Bengaluru News: ಎಣ್ಣೆ ಪಾರ್ಟಿಯಲ್ಲಿ ಕಿರಿಕ್, ಸ್ನೇಹಿತನಿಗೆ ಚಾಕು ಹಾಕಿದ ಗೆಳೆಯರು​

|

Updated on: May 25, 2023 | 12:53 PM

ನಿನ್ನೆ(ಮೇ.24) ರಾತ್ರಿ ಜೊತೆಗೂಡಿ ಕೆಲಸ ಮಾಡುತ್ತಿದ್ದ ಸ್ನೇಹಿತರ ಜೊತೆಗೆ ಪಾರ್ಟಿ ಮಾಡುತ್ತಿದ್ದ ರಾಮಚಂದ್ರ ಅಲಿಯಾಸ್​ ಭಗಾಡೆ ಎಂಬಾತನಿಗೆ ಆತನ ಸ್ನೇಹಿತರೆ ಚಾಕು ಇರಿದ ಘಟನೆ ನಡೆದಿದ್ದು, ಮೂವರನ್ನು ವಶಕ್ಕೆ ಪಡೆಯಲಾಗಿದೆ.

Bengaluru News: ಎಣ್ಣೆ ಪಾರ್ಟಿಯಲ್ಲಿ ಕಿರಿಕ್, ಸ್ನೇಹಿತನಿಗೆ ಚಾಕು ಹಾಕಿದ ಗೆಳೆಯರು​
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ನಿನ್ನೆ(ಮೇ.24) ರಾತ್ರಿ ಜೊತೆಗೂಡಿ ಕೆಲಸ ಮಾಡುತ್ತಿದ್ದ ಸ್ನೇಹಿತರ(Friends) ಜೊತೆಗೆ ಪಾರ್ಟಿ(Party) ಮಾಡುತ್ತಿದ್ದ ರಾಮಚಂದ್ರ ಅಲಿಯಾಸ್​ ಭಗಾಡೆ ಎಂಬಾತನಿಗೆ ಆತನ ಸ್ನೇಹಿತರೆ ಚಾಕು ಇರಿದ ಘಟನೆ ನಡೆದಿದೆ. ಪಾರ್ಟಿಯಲ್ಲಿ ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಈ ವೇಳೆ ರಾಮಚಂದ್ರನಿಗೆ ಚಾಕು ಇರಿದಿದ್ದಾರೆ. ಇದೀಗ ರಾಮಚಂದ್ರನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹೌದು ನಿನ್ನೆ ಆತನ ಸ್ನೇಹಿತರಾದ ಮಹಾಂತೇಶ, ಹರೀಶ್, ಅಮ್ಜದ್ ವಾಸವಿರುವ 4ನೇ ಮಹಡಿಯಲ್ಲಿ ಪಾರ್ಟಿ ಮಾಡಲಾಗುತ್ತಿತ್ತು. ಈ ವೇಳೆ ಈ ಕೃತ್ಯ ನಡೆದು ಹೋಗಿದ್ದು, ಮಹಾಲಾಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಸದ್ಯ ಮೂರು ವ್ಯಕ್ತಿಗಳ‌ನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

ಕಲ್ಲು ಕ್ವಾರಿ ಸ್ಫೋಟದ ವೇಳೆ ಕೂಲಿ ಕಾರ್ಮಿಕ ಸಾವು

ಕೋಲಾರ: ಕಲ್ಲು ಕ್ವಾರಿ ಸ್ಫೋಟದ ವೇಳೆ ಕೂಲಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೆ.ಬಿ.ಹೊಸಹಳ್ಳಿ ಬಳಿ ನಡೆದಿದೆ. ಯಾದಗಿರಿ ಮೂಲದ ಕಾರ್ಮಿಕ ಸೋಮಶೇಖರ್ ಮೃತ ವ್ಯಕ್ತಿ. ಜೈರಾಮರೆಡ್ಡಿ ಎಂಬುವರಿಗೆ ಸೇರಿದ ಕಲ್ಲಿನ ಕ್ವಾರಿಯಲ್ಲಿ, ತಡರಾತ್ರಿ ನಡೆದಿದ್ದ ಸ್ಫೋಟದ ವೇಳೆ ಕಾರ್ಮಿಕ ಗಂಭೀರ ಗಾಯಗೊಂಡಿದ್ದ. ಕೂಡಲೇ ಆತನನ್ನ ಹೊಸಕೋಟೆಯ ಎಂವಿಜೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ವೇಮಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಮಾಣಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ; ಗಾಯಾಳುಗಳ ಆರೋಗ್ಯ ವಿಚಾರಿಸಿದ ನಳಿನ್ ಕುಮಾರ್ ಕಟೀಲ್

ನಿಂತಿದ್ದ ಬಸ್​ಗೆ ಟಿಟಿ ವಾಹನ ಡಿಕ್ಕಿ ಇಬ್ಬರ ಸಾವು

ತುಮಕೂರು: ನಿಂತಿದ್ದ ಬಸ್​ಗೆ ಟಿಟಿ ವಾಹನ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಡಿ.ಹೊಸಹಳ್ಳಿ ಬಳಿ ನಡೆದಿದೆ. ವೀರೇಶ್ (30), ಶಶಿಕಲಾ (75) ಮೃತ ರ್ದುದೈವಿಗಳು. ಇನ್ನು ಮೃತರು ರಾಯಚೂರು ಜಿಲ್ಲೆಯ ಸಿಂಧನೂರಿನವರು ಎಂದು ತಿಳಿದು ಬಂದಿದೆ. ಇನ್ನು ದಿಲೀಪ್ ಕುಮಾರ್, ಆನಂದ್ ಕುಮಾರ್, ಪ್ರಿಯಾ, ಪ್ರತೀಕ್ಷಾ ಎಂಬುವವರು ಗಾಯಗೊಂಡಿದ್ದು, ಗಾಯಾಳುಗಳಿಗೆ ಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಶಿಕಲಾ ಕುಟುಂಬದವರು ಸಿಂಧನೂರಿನಿಂದ ಮೈಸೂರಿಗೆ ಪ್ರವಾಸಕ್ಕೆ ಹೊರಟಿದ್ದ ವೇಳೆ ಮಾರ್ಗ ಮಧ್ಯೆ ಡಿ.ಹೊಸಹಳ್ಳಿ ಬಳಿ ನಿಂತಿದ್ದ ಖಾಸಗಿ ಬಸ್​ಗೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ. ಈ ಕುರಿತು ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಅಪಘಾತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ