Bnegaluru News: ಹೆಬ್ಬಾಳ ಮೇಲ್ಸೇತುವೆ ಸರ್ವೀಸ್ ರಸ್ತೆ ಮುಂದಿನ ವಾರ ಸಂಚಾರಕ್ಕೆ ಮುಕ್ತ
ಹೆಬ್ಬಾಳ ಮೇಲ್ಸೇತುವೆ ಜಂಕ್ಷನ್‌ನಲ್ಲಿ ವಾಹನ ಸವಾರರು ಎದುರಿಸುತ್ತಿರುವ ಸಂಚಾರ ದಟ್ಟಣೆ ಮುಂದಿನ ವಾರದ ವೇಳೆಗೆ ನಿವಾರಣೆಯಾಗಲಿದೆ. ಹೌದು ಜುಲೈ ಆರಂಭದಿಂದ ಸಂಚಾರಕ್ಕೆ ಅಡಚಣೆಯಾಗಿದ್ದ ಪೊಲೀಸ್ ಠಾಣೆ ಮುಂಭಾಗದ ಸರ್ವೀಸ್ ರಸ್ತೆ ಮುಂದಿನ ವಾರ ಸಂಚಾರಕ್ಕೆ ಮುಕ್ತವಾಗಲಿದೆ.
ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆ (Hebbal Flyover) ಜಂಕ್ಷನ್‌ನಲ್ಲಿ ವಾಹನ ಸವಾರರು ಎದುರಿಸುತ್ತಿರುವ ಸಂಚಾರ ದಟ್ಟಣೆ (Traffic) ಮುಂದಿನ ವಾರದ ವೇಳೆಗೆ ನಿವಾರಣೆಯಾಗಲಿದೆ. ಹೌದು ಜುಲೈ ಆರಂಭದಿಂದ ಸಂಚಾರಕ್ಕೆ ಅಡಚಣೆಯಾಗಿದ್ದ ಪೊಲೀಸ್ ಠಾಣೆ ಮುಂಭಾಗದ ಸರ್ವೀಸ್ ರಸ್ತೆ (Service Road) ಮುಂದಿನ ವಾರ ಸಂಚಾರ ಮುಕ್ತವಾಗಲಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ವಿಸ್ ರಸ್ತೆ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ನಿನ್ನೆ (ಜು.20) ರಂದು ಕಾಂಕ್ರಿಟೀಕರಣ ಪೂರ್ಣಗೊಂಡಿದೆ. ಇದು ಗಟ್ಟಿಯಾಗಲು ಒಂದುವಾರ ಬೇಕು. ಹೀಗಾಗಿ ಮುಂದಿನ ಬುಧವಾರ ಅಥವಾ ಗುರುವಾರದಂದು ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಿಡಿಎಯ ಹಿರಿಯ ಎಂಜಿನಿಯರ್ ತಿಳಿಸಿದರು.
ಈ ಸರ್ವಿಸ್ ರಸ್ತೆಯಿಂದ ನಾಲ್ಕು ಅಡ್ಡರಸ್ತೆಗಳು ಹೋಗುವುದರಿಂದ ಹೆಬ್ಬಾಳ ಗ್ರಾಮ ಮತ್ತು ಸುತ್ತಮುತ್ತಲಿನ ನಿವಾಸಿಗಳು ಈ ರಸ್ತೆಯನ್ನು ಬಳಸಬಹುದಾಗಿದೆ. ಈಗಿರುವ ಎಸ್ಟೀಮ್ ಮಾಲ್‌ನಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆವರೆಗಿನ ಹೆಬ್ಬಾಳ ಮೇಲ್ಸೇತುವೆ ರ್ಯಾಂಪ್ಗೆ (Hebbal flyover ramp work) ಇನ್ನೂ ಮೂರು ರ್ಯಾಂಪ್ಗಳನ್ನು ಅಳವಡಿಸುವ ಮೂಲಕ ಹೆಬ್ಬಾಳ ಮೇಲ್ಸೇತುವೆಯ ಅಗಲೀಕರಣಕ್ಕೆ ಬಿಡಿಎ ಮುಂದಾಗಿದೆ. ಪ್ರತಿಯೊಂದು ಲೇನ್ 700 ಮೀಟರ್ ಉದ್ದ ಮತ್ತು ಒಟ್ಟು 10.5 ಮೀಟರ್ ಅಗಲ ಇರಲಿದೆ.
ಇದನ್ನೂ ಓದಿ: Drinking Water: ದಕ್ಷಿಣ ಬೆಂಗಳೂರು ವ್ಯಾಪ್ತಿಯ ಹೆಚ್ಚಿನ ಕಡೆಗಳ ನೀರು ಕುಡಿಯಲು ಯೋಗ್ಯವಲ್ಲ; ಬಿಬಿಎಂಪಿ ಸಮೀಕ್ಷೆ
ಈ ಕಾಮಗಾರಿಗೆ ಸಂಬಂಧಿಸಿದಂತೆ ಮಾತ್ರ ಸರ್ವಿಸ್ ರಸ್ತೆಯನ್ನು ನಿರ್ಬಂಧಿಸಲಾಗಿದೆ. ಕಾಮಗಾರಿಯನ್ನು ಕೈಗೊಳ್ಳಲು ನಾವು ಫ್ಲೈಓವರ್ನ ಕೆಲವು ಭಾಗಗಳಲ್ಲಿ ಸಂಚಾರಕ್ಕೆ ನಿರ್ಬಂಧಿಸಿದ್ದೇವು. ಇದಾದ ಬಳಿಕ ಇನ್ನೊಂದು ಭಾಗವನ್ನು ಮುಚ್ಚುತ್ತೇವೆ. ಹೊಸ ರ್ಯಾಂಪ್ಗಳನ್ನು ಸೇರಿಸುವ ಕೆಲಸವು 2023ರ ಜನವರಿ 1 ರಿಂದ ಪ್ರಾರಂಭವಾಗಿದೆ. ಇಲ್ಲಿಯವರೆಗೆ ಹೆಬ್ಬಾಳದಿಂದ ರೈಲ್ವೆ ಕ್ರಾಸಿಂಗ್‌ವರೆಗೆ ಹತ್ತು ಕಂಬಗಳ ವಿನ್ಯಾಸ ಮತ್ತು ಯೋಜನೆ ಸಿದ್ಧವಾಗಿದೆ. ಎಲ್ಲಾ ಹತ್ತು ಕಂಬಗಳಿಗೆ ಅಡಿಪಾಯ ಹಾಕುವ ಕಾರ್ಯ ಪೂರ್ಣಗೊಂಡಿದೆ ಎಂದು ಹೇಳಿದರು.
ಸಂಚಾರ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ನಗರದ ಹೆಬ್ಬಾಳ ಫ್ಲೈಓವರ್ಗೆ ಹೆಚ್ಚುವರಿ ರ‍್ಯಾಂಪ್ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆ ಹೆಬ್ಬಾಳ ಪೊಲೀಸ್ ಠಾಣೆಯಿಂದ ಬೆಂಗಳೂರು ಸರ್ವಿಸ್ ರಸ್ತೆ ಬಂದ್ ಮಾಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ