ಬೆಂಗಳೂರಿನ ಇಂದಿರಾನಗರ ಮೆಟ್ರೋ ಬಳಿ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ

ಬೆಂಗಳೂರಿನ ಇಂದಿರಾನಗರ ಮೆಟ್ರೋ ಬಳಿ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ
ಟೌಯಿಂಗ್ ಸಿಬ್ಬಂದಿ ಮೇಲೆ ಹಲ್ಲೆಯ ದೃಶ್ಯ

ಜನರ ಆಕ್ರೋಶಕ್ಕೆ ಮಣಿದು ಟೋಯಿಂಗ್ ಸಿಬ್ಬಂದಿ ಸ್ಥಳದಿಂದ ತೆರಳಿದ್ದಾರೆ. ಹಲಸೂರು ಸಂಚಾರಿ ಠಾಣಾ ವ್ಯಾಪ್ತಿಯಲ್ಲಿರುವ ಇಂದಿರಾನಗರದಲ್ಲಿ ಈ ಘಟನೆ ನಡೆದಿದೆ.

TV9kannada Web Team

| Edited By: guruganesh bhat

Aug 19, 2021 | 10:35 PM

ಬೆಂಗಳೂರು: ನಗರದ ಇಂದಿರಾನಗರ ಮೆಟ್ರೋ ಬಳಿ ಟೋಯಿಂಗ್ ಸಿಬ್ಬಂದಿಯನ್ನು ಕೆಲವರು ಥಳಿಸಿದ ಘಟನೆ ನಡೆದಿದೆ. ಪಾರ್ಕಿಂಗ್ ಸ್ಥಳದಲ್ಲಿದ್ದ ವಾಹನ ಕೊಂಡೊಯ್ಯುತ್ತಿದ್ದಾರೆ ಎಂದು ಆರೋಪಿಸಿ ಟೋಯಿಂಗ್ ಸಿಬ್ಬಂದಿ, ಸಂಚಾರಿ ಪೊಲೀಸರ ಜತೆ ಕೆಲವರು ಗಲಾಟೆ ಮಾಡಿದ್ದಾರೆ. ಈವೇಳೆ ಆಕ್ರೋಶಗೊಂಡು ಟೋಯಿಂಗ್ ಸಿಬ್ಬಂದಿಗೆ ಥಳಿಸಿದ್ದಾರೆ. ಜನರ ಆಕ್ರೋಶಕ್ಕೆ ಮಣಿದು ಟೋಯಿಂಗ್ ಸಿಬ್ಬಂದಿ ಸ್ಥಳದಿಂದ ತೆರಳಿದ್ದಾರೆ. ಹಲಸೂರು ಸಂಚಾರಿ ಠಾಣಾ ವ್ಯಾಪ್ತಿಯಲ್ಲಿರುವ ಇಂದಿರಾನಗರದಲ್ಲಿ ಈ ಘಟನೆ ನಡೆದಿದೆ.

ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇಂದಿರಾನಗರ ಠಾಣೆಯ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಕೆಂಚೇಗೌಡ ಎಂಬಾತ ಬಂಧಿತ ಆರೋಪಿ. ಬಂಧನಕ್ಕೊಳಗಾದ ಆರೋಪಿ ಸ್ಥಳೀಯರ ಪ್ರಚೋದನೆಗೊಳಗಾಗಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಚಪ್ಪಲಿ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಯಲಹಂಕ ಬಸ್ ನಿಲ್ದಾಣ ಸಮೀಪ ಹಲ್ಲೆ; ಆರೋಪಿಗಳ ಬಂಧನ ಬೆಂಗಳೂರಿ‌ನಲ್ಲಿ ಟೋಯಿಂಗ್ ಸಿಬ್ಬಂದಿ ಮೇಲೆ ಬೈಕ್ ಸವಾರರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ನಡೆಸಿದ್ದ ಆರೋಪದಡಿ ಇಬ್ಬರನ್ನು ಯಲಹಂಕ ನ್ಯೂಟೌನ್ ಪೊಲೀಸರು ಬಂದಿಸಿದ್ದಾರೆ. ವಿಜಯ್ ಮತ್ತು ರಾಜಶೇಖರ್ ಬಂಧಿತ ಆರೋಪಿಗಳಾಗಿದ್ದಾರೆ. ಜುಲೈ 28 ರಂದು ಯಲಹಂಕ ಬಸ್ ನಿಲ್ದಾಣ ಸಮೀಪ ನಡೆದಿದ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಸಿಬ್ಬಂದಿ ಬೈಕ್ ಟೋಯಿಂಗ್ ಮಾಡುತ್ತಿದ್ದರು. ಈ ವೇಳೆ ಟೋಲ್ ವಾಹನ ಏರಿ ಹೆಲ್ಮೆಟ್ನಿಂದ ಬೈಕ್ ಟೋಯಿಂಗ್ ಸಿಬ್ಬಂದಿಗೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ವೈರಲ್ ಆದ ಬಳಿಕ ಯಲಹಂಕ ನ್ಯೂಟೌನ್ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: 

ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಆಸ್ತಿ ಮೌಲ್ಯ ಜೂನ್​ ತ್ರೈಮಾಸಿಕದಲ್ಲಿ ಇಳಿಕೆ

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಅಪಸ್ವರ

(Bengaluru Indiranagar Metro Towing crew attacked by people)

Follow us on

Related Stories

Most Read Stories

Click on your DTH Provider to Add TV9 Kannada