Bengaluru: KPTCL ಕಾಮಗಾರಿಯಿಂದಾಗಿ ಆಗಸ್ಟ್‌ ಪೂರ್ತಿ ಎದುರಾಗಲಿದೆ ವಿದ್ಯುತ್ ಸಮಸ್ಯೆ, ನಿಮ್ಮ ಏರಿಯಾ ಇದಿಯಾ ನೋಡಿಕೊಳ್ಳಿ

ಈ ತಿಂಗಳು ಪೂರ್ತಿ ಅಂದರೆ ಆಗಸ್ಟ್ 1 ರಿಂದ ಆಗಸ್ಟ್ 28 ರವರೆಗೆ ತಿಂಗಳ ಎಲ್ಲಾ ದಿನಗಳಲ್ಲಿ ಕಾಮಗಾರಿ ಕಾರ್ಯ ನಡೆಯುತ್ತಿದ್ದು ಆಗಸ್ಟ್ ನಲ್ಲಿ ವಿದ್ಯುತ್ ಸೇವೆಯಲ್ಲಿ ವ್ಯತ್ಯಾಸ ಕಂಡು ಬರಲಿದೆ.

Bengaluru: KPTCL ಕಾಮಗಾರಿಯಿಂದಾಗಿ ಆಗಸ್ಟ್‌ ಪೂರ್ತಿ ಎದುರಾಗಲಿದೆ ವಿದ್ಯುತ್ ಸಮಸ್ಯೆ, ನಿಮ್ಮ ಏರಿಯಾ ಇದಿಯಾ ನೋಡಿಕೊಳ್ಳಿ
ಪವರ್ ಕಟ್
TV9kannada Web Team

| Edited By: Ayesha Banu

Aug 01, 2022 | 6:06 PM

ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಆಗಸ್ಟ್ ತಿಂಗಳಲ್ಲಿ ವಿದ್ಯುತ್ ಕಡಿತ ಸಮಸ್ಯೆ ಎದುರಾಗಲಿದೆ. ಕೆಪಿಟಿಸಿಎಲ್(Karnataka Power Transmission Corporation Limited) ಕಾಮಗಾರಿಯಿಂದಾಗಿ ಆಗಸ್ಟ್‌ನಲ್ಲಿ ವಿದ್ಯುತ್ ಕಡಿತಗೊಳ್ಳುವ ಸಾಧ್ಯತೆ ಇದೆ. ಹಾಗಾದ್ರೆ ಆಗಸ್ಟ್ನಲ್ಲಿ ಯಾವ ಯಾವ ಏರಿಯಾಗಳಲ್ಲಿ ಕರೆಂಟ್ ಇರಲ್ಲ ಎಂಬ ಡಿಟೈಲ್ಸ್ ಇಲ್ಲಿದೆ.

ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಆಗಸ್ಟ್‌ನಲ್ಲಿ ಕೆಲವು ಕಾಮಗಾರಿಗಳನ್ನು ಕೈಗೊಳ್ಳಲಿದೆ. ಕೆಪಿಟಿಸಿಎಲ್, ಈ ಕಾಮಗಾರಿಯನ್ನು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಕೈಗೊಳ್ಳುರಿದ್ದಾರೆ. ಹೀಗಾಗಿ ಬೆಸ್ಕಾಂ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಮಾಹಿತಿಯ ಪ್ರಕಾರ, ಈ ತಿಂಗಳು ಪೂರ್ತಿ ಅಂದರೆ ಆಗಸ್ಟ್ 1 ರಿಂದ ಆಗಸ್ಟ್ 28 ರವರೆಗೆ ತಿಂಗಳ ಎಲ್ಲಾ ದಿನಗಳಲ್ಲಿ ಕಾಮಗಾರಿ ಕಾರ್ಯ ನಡೆಯುತ್ತಿದ್ದು ಆಗಸ್ಟ್ ನಲ್ಲಿ ವಿದ್ಯುತ್ ಸೇವೆಯಲ್ಲಿ ವ್ಯತ್ಯಾಸ ಕಂಡು ಬರಲಿದೆ.

ವೈಟ್‌ಫೀಲ್ಡ್ ವಿಭಾಗದಲ್ಲಿ ಸುಮಾರು 57 ಗಂಟೆಗಳ ಕಾಲ ಕಾಮಗಾರಿ ನಡೆಯಲಿದ್ದು ಇದಕ್ಕೆ ಮೂರು ದಿನಗಳಿಂದ ಏಳು ದಿನಗಳಾಗಬಹುದು. ಹೀಗಾಗಿ ಬೆಸ್ಕಾಂ ಅಧಿಕಾರಿಗಳು ಇದಕ್ಕೆ ಪರ್ಯಾಯ ವಿದ್ಯುತ್ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಆದರೂ ವಿದ್ಯುತ್ ವ್ಯತ್ಯಯವಾಗಲಿದೆ. ಬೆಂಗಳೂರಿನಲ್ಲಿ ಹಲವು ಯೋಜನೆಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನಿಗಮ ಒಪ್ಪಿಗೆ ನೀಡಿದೆ. ಯೋಜನೆಗಳು ತಡೆಗಟ್ಟುವ, ತ್ರೈಮಾಸಿಕ, ಅರ್ಧ-ವಾರ್ಷಿಕ ಮತ್ತು ವಾರ್ಷಿಕ ನಿರ್ವಹಣಾ ಕಾರ್ಯಗಳನ್ನು ಒಳಗೊಂಡಿವೆ.

ಆಗಸ್ಟ್ ತಿಂಗಳಲ್ಲಿ ವಿದ್ಯುತ್ ಸಮಸ್ಯೆ ಎದುರಿಸಬಹುದಾದ ಏರಿಯಾಗಳು

ಕನಕಪುರ, ರಾಮನಗರ, ಮದ್ದೂರು, ಎಚ್‌ಎಸ್‌ಆರ್, ಚಂದಾಪುರದ ಹಲವು ಭಾಗಗಳು, ಮಾಗಡಿ, ನೆಲಮಂಗಲ, ಕೆಂಗೇರಿ, ಹೊಸಕೋಟೆ, ನಂದಗುಡಿ, ದೇವನಹಳ್ಳಿ, ಆವಲಹಳ್ಳಿ, ಚಿಂತಾಮಣಿ, ಚಿಕ್ಕಬಳ್ಳಾಪುರ, ಕೆಜಿಎಫ್, ಕೋಲಾರ, ವಿಧಾನಸೌಧದ ಡಬ್ಲ್ಯು 5, ಡಬ್ಲ್ಯು 3 ಮತ್ತು ಡಬ್ಲ್ಯು 4, ಆರ್.ಆರ್.ಆರ್. ನಗರ ವಿಭಾಗ W2, ಜಯನಗರ, ರಾಜಾಜಿನಗರ, ಎಚ್‌ಎಸ್‌ಆರ್ ಲೇಔಟ್, ಕೋರಮಂಗಲ, ಇಂದಿರಾನಗರ, ವೈಟ್‌ಫೀಲ್ಡ್ ವಿಭಾಗ, ಶಿವಾಜಿನಗರ ವಿಭಾಗ, ಹೆಬ್ಬಾಳ ವಿಭಾಗ, ಹೆಚ್ಚುವರಿ ಕೇಂದ್ರ ವಿಭಾಗ, ಯಲಹಂಕ ಹೊಸ ಪಟ್ಟಣ, ಮಲ್ಲೇಶ್ವರಂ, ಜಾಲಹಳ್ಳಿ, ಹೆಬ್ಬಾಳ ಹೆಚ್ಚುವರಿ ಕೇಂದ್ರ ಉಪವಿಭಾಗಗಳಲ್ಲಿ ಹಲವಾರು ವಿಭಾಗಗಳು ಮತ್ತು ಉಪ-ವಿಭಾಗಗಳು, ಎನ್ಆರ್ಎಸ್ ವಿಭಾಗ, ಇತ್ಯಾದಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada