ಬೆಂಗಳೂರ: ಬಾಕ್ಸ್​ಗಳಲ್ಲಿ ಕಂತೆ-ಕಂತೆ ಹಣ ಪತ್ತೆ: ಬಿಲ್ಡರ್​, ಚಿನ್ನದ ವ್ಯಾಪಾರಿ, ಗುತ್ತಿಗೆದಾರರಿಂದ ಇಷ್ಟೊಂದು ಹಣ ಸಂಗ್ರಹಿಸಿದ್ಯಾಕೆ? ಇಲ್ಲಿದೆ ಇನ್ ಸೈಡ್​ ಮಾಹಿತಿ

ಬೆಂಗಳೂರಿನ ಆರ್​ ಟಿ ನಗರದಲ್ಲಿರುವ ಮಾಜಿ ಕಾರ್ಪೊರೇಟರ್​​​​ ​​​ಅಶ್ವತ್ಥಮ್ಮ, ಪತಿ ಆರ್​.ಅಂಬಿಕಾಪತಿ ಮತ್ತು ​ಅಶ್ವತ್ಥಮ್ಮ ಅವರ ಬಾಮೈದ ಪ್ರದೀಪ್​​ ಫ್ಯ್ಲಾಟ್​​​​​​ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ಪರಿಶೀಲನೆ ವೇಳೆ 40 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ. ಇಷ್ಟು ಹಣವನ್ನು ಎಲ್ಲಿಂದ ಸಂಗ್ರಹಿಸಲಾಗಿದೆ, ಯಾಕೆ ಸಂಗ್ರಹಿಸಲಾಗಿದೆ ಎಂಬ ಇನ್​ ಸೈಡ್​ ಮಾಹಿತಿ ಟಿವಿ9 ಡಿಜಿಟಲ್​​​ಗೆ ಲಭ್ಯವಾಗಿದೆ.

ಬೆಂಗಳೂರ: ಬಾಕ್ಸ್​ಗಳಲ್ಲಿ ಕಂತೆ-ಕಂತೆ ಹಣ ಪತ್ತೆ: ಬಿಲ್ಡರ್​, ಚಿನ್ನದ ವ್ಯಾಪಾರಿ, ಗುತ್ತಿಗೆದಾರರಿಂದ ಇಷ್ಟೊಂದು ಹಣ ಸಂಗ್ರಹಿಸಿದ್ಯಾಕೆ? ಇಲ್ಲಿದೆ ಇನ್ ಸೈಡ್​ ಮಾಹಿತಿ
ಹಣ
Follow us
| Updated By: ವಿವೇಕ ಬಿರಾದಾರ

Updated on: Oct 13, 2023 | 10:45 AM

ಬೆಂಗಳೂರು ಅ.11: ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳು ಮಧ್ಯರಾತ್ರಿ ಬೆಂಗಳೂರಿನ ಆರ್​​. ಟಿ.ನಗರದ ಮಾಜಿ ಕಾರ್ಪೊರೇಟರ್ (Former Corporator)​​​​ ​​​ಅಶ್ವತ್ಥಮ್ಮ, ಪತಿ ಆರ್​.ಅಂಬಿಕಾಪತಿ ಮತ್ತು ​ಅಶ್ವತ್ಥಮ್ಮ ಅವರ ಬಾಮೈದ ಪ್ರದೀಪ್​​ ಫ್ಯ್ಲಾಟ್​​​​​​ ಮೇಲೆ ದಾಳಿ ಮಾಡಿದ್ದರು. ಪರಿಶೀಲನೆ ವೇಳೆ ಬೆಡ್​​ ರೂಮ್​ನ ಮಂಚದ ಕೆಳಗೆ 23 ಬಾಕ್ಸ್​​ನಲ್ಲಿ 500 ರೂ. ಮುಖಬೆಲೆಯ 40 ಕೋಟಿ ರೂ.ಗೂ ಅಧಿಕ ಕಂತೆ ಕಂತೆ ಹಣ ಪತ್ತೆಯಾಗಿದೆ. ಹಾಗಿದ್ದರೆ ಈ ಹಣ ಯಾರಿಗೆ ಸೇರಿದ್ದು, ಯಾಕೆ ಸಂಗ್ರಹಿಸಲಾಗಿತ್ತು, ಎಲ್ಲಿಗೆ ಕಳುಹಿಸಲು ಪ್ಲಾನ್​ ಮಾಡಿಕೊಂಡಿದ್ದರು ಎಂಬ ಇನ್​​ ಸೈಡ್ ಮಾಹಿತಿ ಟಿವಿ9 ಡಿಜಿಟಲ್​​ಗೆ ಲಭ್ಯವಾಗಿದೆ.

ಬೆಂಗಳೂರಿನಲ್ಲಿ ಬಿಲ್ಡರ್ಸ್​​​, ಚಿನ್ನದ ವ್ಯಾಪಾರಿಗಳು ಹಾಗೂ ಗುತ್ತಿಗೆದಾರರಿಂದ ಈ ಹಣ ಸಂಗ್ರಹಿಸಲಾಗಿದೆ. ಹೀಗೆ ಸಂಗ್ರಹಿಸಲಾದ ಹಣವನ್ನು ಬೆಂಗಳೂರಿನಿಂದ-ಚೆನ್ನೈಗೆ, ಚೆನ್ನೈಯಿಂದ-ಹೈದ್ರಬಾದ್​ಗೆ ವಾರ್ಗವಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ತೆಲೆಂಗಾಣ ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಇಲ್ಲಿ ಹಣ ಸಂಗ್ರಹಿಸಿ ಅಲ್ಲಿಗೆ ಕಳುಹಿಸಲು ಮುಂದಾಗಿದ್ದರು ಎಂಬ ಮಾಹಿತಿ ದೊರೆತಿದೆ. ಚುನಾವಣೆ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಅಲರ್ಟ್​​​ ಆಗಿದ್ದು ಕಳೆದ ಮೂರು ದಿನಗಳಿಂದ ರೇಡ್​​​ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಫ್ಲಾಟ್​ ಒಂದರ ಮೇಲೆ ಐಟಿ ದಾಳಿ, ಮಂಚದಡಿ ಕಂತೆ ಕಂತೆ ನೋಟುಗಳು ಪತ್ತೆ

ಯಾರು ಈ ಅಶ್ಚತಮ್ಮ ಮತ್ತು ಅಂಬಿಕಾಪತಿ

ಆರ್​.ಟಿ ನಗರದ ಆನಂದ ಕೊಲೋನಿ ನಿವಾಸಿಯಾಗಿರುವ ಅಶ್ವತಮ್ಮ ಕಾಂಗ್ರೆಸ್​ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಕ್ಕ. 2001ರಲ್ಲಿ ಕಾವಲ್ ಬೈರಸಂದ್ರ (ವಾರ್ಡ್​​ ನಂ 95)ರ ಕಾರ್ಪೊರೇಟರ್​​ ಆಗಿದ್ದರು. ಇವರ ಪತಿ ಆರ್.ಅಂಬಿಕಾಪತಿ ಕಾಂಟ್ರಾಕ್ಟರ್ ಆಗಿದ್ದಾರೆ. ಕೆಂಪಣ್ಣ ಅವರ ಕಾಂಟ್ರಾಕ್ಟರ್ ಸಂಘದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ರಾಜ್ಯದಲ್ಲಿ ನಡೆಯುವ ಕಾಮಗಾರಿಗೆ ಶೇ.40 ನೀಡಬೇಕು, ಬಿಬಿಎಂಪಿಯಲ್ಲಿ 50 ಪರ್ಸೆಂಟ್ ನೀಡಬೇಕು ಎಂದು ಆರೋಪ ಮಾಡಿದ್ದರು. ಕೆಲವು ರಾಜಕೀಯ ವ್ಯಕ್ತಿಗಳ ವಿರುದ್ಧ ಆರೋಪ ಮಾಡಿದ್ದರು.

ತನ್ನ ವಿರುದ್ಧ ಕಮಿಷನ್ ಆರೋಪ ಮಾಡಿದ ಬಿಜೆಪಿ ಶಾಸಕ ಮುನಿರತ್ನ ಅವರು ಅಂಬಿಕಾಪತಿ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ಹೂಡಿದ್ದರು. ಈ ಪ್ರಕರಣದಲ್ಲಿ ಅಂಬಿಕಾಪತಿ ವೈಯ್ಯಾಲಿಕಾವಲ್ ಠಾಣೆ ಪೊಲೀಸರಿಂದ ಬಂಧನಕ್ಕೊಳಗಾಗಿ ಬಳಿಕ ಜಾಮೀನು ಮೇಲೆ ಬಿಡುಗಡೆಯಾಗಿದ್ದರು.

ಅಂಬಿಕಾಪತಿ ಮೆನ ಮೇಲೂ ಐಟಿ ದಾಳಿ

ಆರ್​​ಟಿ ನಗರದ ವೈಟ್​ ಗೌಸ್​ನಲ್ಲಿರುವ ಅಂಬಿಕಾಪತಿ ಮಗಳ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಒಂದು ಮನೆ ಮತ್ತು ಆರ್​ಟಿ ನಗರದ ಸುಲ್ತಾನ್ ಪಾಳ್ಯದಲ್ಲಿ ಎರಡು ಕಡೆ ದಾಳಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?