ಬೆಂಗಳೂರಿನಲ್ಲಿ ಕ್ರೀಡಾ ಸೌಲಭ್ಯಗಳ ಉದ್ಘಾಟನೆ: ಬಾಸ್ಕೆಟ್‌ಬಾಲ್ ಆಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್
ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಮೂರು ಕ್ರೀಡಾ ಹೊಸ ಸೌಲಭ್ಯಗಳನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಶನಿವಾರ ಉದ್ಘಾಟನೆ ಮಾಡಿದ್ದಾರೆ. ಬಳಿಕ ಅವರು ಬಾಸ್ಕೆಟ್ ಬಾಲ್ ಆಡಿದ್ದಾರೆ. ಈ ಸೌಲಭ್ಯಗಳನ್ನು ಒಟ್ಟು ₹69.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಬೆಂಗಳೂರು, ಡಿಸೆಂಬರ್ 23: ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur) ಅವರು ಶನಿವಾರ ನಗರದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಮೂರು ಹೊಸ ಕ್ರೀಡಾ ಸೌಲಭ್ಯಗಳನ್ನು ಉದ್ಘಾಟಿಸಿದ್ದಾರೆ. ಅದರಲ್ಲಿ ಒಂದಾಗಿರುವ ನೇತಾಜಿ ಸುಭಾಸ್ ಪುರುಷರ ವಸತಿ ನಿಲಯ ಉದ್ಘಾಟನೆ ಬಳಿಕ ಸಚಿವ ಅನುರಾಗ್ ಠಾಕೂರ್ ಅವರು ಬಾಸ್ಕೆಟ್ ಬಾಲ್ ಆಡಿದ್ದಾರೆ.
300-ಹಾಸಿಗೆ ವ್ಯವಸ್ಥೆ ಇರುವ ಪುರುಷರ ವಸತಿ ನಿಲಯ ಮತ್ತು ಎಂಟು ಲೇನ್ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ನ್ನು ಒಳಗೊಂಡಿವೆ. ಇವೆರಡನ್ನೂ ಕೇಂದ್ರದ ಖೇಲೋ ಇಂಡಿಯಾ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ಜೊತೆಗೆ 330 ಬೆಡ್ಗಳನ್ನು ಹೊಂದಿರುವ ಮಹಿಳಾ ವಸತಿ ನಿಲಯವನ್ನು ಸಹ ಉದ್ಘಾಟಿಸಿದ್ದಾರೆ. ಈ ಸೌಲಭ್ಯಗಳನ್ನು ಒಟ್ಟು ₹69.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
#WATCH | Karnataka: Union Sports Minister Anurag Thakur plays basketball after the inauguration of the Men’s Hostel at Netaji Subhas Southern Centre, Bengaluru.
(Source: Sports Authority of India) pic.twitter.com/gaQCVZFbCP
— ANI (@ANI) December 23, 2023
ಈ ಹೊಸ ಮೂರು ಸೌಲಭ್ಯಗಳು ಕೇಂದ್ರದ ತರಬೇತಿ ವಾತಾವರಣ ವ್ಯವಸ್ಥೆಯನ್ನು ಗಣನೀಯವಾಗಿ ಹೆಚ್ಚಿಸುತ್ತವೆ. ಅಷ್ಟೇ ಅಲ್ಲದೆ ಅಥ್ಲೆಟಿಕ್ಸ್, ಹಾಕಿ, ಪ್ಯಾರಾ-ಸ್ಪೋರ್ಟ್ಸ್ ಮತ್ತು ರಾಷ್ಟ್ರೀಯ ಮಹಿಳಾ ಮತ್ತು ಪುರುಷರ ಹಾಕಿ ಕ್ರೀಡೆಗಳಿಗೆ ಪ್ರಮುಖ ಕೇಂದ್ರವಾಗಿದೆ.
It is a moment of pride to inaugurate three new facilities dedicated to the nation at National Centre of Excellence @SAI_Bengaluru
Inaugurated a 300-Bedded Men’s Hostel and an 8-lane Synthetic Athletic Track, both developed under the Khelo India Scheme by the Government of… pic.twitter.com/9ONAOIvFQO
— Anurag Thakur (@ianuragthakur) December 23, 2023
ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ಕೇಂದ್ರವು ಆಟಗಾರರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಕ್ರೀಡಾ ಬಜೆಟ್ನ್ನು ಮೂರು ಪಟ್ಟು ಹೆಚ್ಚಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಪತ್ರಿಕಾ ಸ್ವಾತಂತ್ರ್ಯ, ಪತ್ರಕರ್ತರ ಸುರಕ್ಷತೆ ಸರ್ಕಾರದ ಆದ್ಯತೆ: ಅನುರಾಗ್ ಠಾಕೂರ್
ಮುಂಬರುವ ದಿನಗಳಲ್ಲಿ ಬೆಂಗಳೂರು ಉನ್ನತ ದರ್ಜೆಯ ಕ್ರೀಡಾ ಮೂಲಸೌಕರ್ಯ ಮತ್ತು ಸಕ್ರಿಯ ಪಾಲುದಾರರ ಒಳಗೊಳ್ಳುವಿಕೆಯೊಂದಿಗೆ ಭಾರತದ ಕ್ರೀಡಾ ಕೇಂದ್ರವಾಗಲು ಸಿದ್ಧವಾಗಿದೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.
ಎಲ್ಲಾ ಕ್ರೀಡಾಪಟುಗಳು ‘ಮೈ ಭಾರತ’ ಉಪಕ್ರಮದ ಲಾಭವನ್ನು ಪಡೆದುಕೊಳ್ಳಲು ಮತ್ತು 2047 ರ ವೇಳೆಗೆ ವಿಕಸಿತ ಭಾರತ್ ಕಡೆಗೆ ನಮ್ಮ ಪ್ರಯಾಣದಲ್ಲಿ ಬದಲಾವಣೆ ತರೋಣ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:45 pm, Sat, 23 December 23