ಬೆಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿಯ ಇಬ್ಬರು ಇಂಜಿನಿಯರ್​ಗಳು

ಲೋಕಾಯುಕ್ತ ಅಧಿಕಾರಿಗಳು ಬಿಬಿಎಂಪಿಯ ಇಬ್ಬರು ಎಂಜಿನಿಯರ್‌ಗಳನ್ನು ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಬಂಧಿಸಿದ್ದಾರೆ. ಹೆಬ್ಬಾಳ ಮತ್ತು ಆರ್‌ಎಂವಿ ಉಪವಿಭಾಗಗಳ ಎಂಜಿನಿಯರ್‌ಗಳು 10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ವರದಿಯಾಗಿದೆ. ಬಿಬಿಎಂಪಿ ಇಂಜಿನಿಯರ್​ಗಳು ಮುಂಗಡವಾಗಿ 5 ಲಕ್ಷ ರೂಪಾಯಿ ಲಂಚ ಪಡೆಯುವಾಗ ಬಂಧಿಸಲಾಗಿದೆ.

ಬೆಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿಯ ಇಬ್ಬರು ಇಂಜಿನಿಯರ್​ಗಳು
ಲೋಕಾಯುಕ್ತ, ಬಿಬಿಎಂಪಿ
Updated By: ವಿವೇಕ ಬಿರಾದಾರ

Updated on: May 21, 2025 | 9:01 PM

ಬೆಂಗಳೂರು, ಮೇ 21: ಲಂಚ ಸ್ವೀಕರಿಸುತ್ತಿದ್ದ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಇಂಜಿನಿಯರ್​ಗಳಿಬ್ಬರನ್ನು ಲೋಕಾಯುಕ್ತ (Lokayukta) ಅಧಿಕಾರಿಗಳು ಬಂಧಿಸಿದ್ದಾರೆ. ಹೆಬ್ಬಾಳ ಉಪ ವಿಭಾಗದ ಎಇಇ ಮಹದೇವ ಮತ್ತು ಆರ್​ಎಂವಿ ಉಪ ವಿಭಾಗದ ಎಇ ಸುರೇಂದ್ರ ಅವರನ್ನು ಲೋಕಾಯುಕ್ತ ಅಧಿಕಾರಿಗಳ ಬಂಧಿಸಿ, ಹಣ ಜಪ್ತಿ ಮಾಡಿದ್ದಾರೆ. ಎನ್ಒಸಿ ನೀಡಲು 10 ಲಕ್ಷ ರೂಪಾಯಿ ಲಂಚ ನೀಡುವಂತೆ ಬಿಬಿಎಂಪಿ ಇಂಜಿನಿಯರ್​ಗಳು ಬೇಡಿಕೆ ಇಟ್ಟಿದ್ದರು. ಸಂಜಯ್ ಎಂಬುವರಿಂದ ಮುಂಗಡವಾಗಿ 5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ರೆಡ್​ ಹ್ಯಾಂಡ್​ ಆಗಿ ಹಿಡಿದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸುತ್ತಿದ್ದಾರೆ.

ಲೋಕಾ ಬಲೆಗೆ ಬಿದ್ದ ಜಿಲ್ಲಾ ಪಂಚಾಯ್ತಿ ಲೆಕ್ಕಾಧಿಕಾರಿ

ಕಾರವಾರ: 20 ಸಾವಿರ ರೂ. ಲಂಚ ಪಡೆಯುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಜಿಲ್ಲಾ ಪಂಚಾಯತ್​ ಲೆಕ್ಕಾಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಕಚೇರಿಗೆ ಗುತ್ತಿಗೆ ವಾಹನ ನೀಡಿದ್ದ ವ್ಯಕ್ತಿಯೋರ್ವನಿಂದ ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಸುರೇಶ್ ಶಂಕ್ರಪ್ಪ ಬಿಳಗಿ 20 ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಧಿಕಾರಿ ಶಂಕ್ರಪ್ಪ ಬಿಳಗಿ ರೆಡ್​ ಆ್ಯಂಡ್​ ಆಗಿ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಇಸ್ಪೆಕ್ಟರ್ ವಿನಾಯಕ್ ಬಿಲ್ಲವ ನೇತ್ರತ್ವದಲ್ಲಿ ದಾಳಿ ನಡೆದಿದೆ.

ಇದನ್ನೂ ಓದಿ: 8 ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ಕಂತೆ-ಕಂತೆ ಹಣ, ವಜ್ರ-ವೈಡೂರ್ಯ ಪತ್ತೆ

ಇದನ್ನೂ ಓದಿ
ಕಾನೂನು ಮಾಪನ ನಿರೀಕ್ಷಕರ ಬಳಿ 4 ಕೋಟಿ ರೂ. ಆಸ್ತಿ, 9 ಎಕರೆ ಜಮೀನು!
ಲೋಕಾ ಶಾಕ್​​: ಕರ್ನಾಟಕದಾದ್ಯಂತ 7 ಅಧಿಕಾರಿಗಳ ಮನೆಗಳ ಮೇಲೆ ದಾಳಿ
ಸಿಎಂ ವಿರುದ್ಧ ಮುಡಾ ಕೇಸ್: ಕಾಲಾವಕಾಶ ಕೋರಿದ ಲೋಕಾಯುಕ್ತ ಪೊಲೀಸ್
ಲೋಕಾಯುಕ್ತ ಬಲೆಗೆ ಬಿದ್ದ ಶಿರಸಿ ನ್ಯಾಯಾಲಯದ ಹೆಚ್ಚುವರಿ ಎಪಿಪಿ

BBMP ಕಾರ್ಯಪಾಲಕ ಅಭಿಯಂತರರ ಕೋಟ್ಯಾಂತರ ರೂ ಆಸ್ತಿ ಪತ್ತೆ

ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಬಿಬಿಎಂಪಿ ಕಾರ್ಯಪಾಲಕ ಅಭಿಯಂತರರು ಹೆಚ್. ಬಿ. ಕಲ್ಲೇಶಪ್ಪಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಒಟ್ಟು 6,50,52, 663 ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಪತ್ತೆಯಾಗಿತ್ತು. ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ 4 ಕೋಟಿ 97 ಲಕ್ಷದ 34 ಸಾವಿರ ರೂ. ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ 1 ಕೋಟಿ 53 ಲಕ್ಷದ 18 ಸಾವಿರದ 663 ರೂ. ಆಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:59 pm, Wed, 21 May 25