Bengaluru: ಪಾರ್ಕ್ನಲ್ಲಿ ಕುಳಿತಿದ್ದ ಯುವತಿಯನ್ನು ಎಳೆದೊಯ್ದು ಗ್ಯಾಂಗ್ರೇಪ್, ಆರೋಪಿಗಳನ್ನ ಬಂಧಿಸಿದ ಪೊಲೀಸರು
ಸ್ನೇಹಿತನ ಜೊತೆ ಪಾರ್ಕ್ನಲ್ಲಿ ಕುಳಿತಿದ್ದ ಯುವತಿಯನ್ನ ನಾಲ್ವರು ಸೇರಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು: ಸ್ನೇಹಿತನ ಜೊತೆ ಪಾರ್ಕ್ನಲ್ಲಿ ಕುಳಿತಿದ್ದ ಯುವತಿಯನ್ನ ನಾಲ್ವರು ಸೇರಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೌದು ಮಾರ್ಚ್ 25ರ ರಾತ್ರಿ 10 ಗಂಟೆಗೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರಿ ನೌಕರರು ಇರುವ ನ್ಯಾಷನಲ್ ಗೇಮ್ಸ್ ವಿಲೇಜ್ ಪಾರ್ಕ್ನಲ್ಲಿ ಯುವತಿ ಹಾಗೂ ಆಕೆಯ ಸ್ನೇಹಿತನ ಕುಳಿತುಕೊಂಡಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ನಾಲ್ವರು ಯುವಕರು ಆಕೆಯ ಸ್ನೇಹಿತನನ್ನ ಬೆದರಿಸಿ, ಆ ಯುವತಿಯನ್ನು ಎಳೆದೊಯ್ದು ಚಲಿಸುತ್ತಿದ್ದ ಕಾರಿನಲ್ಲಿ 4 ಜನರು ಅತ್ಯಾಚಾರ ಮಾಡಿದ್ದಾರೆ. ಈ ಕುರಿತು ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿಗಳನ್ನ ಬಂಧಿಸಿದ್ದಾರೆ.
ಇನ್ನು ಈ ಕಾಮುಕರು ಕೆಎ 01 ಎಂಬಿ 6169 ಸಂಖ್ಯೆಯ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಮಹಾನಗರದ ಈ ದೊಮ್ಮಲೂರು, ಇಂದಿರಾನಗರ, ಆನೇಕಲ್, ನೈಸ್ ರಸ್ತೆ ಸೇರಿದಂತೆ ಹಲವೆಡೆ ಕಾರಿನಲ್ಲಿ ಸುತ್ತಾಟ ನಡೆಸಿ ಕೃತ್ಯವೆಸಗಿದ್ದಾರೆ. ಬಳಿಕ ಮಾ.26ರ ಬೆಳಗ್ಗೆ 4 ಗಂಟೆಗೆ ಯುವತಿಯನ್ನ ಮನೆ ಬಳಿ ಬಿಟ್ಟು ಪರಾರಿಯಾಗಿದ್ದರು. ನಂತರ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಅದೇ ದಿನ ಪೊಲೀಸರು ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ನಾಲ್ವರು ಆರೋಪಿಗಳಾದ ಸತೀಶ್,ವಿಜಯ್,ಶ್ರೀಧರ್,ಕಿರಣ್ ಎಂಬುವವರನ್ನ ಬಂಧಿಸಿದ್ದಾರೆ.
ರಮೇಶ್ ಎಂಬಾತನ ಕೊಲೆ ಪ್ರಕರಣ ಕೊಲೆ ಪ್ರಕರಣ ಭೇದಿಸಿದ ವಿವಿ ಪುರಂ ಪೊಲೀಸರು
ಬೆಂಗಳೂರು: ಮಾರ್ಚ್ 27 ರಂದು ನಗರದ ನ್ಯೂ ತರಗು ಪೇಟೆಯಲ್ಲಿ ರಮೇಶ್ ಎಂಬಾತನನ್ನ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ತಮಿಳುನಾಡು ಮೂಲದ ಸತೀಶ್ ಅಲಿಯಾಸ್ ಕಳಿ ಹಾಗೂ ಶ್ರೀನಿವಾಸ್ ಅಲಿಯಾಸ್ ಚಿನು ಬಂಧಿತ ಆರೋಪಿಗಳು. ಇನ್ನು ಇವರು ಬೆಂಗಳೂರಿನ ನ್ಯೂ ತರುಗು ಪೇಟೆಯಲ್ಲಿ ಮೂಟೆ ಹೊರುವ ಕೆಲಸ ಮಾಡುತ್ತಿದ್ದರು. ಇನ್ನು ಮೃತ ರಮೇಶ್ ಮನೆ ಹಾಗೂ ತೋಟಗಳಿಗೆ ಬೃಹತ್ ಕಟ್ಟಡಗಳಿಗೆ ಗ್ರೀನ್ ಮೆಸ್ ಅಳವಡಿಸುವ ಕೆಲಸ ಮಾಡುತ್ತಿದ್ದ. ಹೀಗಿರುವಾಗ ಕಳೆದ ಮಾ. 27 ರಂದು ಮೆಟಿರಿಯಲ್ ತರಲು ಮಾಲೀಕರು ಜೆಸಿ ನಗರಕ್ಕೆ ಕಳುಹಿಸಿದ್ದರು. ಈ ವೇಳೆ ಬಾರೊಂದಕ್ಕೆ ಕುಡಿಯಲು ರಮೇಶ್ ಹಾಗೂ ಸ್ನೇಹಿತ ಇಂದ್ರೇಶ್ ಹೋಗಿದ್ದರು.
ಈ ವೇಳೆ ಆರೋಪಿಗಳು ಗಾಂಜಾ ಹೊಡೆದಿದ್ದನ್ನ ನೋಡಿ ಗಾಂಜಾ ಪೆಡ್ಲರ್ ಎಂದುಕೊಂಡಿದ್ದರು. ಅವರ ಬಳಿ ಗಾಂಜಾ ಇದೆ ಎಂದು ನ್ಯೂ ತರಗು ಪೇಟೆ ಸೆಲ್ಲಾರ್ ಒಂದರ ಬಳಿ ಹೋಗಿದ್ದರು. ಆರೋಪಿಗಳ ಬಳಿ ಹೋಗಿ 500 ರೂ ಕೊಟ್ಟು ಗಾಂಜಾ ಕೊಡುವಂತೆ ಕೇಳಿದ್ದರು. ಮೊದಲೇ ಗಾಂಜಾ ನಶೆಯಲ್ಲಿದ್ದ ಆರೋಪಿಗಳು ಗಾಂಜಾ ಇಲ್ಲ ಅಂತೇಳಿದ್ದಾರೆ. ಆದ್ರೆ ಪದೇ ಪದೇ ಗಾಂಜಾ ನೀಡುವಂತೆ ಪೀಡಿಸಿದ್ದ ರಮೇಶ್ ಹಾಗೂ ಇಂದ್ರೇಶ್. ಈ ವೇಳೆ ನಾಲ್ವರ ಮಧ್ಯೆ ಜಗಳ ಶುರುವಾಗಿ ರಮೇಶ್ ಮತ್ತು ಶ್ರೀನಿವಾಸ್ ಹಲ್ಲೆ ಮಾಡಿದ್ದಾರೆ. ಈ ವೇಳೆ ಹಿಂದೆಯಿಂದ ಬಿಯರ್ ಬಾಟಲಿಯಿಂದ ರಮೇಶ್ ಕುತ್ತಿಗೆಗೆ ಸತೀಶ್ ಇರಿದಿದ್ದಾನೆ. ನಂತರ ಇಬ್ಬರೂ ಸೇರಿ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರು.
ಇನ್ನು ಗಲಾಟೆ ವೇಳೆ ಅಲ್ಲಿಂದ ಎಸ್ಕೇಪ್ ಆಗಿ ಇಂದ್ರೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದನು. ಬಳಿಕ ಪೊಲೀಸರು ಬಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ರಮೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಇದೀಗ ಸಿಸಿಟಿವಿ ಆಧರಿಸಿ ಆರೋಪಿಗಳನ್ನ ವಿವಿ ಪುರಂ ಪೊಲೀಸರು ಬಂಧಿಸಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:42 am, Fri, 31 March 23