿವಾಸ್, 5 ಲಕ್ಷ ಹಣ ವಾಪಾಸ್ ನೀಡಿದ್ದನಂತೆ. ಉಳಿದ ಹಣ ಕೇಳಿದರೆ ಜೀವ ಬೆದರಿಕೆ ಹಾಕಿದ್ದು, ಈ ಕುರಿತು ಉದ್ಯಮಿ ರಾಮಚಂದ್ರ  ಅವರು ಠಾಣೆ ಮೆಟ್ಟಿಲೇರಿದ್ದಾರೆ. ನಡೆದ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದು, ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:51 pm, Thu, 30 November 23