AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮದ್ಯಸೇವನೆಗೆ ಹಣ ಕೊಡದಿದ್ದಕ್ಕೆ ಪತ್ನಿಗೆ ಚಾಕು ಇರಿದ ಪತಿ

ನಗರದ ಜಕ್ಕೂರು ಬಳಿಯ ಮುನೇಶ್ವರ ಬೀದಿಯಲ್ಲಿ ಮಧ್ಯಸೇವನೆಗೆ ಹಣ ಕೊಡದಿದ್ದಕ್ಕೆ ಪತಿ ನಾಗರಾಜ್​ ಎಂಬುವವನಿಂದ ಪತ್ನಿ ಜಯಶ್ರೀಗೆ ಚಾಕು ಇರಿದಿದ್ದಾನೆ.

ಬೆಂಗಳೂರು: ಮದ್ಯಸೇವನೆಗೆ ಹಣ ಕೊಡದಿದ್ದಕ್ಕೆ ಪತ್ನಿಗೆ ಚಾಕು ಇರಿದ ಪತಿ
ಸಾಂದರ್ಭಿಕ ಚಿತ್ರ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jan 30, 2023 | 3:21 PM

Share

ಬೆಂಗಳೂರು: ಮದ್ಯಸೇವನೆಗೆ ಹಣ ಕೊಡದಿದ್ದಕ್ಕೆ ಪತಿ ನಾಗರಾಜ್ ಎಂಬುವವನು ಪತ್ನಿ ಜಯಶ್ರೀ(33)ಗೆ ಚಾಕು ಇರಿದ ಘಟನೆ ಜಕ್ಕೂರು ಬಳಿಯ ಮುನೇಶ್ವರ ಬೀದಿಯಲ್ಲಿ ನಡೆದಿದೆ. 15 ವರ್ಷದ ಹಿಂದೆ ವಿವಾಹವಾಗಿದ್ದ ಕಲಬುರಗಿ ಮೂಲದ ದಂಪತಿಗಳಾದ ನಾಗರಾಜ್ ಮತ್ತು ಜಯಶ್ರೀ, ಇಬ್ಬರು ಮಕ್ಕಳ ಜೊತೆ ಮುನೇಶ್ವರ ಬೀದಿಯಲ್ಲಿ ವಾಸವಾಗಿದ್ದರು. ಪ್ರತಿ ದಿನದಂತೆ ಹಣ ನೀಡುವಂತೆ ಪದೇ ಪದೇ ಪತ್ನಿಗೆ ಪೀಡಿಸುತ್ತಿದ್ದ ನಾಗರಾಜ್​ ಇಂದು(ಜ.28) ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಚುಚ್ಚಿದ್ದಾನೆ.

ಇನ್ನು ನಾಗರಾಜ್​ ಕೂಲಿ ಕೆಲಸ ಮಾಡಿಕೊಂಡಿದ್ದು, ಅತ್ತ ಜಯಶ್ರೀ ಆಯಾ ಕೆಲಸ ಮಾಡಿಕೊಂಡಿದ್ದಾರೆ. ಪತಿ ನಾಗರಾಜ್ ಆಗಾಗ​ ಹಣ ನೀಡುವಂತೆ ಪೀಡಿಸುತ್ತಿದ್ದು, ಈ ಬಾರಿ ಜಗಳ ವಿಕೋಪಕ್ಕೆ ಹೋಗಿ ಈ ಘಟನೆ ಸಂಭವಿಸಿದೆ. ಇವರಿಬ್ಬರ ಜಗಳದ ಮಧ್ಯೆ ಮಕ್ಕಳು ಬಡವಾಗುತ್ತಿರುವುದಂತೂ ಸುಳ್ಳಲ್ಲ. ಇನ್ನು ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲು ಮಾಡಿಕೊಂಡು ಆರೋಪಿ ನಾಗರಾಜ್​ನನ್ನು ಬಂಧಿಸಲಾಗಿದೆ.

ಬನ್ನೇರುಘಟ್ಟ ಸಮೀಪ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಅನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಹುಲ್ಲಹಳ್ಳಿ ಬಳಿ ಕೊಳೆತ ಸ್ಥಿತಿಯಲ್ಲಿ ಸಿ ಕೆ ಪಾಳ್ಯಾ ನಿವಾಸಿ ಮೂರ್ತಿ(38) ಎಂಬ ವ್ಯಕ್ತಿಯ ಶವ ಪತ್ತೆಯಾಗಿದೆ. ಸಣ್ಣಪುಟ್ಟ ಕಳ್ಳತನ ಮಾಡಿಕೊಂಡಿದ್ದ ಮೂರ್ತಿ ಆಗಾಗ ಬಿಕ್ಷೆ ಬೇಡಿ ಜೀವನ ಸಾಗಿಸ್ತಿದ್ದನಂತೆ. ಇದೀಗ ಹುಲ್ಲಹಳ್ಳಿ – ಬಿಂಗಿಪುರ ರಸ್ತೆಯಲ್ಲಿ ಆತನ ಶವ ಸಿಕ್ಕಿದ್ದು, ಅನಾರೋಗ್ಯ ಕಾರಣ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಹೊಸಕೋಟೆ: ಪತ್ನಿ ಜೊತೆ ಅನೈತಿಕ ಸಂಬಂಧ ಶಂಕೆ, ವ್ಯಕ್ತಿಯನ್ನು ಕೊಲೆ ಮಾಡಿ ತನ್ನ ಜಮೀನಿನಲ್ಲಿಯೇ ಹೂತುಹಾಕಿದ ಭೂಪ

ಪ್ರಯಾಣಿಕನ ಬ್ಯಾಗ್​ನಲ್ಲಿದ್ದ ಹಣ ದೋಚಿದ್ದ ಆಟೋ ಚಾಲಕ ಸೆರೆ

ಬೆಂಗಳೂರು: ಸಾಲ ತೀರಿಸಲು ಪ್ರಯಾಣಿಕನ ಬ್ಯಾಗ್​ನಲ್ಲಿದ್ದ ಹಣ ದೋಚಿದ್ದ ಆಟೋ ಚಾಲಕ ರಂಗಸ್ವಾಮಿಯನ್ನ ಇದೀಗ ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಜ.24 ರಂದು ಗಾಂಧಿಬಜಾರ್​ನಿಂದ ಆಸ್ಪತ್ರೆಗೆ ಆಟೋದಲ್ಲಿ ಬಂದಿದ್ದ ಪ್ರಯಾಣಿಕ, ಹಣವಿದ್ದ ಬ್ಯಾಗ್​ನ್ನು ಹಿಂಬದಿ ಸೀಟ್​ನಲ್ಲಿಟ್ಟು 20 ನಿಮಿಷ ಬರ್ತೇನೆ ಬ್ಯಾಗ್​ ನೋಡಿಕೊಳ್ಳಿ ಎಂದು ಹೇಳಿ ಚಿಕಿತ್ಸೆ ಪಡೆಯಲು ಹೋಗಿದ್ದಾನೆ. ಬಳಿಕ ಬಂದು ನೋಡಿದಾಗ ಪಾರ್ಕಿಂಗ್ ಜಾಗದಲ್ಲಿ ಆಟೋ ಇರಲಿಲ್ಲ. ಈ ಕುರಿತು ಪೊಲೀಸ್​ ಕಂಪ್ಲೇಂಟ್​ ನೀಡಿದ್ದರು.

ಇನ್ನು ಆಟೋ ಚಾಲಕ ರಂಗಸ್ವಾಮಿ ಪ್ರಯಾಣಿಕ ಬಿಟ್ಟು ಹೋಗಿದ್ದ ಬ್ಯಾಗ್ ಪರಿಶೀಲಿಸಿದ್ದಾನೆ. ಈ ವೇಳೆ ಆತನಿಗೆ 1.5 ಲಕ್ಷ ರೂ. ಕಂಡಿದ್ದು ತೆಗೆದುಕೊಂಡು ಪರಾರಿಯಾಗಿದ್ದಾನೆ. ಇನ್ನು ಪ್ರಯಾಣಿಕ ನೀಡಿದ ದೂರಿನನ್ವಯ ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿ, ಆತನ ಬಳಿಯಿದ್ದ 1.5 ಲಕ್ಷ ಹಣ, ಆಟೋ ಜಪ್ತಿ ಮಾಡಿಕೊಂಡಿದ್ದಾರೆ. ವಿಚಾರಣೆ ವೇಳೆ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ದುಡಿದು ಸಾಲ ತೀರಿಸಲಾಗದೇ ಹಣದ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದೆ ಎಂದಿದ್ದಾನೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ