AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಜೂನ್​​ 20ರಿಂದ ಫ್ರೀಡಂಪಾರ್ಕ್​ ಪಾರ್ಕಿಂಗ್​ ಕಟ್ಟಡ ಆರಂಭ!

ಬೆಂಗಳೂರಿನಲ್ಲಿನ ಪಾರ್ಕಿಂಗ್​ ಸಮಸ್ಯೆಗೆ ಶ್ರೀಘ್ರದಲ್ಲೆ ಮುಕ್ತಿ ದೊರೆಯಲಿದೆ. ಕಳೆದ ನಾಲ್ಕು ವರ್ಷದಿಂದ ಖಾಲಿ ಬಿದ್ದಿದ್ದ, ಬೆಂಗಳೂರು ಹೃದಯ ಭಾಗದಲ್ಲಿರುವ ಫ್ರೀಡಂಪಾರ್ಕ್ ಬಳಿ ಬಹುಮಡಿ ಪಾರ್ಕಿಂಗ್​ ಸಂಕೀರ್ಣವು ಜೂನ್​ 20 ರಂದು ಉದ್ಘಾಟನೆಗೊಳಲ್ಲಿದೆ.

ಬೆಂಗಳೂರು: ಜೂನ್​​ 20ರಿಂದ ಫ್ರೀಡಂಪಾರ್ಕ್​ ಪಾರ್ಕಿಂಗ್​ ಕಟ್ಟಡ ಆರಂಭ!
ಪಾರ್ಕಿಂಗ್​ ಸಂಕೀರ್ಣ
ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on:Jun 17, 2024 | 9:57 AM

Share

ಬೆಂಗಳೂರು, ಜೂನ್​ 17: ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ನಗರದಲ್ಲಿ ವಾಹನ ಪಾರ್ಕಿಂಗ್ (Parking)​ ತಲೆನೋವಾಗಿ ಪರಿಣಮಿಸಿದೆ. ಅದರಲ್ಲಂತು ಜನಬಿಡ ಪ್ರದೇಶಗಳಾದ ಮೆಜೆಸ್ಟಿಕ್​​​, ವಿಧಾನಸೌಧ ಅಕ್ಕ-ಪಕ್ಕ ವಾಹನ ಪಾರ್ಕಿಂಗ್​​ಗೆ ಜನರು ಪರದಾಡುತ್ತಿದ್ದಾರೆ. ಈ ಸಮಸ್ಯೆಗೆ ಶ್ರೀಘ್ರದಲ್ಲೇ ಮುಕ್ತಿ ದೊರೆಯಲಿದೆ. ಬೆಂಗಳೂರು (Bengaluru) ಹೃದಯ ಭಾಗದಲ್ಲಿರುವ ಫ್ರೀಡಂಪಾರ್ಕ್​ (Freedom Park) ಬಳಿ ಬಹುಮಡಿ ಪಾರ್ಕಿಂಗ್​ ಸಂಕೀರ್ಣವು (Parking complex) ನಿರ್ಮಾಣವಾಗಿದ್ದು, ಜೂನ್​ 20 ರಂದು ಉದ್ಘಾಟನೆಗೊಳಲ್ಲಿದೆ.

ಈ ಪಾರ್ಕಿಂಗ್​ ಸಂಕಿರ್ಣ ಅತ್ಯಂತ ಸುಧಾರಿತ ಪಾರ್ಕಿಂಗ್​ ತಂತ್ರಜ್ಞಾನವನ್ನು ಒಳಗೊಂಡಿದೆ. ಇಲ್ಲಿ ವಾಹನ ನಿಲುಗಡೆ ಮಾಡುವವರಿಗೆ ಉಚಿತ ಪಿಕ್​ ಅಪ್​ ಮತ್ತು ಡ್ರಾಪ್​ ಸೌಲಭ್ಯ ನೀಡಲಾಗಿದೆ. ಬಿಬಿಎಂಪಿಯು 80 ಕೋಟಿ ರೂ. ವೆಚ್ಚದಲ್ಲಿ 2021ರಲ್ಲೇ ಪಾರ್ಕಿಂಗ್​ ಸಂಕೀರ್ಣವನ್ನು ನಿರ್ಮಿಸಿದೆ. ಆದರೆ, ಇದರ ನಿರ್ವಹಣೆಗೆ ಬಿಬಿಎಂಪಿ ಏಳು ಸಲ ಟೆಂಡರ್​ ಕರೆದರೂ, ಯಾರೊಬ್ಬರು ಆಸಕ್ತಿ ತೋರಲಿಲ್ಲ. ಹೀಗಾಗಿ, ಪಾರ್ಕಿಂಗ್​ ಸಂಕೀರ್ಣ ಇಲ್ಲಿಯವರೆಗು ಖಾಲಿಬಿದ್ದಿತ್ತು.

ಇದೀಗ, ಬಿಬಿಎಂಪಿ 8ನೇ ಬಾರಿಗೆ ಟೆಂಡರ್​ ಕರೆದಿದ್ದು, ಪ್ರಿನ್ಸ್​ ರಾಯಲ್​ ಪಾರ್ಕಿಂಗ್​ ಸಲ್ಯೂಷನ್​ ಬಿಸಿನೆಸ್​ ಪ್ರೈ.ಲಿ ಮತ್ತು ಒಮ್ನಿಟೆಕ್​ ಎಂಬ ಸಂಸ್ಥೆಗಳು ಜಂಟಿಯಾಗಿ ಗುತ್ತಿಗೆ ಪಡೆದಿವೆ. 10 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದ್ದು, ಪಾಲಿಕೆಗೆ ವಾರ್ಷಿಕ 1.50 ಕೋಟಿ ರೂ. ಪಾವತಿಸಲಿವೆ. ಈ ಪಾರ್ಕಿಂಗ್​ ಸಂಕೀರ್ಣದಲ್ಲಿ 600 ಕಾರುಗಳನ್ನು ಮತ್ತು 750 ಬೈಕ್​ಗಳನ್ನು ನಿಲುಗಡೆ ಮಾಡಬಹುದು ಎಂದು ಬಿಬಿಂಪಿ ಇಂಜಿನಿಯರ್ ಇನ್ ಚೀಫ್ ಬಿಎಸ್ ಪ್ರಹ್ಲಾದ್ ಹೇಳಿದರು.

ಇದನ್ನೂ ಓದಿ: ಬೆಂಗಳೂರು ಜನತೆಗೆ ಮತ್ತೊಂದು ದರ ಏರಿಕೆ ಬಿಸಿ, ನೀರಿನ ದರ ಹೆಚ್ಚಳಕ್ಕೆ ಜಲಮಂಡಳಿ ಪ್ರಸ್ತಾವನೆ

ವಿಧಾನಸೌಧ, ವಿಕಾಸಸೌಧ, ಲೋಕಾಯುಕ್ತ, ಹೈಕೋರ್ಟ್​, ಸಿಟಿ ಸಿವಿಲ್​ ಕೋರ್ಟ್​, ನಗರ ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್​ ವೃತ್ತ, ಕಂದಾಯ ಭವನ, ಚಿಕ್ಕಪೇಟೆ, ಕಬ್ಬನ್​ಪಾರ್ಕ್​​ಗೆ ತೆರಳುವವರು ಇಲ್ಲಿ ವಾಹನ ನಿಲುಗಡೆ ಮಾಡಬಹುದಾಗಿದೆ. ಇದರಿಂದ, ಗಾಂಧಿನಗರ, ಮೆಜೆಸ್ಟಿಕ್​​ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಪಾರ್ಕಿಂಗ್​ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ.

ಉಚಿತ ಪಿಕ್​ ಅಪ್​, ಡ್ರಾಪ್​​ ಸೌಲಭ್ಯ

ಸಿಟಿ ಸಿವಿಲ್​ ಕೋರ್ಟ್​, ಕೆಆರ್​ ವೃತ್ತ, ವಿಧಾಸೌಧ, ಎಂಎಸ್​​ ಬಿಲ್ಡಿಂಗ್​, ಹೈಕೋರ್ಟ್​​, ಪೋತೀಸ್​ ಸರ್ಕಲ್, ಚಿಕ್ಕಪೇಟೆ ಮೆಟ್ರೋ ನಿಲ್ದಾಣ, ಬಿವಿಕೆ ಅಯ್ಯಂಗಾರ್ ರಸ್ತೆ, ರಾಯನ್ ಸರ್ಕಲ್, ಉಪ್ಪಾರಪೇಟೆ ಪೊಲೀಸ್​ ಠಾಣೆ, ಮೆಜೆಸ್ಟಿಕ್ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮಾರ್ಗಗಳಲ್ಲಿ ಉಚಿತ ಪಿಕ್​ ಅಪ್​, ಡ್ರಾಪ್​​ ಸೌಲಭ್ಯದ ವಾಹನಗಳು ಕಾರ್ಯನಿರ್ವಹಿಸುತ್ತವೆ.

ಏನೆಲ್ಲ ಸೌಲಭ್ಯ?

ಉಚಿತ ವೈಫೈ, ಕಾರ್​ ಸ್ಪಾ, ಶೌಚಾಲಯ, ಕುಡಿಯುವ ನೀರು, ಇವಿ ಚಾರ್ಜಿಂಗ್​, ಕಾಫಿ ಶಾಪ್​, ವೀಲ್​ ಚೇರ್​, ಎಸ್​ಒಎಸ್​, ಆ್ಯಂಬುಲೆನ್ಸ್​​ ಸೇವೆ ಲಭ್ಯವಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:41 am, Mon, 17 June 24

Follow Us
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ