AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Traffic Fine: ಟ್ರಾಫಿಕ್​ ಫೈನ್​​ಗೆ ಶೇ 50ರಷ್ಟು ರಿಯಾಯಿತಿ, ಮೊದಲ ದಿನ ಸಂಗ್ರಹವಾಯ್ತು ಲಕ್ಷ ಲಕ್ಷ ರೂ.

ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡವರಿಗೆ ಕರ್ನಾಟಕ ಸರ್ಕಾರವು ಶೇ 50 ರಷ್ಟು ರಿಯಾಯಿತಿಯನ್ನು ಘೋಷಿಸಿದ ನಂತರ ಬೆಂಗಳೂರು ಸಂಚಾರ ಪೊಲೀಸರು ಗುರುವಾರ (ಜು.6) ಮೊದಲ ದಿನ 22.49 ಲಕ್ಷ ರೂಪಾಯಿ ದಂಡವನ್ನು ಸಂಗ್ರಹಿಸಿದ್ದಾರೆ.

Bengaluru Traffic Fine: ಟ್ರಾಫಿಕ್​ ಫೈನ್​​ಗೆ ಶೇ 50ರಷ್ಟು ರಿಯಾಯಿತಿ, ಮೊದಲ ದಿನ ಸಂಗ್ರಹವಾಯ್ತು ಲಕ್ಷ ಲಕ್ಷ ರೂ.
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on:Jul 07, 2023 | 12:36 PM

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ದಂಡ (Traffic Fine) ಬಾಕಿ ಉಳಿಸಿಕೊಂಡವರಿಗೆ ಕರ್ನಾಟಕ ಸರ್ಕಾರವು (Karnataka Government) ಶೇ 50 ರಷ್ಟು ರಿಯಾಯಿತಿಯನ್ನು ಘೋಷಿಸಿದ ನಂತರ ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಗುರುವಾರ (ಜು.6) ಮೊದಲ ದಿನ 22.49 ಲಕ್ಷ ರೂಪಾಯಿ ದಂಡವನ್ನು ಸಂಗ್ರಹಿಸಿದ್ದಾರೆ. ಫೆಬ್ರವರಿ 11, 2023 ರಂದು ಅಥವಾ ಅದಕ್ಕೂ ಮೊದಲು ದಾಖಲಾದ ಪ್ರಕರಣಗಳಿಗೆ ಸರ್ಕಾರವು ಬುಧವಾರ ರಿಯಾಯಿತಿಯನ್ನು ಘೋಷಿಸಿತ್ತು. ಬಾಕಿ ಇರುವ ದಂಡವನ್ನು ಪಾವತಿಸಲು ಸೆಪ್ಟೆಂಬರ್ 9ರ ಗಡುವು ನೀಡಿದೆ.

ನಿಯಮ ಉಲ್ಲಂಘಿಸಿದವರಿಂದ 22,49,600 ರೂಪಾಯಿ ದಂಡ ವಸೂಲಿ ಮಾಡಲಾಗಿದ್ದು, 7,216 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ನಿಯಮ ಉಲ್ಲಂಘಿಸಿದವರು ವೈಯಕ್ತಿಕ ಡಿಜಿಟಲ್ ಸಹಾಯಕ (PDA), ಕರ್ನಾಟಕ ರಾಜ್ಯ ಪೊಲೀಸ್ (KSP) ಮೊಬೈಲ್ ಅಪ್ಲಿಕೇಶನ್, ಆಟೊಮೇಷನ್ ಕೇಂದ್ರಗಳು ಮತ್ತು ಬೆಂಗಳೂರು ಒನ್ ಮೂಲಕ ಜನರು ಬಾಕಿ ಪಾವತಿಸಿದ್ದಾರೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru News: ನಗರವಾಸಿಗಳಿಗಾಗಿ ಬಿಬಿಎಂಪಿ ಪರಿಚಯಿಸಿದೆ ಕ್ಯೂಆರ್​​ ಕೋಡ್ ಸ್ಕ್ಯಾನರ್‌; ಏನಿದರ ವಿಶೇಷತೆ ಇಲ್ಲಿದೆ ಮಾಹಿತಿ ​

ಕರ್ನಾಟಕ ಸರ್ಕಾರವು ಸಂಚಾರ ನಿಯಮ ಉಲ್ಲಂಘಿಸಿದವರಿಗೆ ರಿಯಾಯಿತಿಯನ್ನು ನೀಡುತ್ತಿರುವುದು ಇದು ಮೂರನೇ ಬಾರಿ ಆಗಿದೆ. ಈ ರಿಯಾಯಿತಿಯನ್ನು ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವು ಈ ವರ್ಷದ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಘೋಷಿಸಿತ್ತು. ಇದರಿಂದ ಬಾಕಿ ಉಳಿದಿರುವ 120 ಕೋಟಿ ರೂ. ದಂಡ ಸಂಗ್ರಹವಾಗಿತ್ತು. ಬಳಿಕ ಮಾರ್ಚ್‌ನಲ್ಲಿ ಮತ್ತೆ 15 ದಿನಗಳ ಕಾಲ ರಿಯಾಯಿತಿ ನೀಡಲಾಗಿತ್ತು.

ರಿಯಾಯಿತಿಯೊಂದಿಗೆ ದಂಡವನ್ನು ಹೇಗೆ ಪಾವತಿಸಬಹುದು ಮತ್ತು ರಿಯಾಯಿತಿಯನ್ನು ಹೇಗೆ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ.

  • ಕರ್ನಾಟಕ ರಾಜ್ಯ ಪೊಲೀಸ್ (KSP) ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಪಾವತಿ ಮಾಡಬಹುದು.
  • ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ವೆಬ್‌ಸೈಟ್‌ಗೆ ಲಾಗ್ ಇನ್ ಆಗಿ, ವಾಹನದ ನೋಂದಣಿ ಸಂಖ್ಯೆಯ ವಿವರಗಳನ್ನು ನಮೂದಿಸುವ ಮೂಲಕ ಬಾಕಿ ಪಾವತಿಯನ್ನು ಮಾಡಬಹುದು.
  • ದಂಡವನ್ನು ಪರಿಶೀಲಿಸಲು ಮತ್ತು ಪಾವತಿಸಲು ಹತ್ತಿರದ ಸಂಚಾರ ಪೊಲೀಸ್ ಠಾಣೆಗೆ ಭೇಟಿ ನೀಡುವ ಮೂಲಕ ದಂಡ ಪಾವತಿಸಬಹುದು
  • ಇನ್‌ಫೆಂಟ್ರಿ ರಸ್ತೆಯಲ್ಲಿರುವ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ಗೆ ಭೇಟಿ ನೀಡಿ ಬಾಕಿ ಇರುವ ಅಪರಾಧಗಳ ವಿವರಗಳನ್ನು ಪಡೆದು ನಂತರ ದಂಡವನ್ನು ಪಾವತಿಸಬಹುದು.

ಜುಲೈ 6 ಮತ್ತು ಸೆಪ್ಟೆಂಬರ್ 9 ರ ನಡುವೆ ಬಾಕಿಯನ್ನು ಪಾವತಿಸಬಹುದು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 080-22942883 ಅಥವಾ 080-22943381 ಅನ್ನು ಸಂಪರ್ಕಿಸಬಹುದು ಎಂದೂ ಅವರು ಹೇಳಿದ್ದಾರೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:35 pm, Fri, 7 July 23

5 ಎಸೆತಗಳಲ್ಲಿ 5 ವಿಕೆಟ್ ಉರುಳಿಸಿದ ದಿಗ್ವೇಶ್ ರಾಥಿ
5 ಎಸೆತಗಳಲ್ಲಿ 5 ವಿಕೆಟ್ ಉರುಳಿಸಿದ ದಿಗ್ವೇಶ್ ರಾಥಿ
ಸೈಪ್ರಸ್​​ನ ಐತಿಹಾಸಿಕ ಭೇಟಿ ಮುಗಿಸಿ ಕೆನಡಾಕ್ಕೆ ಹೊರಟ ಭಾರತದ ಪ್ರಧಾನಿ ಮೋದಿ
ಸೈಪ್ರಸ್​​ನ ಐತಿಹಾಸಿಕ ಭೇಟಿ ಮುಗಿಸಿ ಕೆನಡಾಕ್ಕೆ ಹೊರಟ ಭಾರತದ ಪ್ರಧಾನಿ ಮೋದಿ
ಕಾಂತಾರ ತಂಡದ ಯಾರಿಗೂ ಗಾಯ ಆಗಿಲ್ಲ: ಶಿವಮೊಗ್ಗ ಜಿಲ್ಲಾಧಿಕಾರಿ ಸ್ಪಷ್ಟನೆ
ಕಾಂತಾರ ತಂಡದ ಯಾರಿಗೂ ಗಾಯ ಆಗಿಲ್ಲ: ಶಿವಮೊಗ್ಗ ಜಿಲ್ಲಾಧಿಕಾರಿ ಸ್ಪಷ್ಟನೆ
ಹ್ಯಾನ್ಲೆಯಲ್ಲಿ ಮಿನಿ ತಾರಾಲಯಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ
ಹ್ಯಾನ್ಲೆಯಲ್ಲಿ ಮಿನಿ ತಾರಾಲಯಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ
ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತಿಸಿದ ಸೈಪ್ರಸ್ ಶಾಸಕಿ
ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತಿಸಿದ ಸೈಪ್ರಸ್ ಶಾಸಕಿ
ದಾವಣಗೆರೆಗೆ ಕಾರಲ್ಲಿ ಬಂದಿದ್ದಕ್ಕೆ ತಡವಾಯ್ತು ಎಂದ ಸಿಎಂ ಸಿದ್ದರಾಮಯ್ಯ
ದಾವಣಗೆರೆಗೆ ಕಾರಲ್ಲಿ ಬಂದಿದ್ದಕ್ಕೆ ತಡವಾಯ್ತು ಎಂದ ಸಿಎಂ ಸಿದ್ದರಾಮಯ್ಯ
ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಉರುಳಿಸಿದ ನೂರ್ ಅಹ್ಮದ್
ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಉರುಳಿಸಿದ ನೂರ್ ಅಹ್ಮದ್
ಅಕ್ರಮ ಗಣಿಗಾರಿಕೆ ಆರೋಪಗಳಿಂದ ಮುಕ್ತನಾಗಿದ್ದೇನೆ: ಜನಾರ್ಧನ ರೆಡ್ಡಿ
ಅಕ್ರಮ ಗಣಿಗಾರಿಕೆ ಆರೋಪಗಳಿಂದ ಮುಕ್ತನಾಗಿದ್ದೇನೆ: ಜನಾರ್ಧನ ರೆಡ್ಡಿ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ