AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Government Museum: ಬೆಂಗಳೂರಿನ ಪ್ರಾಚೀನ ವಸ್ತು ಸಂಗ್ರಹಾಲಯ ಒಂದು ವರ್ಷ ಬಂದ್

ಪ್ರಾಚೀನ ವಸ್ತು ಸಂಗ್ರಹಾಲಯಕ್ಕೆ ಒಂದು ವರ್ಷಗಳ ಕಾಲ ನಿರ್ಬಂಧ ಹೇರಲಾಗಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ 8.5 ಕೋಟಿ ವೆಚ್ಚದಲ್ಲಿ ಕಟ್ಟಡವನ್ನ ನವೀಕರಿಸಲು ಹೊರಟಿದೆ.

Bengaluru Government Museum: ಬೆಂಗಳೂರಿನ ಪ್ರಾಚೀನ ವಸ್ತು ಸಂಗ್ರಹಾಲಯ ಒಂದು ವರ್ಷ ಬಂದ್
ಬೆಂಗಳೂರಿನ ಪ್ರಾಚೀನ ವಸ್ತು ಸಂಗ್ರಹಾಲಯ
Vinayak Hanamant Gurav
| Updated By: ಆಯೇಷಾ ಬಾನು|

Updated on: Jul 11, 2023 | 3:34 PM

Share

ಬೆಂಗಳೂರು: ಪ್ರಾಚೀನ ಕಾಲದ ಸಾಮಾಜ್ರ್ಯ, ಶಾಸನಗಳ ಗತ ವೈಭವ ಸಾರುವ ಬೆಂಗಳೂರಿನ ಪ್ರಾಚೀನ ವಸ್ತು ಸಂಗ್ರಹಾಲಯ(Bengaluru Government Museum) ವಿದ್ಯಾರ್ಥಿಗಳಿಗೆ ಹಾಗೂ ಇತಾಹಾಸ ತಿಳಿದುಕೊಳ್ಳುವ ಆಸಕ್ತರಿಗೆ ಕಳೆದ ಒಂದೂವರೆ ಶತಕದಿಂದ ಉಪಯುಕ್ತವಾಗಿತ್ತು. ಆದರೆ ಇದೀಗ ಪ್ರಾಚೀನ ವಸ್ತು ಸಂಗ್ರಹಾಲಯಕ್ಕೆ ಒಂದು ವರ್ಷಗಳ ಕಾಲ ನಿರ್ಬಂಧ ಹೇರಲಾಗಿದೆ.

ಪ್ರಾಚ್ಯ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಬೆಂಗಳೂರು ಸರ್ಕಾರಿ ವಸ್ತು ಸಂಗ್ರಹಾಲಯವು ಪ್ರಾಚೀನ ವಸ್ತು ಸಂಗ್ರಹಾಲಯದಲ್ಲಿ ಒಂದಾಗಿದ್ದು ಈ ವಸ್ತು ಸಂಗ್ರಹಾಲಯವು 1865ರಲ್ಲಿ ಸ್ಥಾಪಿಸಲ್ಪಟ್ಟಿತ್ತು. ಇದು ಈ ಹಿಂದೆ ಈಗಿನ ಮ್ಯೂಸಿಯಂ ರಸ್ತೆಯಲ್ಲಿ ಇತ್ತು, ಬಳಿಕ ಈ ವಸ್ತು ಸಂಗ್ರಹಾಲಯವನ್ನು ಹಳೆ ಸಿಡ್ನಿ ರಸ್ತೆಯ ಈಗಿನ ಕಸ್ತೂರ ಬಾ ರಸ್ತೆಯ ಬಳಿ ವಸ್ತು ಸಂಗ್ರಹಾಲಯಕ್ಕೆ ಎಂದು ಕಟ್ಟಲಾದ ಕಟ್ಟಡಕ್ಕೆ ಪ್ರಾಚೀನ 1877 ರಲ್ಲಿ ಸ್ಥಳಾಂತರಿಸಲಾಯಿತು. ಅಂದಿನಿಂದ ಇಂದಿನ ವರೆಗೆ 150 ವರ್ಷಗಳಿಂದ ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ಇತಿಹಾಸಕ್ತರು ಇಲ್ಲಿಗೆ ಬಂದು ಶಾಸನ, ಯುದ್ಧ ಸಂದರ್ಭದಲ್ಲಿ ಬಳಸುವಂತಹ ಆಯುಧ ಸೇರಿದಂತೆ ವಿವಿಧ ಕಲಾಕೃತಿಗಳನ್ನು ನೋಡಲು ಬರುತ್ತಿದ್ದರು. ಆದರೆ ಇದೀಗ ಹಳೆಯ ಕಟ್ಟಡವನ್ನ ಪುನರ್ ಸ್ಥಾಪನೆಗಾಗಿ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದ್ದು, ಒಂದು ವರ್ಷಗಳ‌ ಕಾಲ ಪ್ರವೇಶ ನಿರ್ಭಂದಿಸಲಾಗಿದೆ.

Bengaluru Government Museum to close to 1 year over makeover

8.5 ಕೋಟಿ ವೆಚ್ಚದಲ್ಲಿ ಕಟ್ಟಡ ನವೀಕರಣ

ಇನ್ನೂ ಮ್ಯೂಸಿಯಂ ಗ್ರೀಕೋ ರೋಮನ್ ಶೈಲಿಯಲ್ಲಿ ಕಟ್ಟಲಾದ ಕಟ್ಟಡವಾಗಿದ್ದು ಅತ್ಯಂತ ಹಳೆಯ ಕಟ್ಟಡವಾಗಿದೆ. ಒಂದು ಭಾಗದ ಕಟ್ಟಡ ಮೊದಲ ಒಂದು ಫ್ಲೋರ್ ಕಟ್ಟಿಗೆ ಬಳಸಿ ಕಟ್ಟಿದ್ದು ಎರಡನೆ ಫ್ಲೋರ್ ಮದ್ರಾಸ್ ಟೆರಸ್ ರೂಫಿಂಗ್‌ನ್ನ ಸುಣ್ಣದ ಗಚ್ಚು ಮೂಲಕ ಕಟ್ಟಲಾಗಿದೆ. ಪಕ್ಕದಲ್ಲೆ ಇದಕ್ಕೆ ಹತ್ತಿಕೊಂಡು ಅದೇ ಮಾದರಿಯಲ್ಲಿ ಆರ್ ಸಿಸಿ ಪಿಲ್ಲರ್ ಹಾಕಿ ಮತ್ತೊಂದು ಕಟ್ಟಡ ಕಟ್ಟಲಾಗಿದೆ. ಇನ್ನೂ ಈ ಕಟ್ಟಡ ಹಳೆಯದಾದ್ದರಿಂದ ಅಲ್ಲಲ್ಲಿ ಬಿರುಕು ಬಿಟ್ಟಿದ್ದು ಮಳೆಯಿಂದಾಗಿ ಅಲ್ಲಲ್ಲಿ ಸೋರುತ್ತಿದೆ. ಹೀಗಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಿ 8.5 ಕೋಟಿ ವೆಚ್ಚದಲ್ಲಿ ಕಟ್ಟಡವನ್ನ ನವೀಕರಿಸಲು ಹೊರಟಿದೆ.

ಇದನ್ನೂ ಓದಿ: Bengaluru: ವಿಧಾನಸೌಧದಲ್ಲಿ ಶಾಸಕರ ವಾಹನ ನಿಲ್ಲಿಸಲು ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ, ಮಧ್ಯವರ್ತಿಗಳು ಹೆಚ್ಚಾಗಿದ್ದಾರೆ ಎಂದು ಒಪ್ಪಿಕೊಂಡ ಸಚಿವ ಎಚ್‌ಕೆ ಪಾಟೀಲ್

ಇನ್ನೂ ಈ  ಸಂಗ್ರಹಾಲಯದಲ್ಲಿ ಅಶೋಕ ಸಾಮ್ರಾಟನ ಕಾಲದಿಂದ ವಿಜಯನಗರದ ಇತಿಹಾಸದ ವರೆಗೆ 6 ಸಾವಿರದಷ್ಟು ಕಲಾಕೃತಿಗಳಿವೆ. ಕಟ್ಟಡ ನವೀಕರಣ ಆಗುವವರೆಗೂ ಕಲಾಕೃತಿಗಳನ್ನ ಸಂರಕ್ಷಿಸಿಡಲು ಪಕ್ಕದ ಕೆ.ವೆಂಕಟಪ್ಪ ಆರ್ಟ್ ಗ್ಯಾಲರಿಗೆ ಸ್ಥಳಾಂತರಿಸಲಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ಈ ಪ್ರಾಚೀನ ಪರಂಪರೆಯ ಕಲಾಕೃತಿಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದು ಕೊಳ್ಳಲು ಅನುಕೂಲ ಆಗುವಂತೆ ಆಡಿಯೋ ವಿಡಿಯೋ ಮೂಲಕ ಡಿಜಿಟಲೈಸೇಷನ್ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಹೊರಗಡೆ ಇರುವಂತಹ ಕಲಾಕೃತಿಗಳಿಗೆ ಯಾವುದೇ ರೀತಿ ಸಮಸ್ಯೆಯಾಗದಂತೆ ಸಂರಕ್ಷಿಸಲಾಗಿದೆ. ಒಟ್ಟಿನಲ್ಲಿ ಒಂದು ವರ್ಷಗಳ ಕಾಲ ವಸ್ತು ಸಂಗ್ರಹಾಲಯ ಕ್ಲೋಸ್ ಇರಲಿದ್ದು ಡಿಜಿಟಲೈಸೇಷನ್ ಮೂಲಕ ಪ್ರಾಚೀನ ಕಾಲದ ಇತಿಹಾಸ ತನ್ನ ಹೊಸ ರೂಪ ಪಡೆದುಕೊಂಡು ರಾಜ್ಯದಲ್ಲೆ ಮೊದಲ ಡಿಜಿಟಲೈಸೇಷನ್ ಮ್ಯೂಸಿಯಂ ಆಗಿ ಮುಂದೆ ಬರಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ