ಬೆನ್ನಿಗೆ ಚೂರಿ ಹಾಕಿದ ಬೆಸ್ಟ್ ಫ್ರೆಂಡ್: ಪ್ರೀತಿಸಿ ಮದುವೆಯಾದ ಪತ್ನಿ ಈಗ ಗೆಳೆಯನ ಪಾಲು

ಬೆಂಗಳೂರಿನ ಜಿಮ್ ಟ್ರೈನರ್ ನಿತೇಶ್ ಅವರ ಪತ್ನಿ, ಸ್ನೇಹಿತ ನವೀನ್ ಜೊತೆ ನಾಪತ್ತೆಯಾಗಿದ್ದಾರೆ. ಈ ಹಿಂದೆ ನಿತೇಶ್ ಎಚ್ಚರಿಸಿದ್ದರೂ ಪತ್ನಿ ಸಂಪರ್ಕ ಮುಂದುವರಿಸಿದ್ದರು. ಪೊಲೀಸರು ಪತ್ತೆಹಚ್ಚಿದಾಗಲೂ, ಪತ್ನಿ ಗಂಡನ ಬಳಿ ಹೋಗಲು ನಿರಾಕರಿಸಿ, ಪಿಜಿಗೆ ಹೋಗುವುದಾಗಿ ಹೇಳಿದ್ದಾರೆ. ಇದರಿಂದ ಕಂಗಾಲಾಗಿರುವ ನಿತೇಶ್, ತನಗೆ ಮೋಸವಾಗಿದೆ ಎಂದು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಈ ಘಟನೆ ಸಂಚಲನ ಮೂಡಿಸಿದೆ.

ಬೆನ್ನಿಗೆ ಚೂರಿ ಹಾಕಿದ ಬೆಸ್ಟ್ ಫ್ರೆಂಡ್: ಪ್ರೀತಿಸಿ ಮದುವೆಯಾದ ಪತ್ನಿ ಈಗ ಗೆಳೆಯನ ಪಾಲು
ಪ್ರೀತಿಸಿ ಮದುವೆಯಾದ ಪತ್ನಿ ಈಗ ಗೆಳೆಯನ ಪಾಲು
Edited By:

Updated on: Apr 22, 2026 | 3:54 PM

ಬೆಂಗಳೂರು, ಏ.22: ರಾಜ್ಯದಲ್ಲಿ ಗಂಡನನ್ನು ಬಿಟ್ಟು ಬೇರೊಬ್ಬನ ಜತೆಗೆ ಓಡಿ ಹೋಗಿರುವ ಪ್ರಕರಣಗಳೇ ವರದಿಯಾಗುತ್ತಿದೆ. ಬೆಂಗಳೂರು, ಮಂಡ್ಯದಲ್ಲಿ ಇಂದು ಬೆಳಿಗ್ಗೆಯಿಂದ ಎರಡು ಪ್ರಕರಣಗಳು ಪತ್ತೆಯಾಗಿದೆ. ಇದೀಗ ಮತ್ತೊಂದು ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜಿಮ್ ಟ್ರೈನರ್ ಒಬ್ಬರಿಗೆ ಸ್ವಂತ ಸ್ನೇಹಿತನೇ ಕಣ್ಣು ಹಾಕಿರುವ ಘಟನೆ ಬೆಳಕಿಗೆ ಬಂದಿದೆ. “ಅವನು ನನಗೆ ಅಣ್ಣನ ಸಮಾನ” ಎಂದು ಪತಿ ನಿತೇಶ್‌ಗೆ ಹೇಳುತ್ತಿದ್ದ ಪತ್ನಿಯು ಈಗ ಅದೇ ಸ್ನೇಹಿತನ ಜೊತೆ ನಾಪತ್ತೆಯಾಗಿರುವುದು ಸಂಚಲನ ಮೂಡಿಸಿದೆ.

ಜಿಮ್ ಟ್ರೈನರ್ ನಿತೇಶ್ ಮತ್ತು ನವೀನ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಸ್ನೇಹಿತರಾಗಿದ್ದರು. ನಿತೇಶ್ ಯುವತಿಯೊಬ್ಬರನ್ನು ಪ್ರೀತಿಸಿ ಮದುವೆಯಾದ ಬಳಿಕ, ಸ್ನೇಹಿತ ನವೀನ್ ಅವರ ಮನೆಯಲ್ಲೇ ಬಾಡಿಗೆಗೆ ವಾಸವಿದ್ದರು. ಈ ವೇಳೆ ನವೀನ್ ತನ್ನ ಪತ್ನಿ ಮೇಲೆ ಕಣ್ಣು ಹಾಕಿರುವುದು ನಿತೇಶ್ ಗಮನಕ್ಕೆ ಬಂದಿತ್ತು. ನವೀನ್‌ನ ನಂಬರ್ ಅನ್ನು ಹುಡುಗಿಯ ಹೆಸರಿನಲ್ಲಿ ಸೇವ್ ಮಾಡಿಕೊಂಡು ಪತ್ನಿ ಚಾಟಿಂಗ್ ಮಾಡುತ್ತಿದ್ದಳು. ಈ ಬಗ್ಗೆ ಹಲವು ಬಾರಿ ಬುದ್ಧಿ ಮಾತು ಹೇಳಿದ್ದ ನಿತೇಶ್, ನಂತರ ಬನಶಂಕರಿಯ ಬೇರೊಂದು ಮನೆಗೆ ಶಿಫ್ಟ್ ಆಗಿದ್ದರು.

ಬನಶಂಕರಿಗೆ ಹೋದ ಮೇಲೂ ನವೀನ್ ಜೊತೆಗಿನ ಸಂಪರ್ಕ ಮುಂದುವರಿದಿತ್ತು. ಮೂರು ದಿನಗಳ ಹಿಂದೆ ಹೊಟ್ಟೆನೋವು ಎಂದು ಕೆಲಸಕ್ಕೆ ರಜೆ ಹಾಕಿದ್ದ ಪತ್ನಿ, ಬ್ಯಾಗ್ ಪ್ಯಾಕ್ ಮಾಡಿಕೊಂಡು ಪ್ರಿಯಕರ ನವೀನ್ ಜೊತೆ ಎಸ್ಕೇಪ್ ಆಗಿದ್ದಾಳೆ. ಪತ್ನಿ ನಾಪತ್ತೆಯಾದ ಬಗ್ಗೆ ನಿತೇಶ್ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಯುವತಿ ಮತ್ತು ನವೀನ್‌ನನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದಾರೆ. ಆದರೆ ಪೊಲೀಸರ ಮುಂದೆ ಪತ್ನಿ ಒಂದು ಶಾಕಿಂಗ್​​​ ಹೇಳಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ‘ನನ್ನ ಹೆಂಡತಿ 1 ಲಕ್ಷ ರೂ., ಚಿನ್ನ ವಾಪಸ್ ಕೊಡಲಿ!’ ಪತ್ನಿ ವಿರುದ್ಧ ಪತಿ ಆಕ್ರೋಶ

“ನಾನು ಯಾವುದೇ ಕಾರಣಕ್ಕೂ ಗಂಡನ ಜೊತೆ ಹೋಗಲ್ಲ, ಬದಲಾಗಿ ಪಿಜಿ (PG) ಹೋಗುತ್ತೇನೆ” ಎಂದು ಯುವತಿ ಹಠ ಹಿಡಿದಿದ್ದಾಳೆ.ಇದರಿಂದ ಕಂಗೆಟ್ಟಿರುವ ನಿತೇಶ್, “ನನಗೆ ಮೋಸವಾಗಿದೆ, ನ್ಯಾಯ ಕೊಡಿಸಿ” ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಜಯನಗರ ಪೊಲೀಸರು ಈ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:33 pm, Wed, 22 April 26

Follow Us