ಹೈಟೆಕ್ ಆಗಲಿದೆ ಬೆಂಗಳೂರು ಮೆಜೆಸ್ಟಿಕ್ ಬಸ್ ನಿಲ್ದಾಣ: 40 ಎಕರೆಯಲ್ಲಿ ಬಹುಮಾದರಿ ಟ್ರಾನ್ಸ್​ಪೋರ್ಟ್ ಹಬ್

ಬೆಂಗಳೂರು ಅಂದರೆ ಥಟ್ಟನೇ ಕಣ್ಮುಂದೆ ಬರುವುದು ಮೆಜೆಸ್ಟಿಕ್ ಬಸ್ ನಿಲ್ದಾಣ. ಬೆಂಗಳೂರಿನ ಕಲಶವೆಂದರೇ ಅದು ಮೆಜೆಸ್ಟಿಕ್. ಸರ್ಕಾರ ಇದೀಗ ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ಹೈಟೆಕ್ ಮಾಡಲು ಹೊರಟಿದೆ. ಮುಂದೆ ಮೆಜೆಸ್ಟಿಕ್ ಬಸ್ ಸ್ಟಾಪ್ ಇಂಟರ್ ಮಾಡೆಲ್ ಟ್ರಾನ್ಸ್​​ಪೋರ್ಟ್ ಹಬ್ ಆಗಲಿದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಯಲಿದೆ.

ಹೈಟೆಕ್ ಆಗಲಿದೆ ಬೆಂಗಳೂರು ಮೆಜೆಸ್ಟಿಕ್ ಬಸ್ ನಿಲ್ದಾಣ: 40 ಎಕರೆಯಲ್ಲಿ ಬಹುಮಾದರಿ ಟ್ರಾನ್ಸ್​ಪೋರ್ಟ್ ಹಬ್
ಮೆಜೆಸ್ಟಿಕ್ ಬಸ್ ನಿಲ್ದಾಣ
Updated By: Ganapathi Sharma

Updated on: Jul 08, 2025 | 7:25 AM

ಬೆಂಗಳೂರು, ಜುಲೈ 8: ಬೆಂಗಳೂರಿನ (Bengaluru) ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್‌ ಬಸ್ ನಿಲ್ದಾಣಕ್ಕೆ (Mejestic Bus Stand) ಪ್ರತಿನಿತ್ಯ ಲಕ್ಷಾಂತರ ಜನ ಬಂದು ಹೋಗುತ್ತಾರೆ. ಸುಮಾರು ಮೂವತ್ತು‌ ವರ್ಷಗಳ ಇತಿಹಾಸವಿರುವ ಈ ಬಸ್ ನಿಲ್ದಾಣವನ್ನು ನವೀಕರಣ ಮಾಡಲು ಸರ್ಕಾರ ಮುಂದಾಗಿದೆ. ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಜಾಗವನ್ನು ‘ಪ್ರಾಜೆಕ್ಟ್‌ ಮೆಜೆಸ್ಟಿಕ್‌ (Project Mejestic)’ ಯೋಜನೆಯ ಅಡಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ಪುನರ್‌ ಅಭಿವೃದ್ಧಿಪಡಿಸಿ, ವಾಣಿಜ್ಯ ಸಂಕೀರ್ಣದೊಂದಿಗೆ ಸಾರಿಗೆ ಹಬ್‌ ನಿರ್ಮಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಘೋಷಣೆ ಮಾಡಿದ್ದರು. ಇದೀಗ ಸಾರಿಗೆ ಇಲಾಖೆಯು ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ಇಂಟರ್‌ ಮಾಡೆಲ್ ಟ್ರಾನ್ಸ್​​ಪೋರ್ಟ್ ಹಬ್ ಆಗಿ ಪರಿವರ್ತನೆಯಾಗಲು ಸಜ್ಜಾಗುತ್ತಿದೆ.

ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಈ ಯೋಜನೆ ಬಗ್ಗೆ ತಂತ್ರಜ್ಞ ಸಲಹೆಗಾರರನ್ನು ನೇಮಿಸಲು ಕೆಎಸ್​ಆರ್​ಟಿಸಿ ಟೆಂಡರ್ ಕರೆದಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಸರ್ಕಾರದ ಯೋಜನೆ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಮೆಜೆಸ್ಟಿಕ್ ಟ್ರಾನ್ಸ್​ಪೋರ್ಟ್ ಹಬ್ ಉದ್ದೇಶವೇನು?

ಮೆಜೆಸ್ಟಿಕ್ ಟ್ರಾನ್ಸ್​ಪೋರ್ಟ್ ಹಬ್ ಯೋಜನೆಯ ಉದ್ದೇಶವೆಂದರೆ, ನಗರ ಮತ್ತು ಅಂತರನಗರ ಸಾರಿಗೆ. ಮೆಟ್ರೋ ಮತ್ತು ರೈಲ್ವೆ ಸೇವೆಗಳ ನಡುವೆ ಉತ್ತಮ ಸಂಪರ್ಕ ಕಲ್ಪಿಸಿ ಪ್ರಯಾಣಿಕರಿಗೆ ಸುಗಮ ಸಂಚಾರ ಅನುಭವ ಒದಗಿಸುವುದು. ಸುಮಾರು 40 ಎಕರೆ ಭೂಭಾಗದಲ್ಲಿ ಈ ಹಬ್ ನಿರ್ಮಾಣವಾಗಲಿದೆ, ಇದು ಈಗಿರುವ ಕೆಎಸ್‌ಆರ್‌ಟಿಸಿ ಟರ್ಮಿನಲ್‌ಗಳು (1, 2, 3) ಅನ್ನು ಒಳಗೊಂಡಿರುತ್ತದೆ. ಶಾಪಿಂಗ್ ಕಾಂಪ್ಲೆಕ್ಸ್, ಆಹಾರ ಮಳಿಗೆಗಳು, ಕಚೇರಿ ಪ್ರದೇಶಗಳು ಸೇರಿ ವಾಣಿಜ್ಯ ವ್ಯವಸ್ಥೆಗೂ ಅವಕಾಶವಿರುತ್ತದೆ.

ಇದನ್ನೂ ಓದಿ
250 ಕೋಟಿ ರೂ. ಬಾಕಿ ಕೊಡದ ಸರ್ಕಾರ: ಅನ್ನಭಾಗ್ಯ ಆಹಾರ ಧಾನ್ಯ ಸಾಗಾಟ ಬಂದ್
ಎತ್ತಿನಹೊಳೆ‌ ಡ್ಯಾಂ ನಿರ್ಮಾಣಕ್ಕೆ ದೊಡ್ಡಬಳ್ಳಾಪುರ ಜನರಿಂದಲೂ ವಿರೋಧ!
ಸಚಿವ ಎಂಬಿ ಪಾಟೀಲ್​ಗೆ ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ ಟಾಂಗ್
ಪಾರ್ಟಿಗಳಲ್ಲಿ ಡ್ರಗ್ಸ್ ಸಿಕ್ಕರೆ ರೆಸಾರ್ಟ್, ಹೋಂ ಸ್ಟೇ ಮಾಲೀಕರ ಮೇಲೆ ಕೇಸ್

ಈಗ ಕೆಎಸ್‌ಆರ್‌ಟಿಸಿ ಟೆಂಡರ್್ನಲ್ಲಿ ಆಯ್ಕೆಯಾದ ಸಲಹೆಗಾರರು ಸ್ಥಳ ಪರಿಶೀಲನೆ, ಸಂಚಾರದ ಚಟುವಟಿಕೆ ವಿಶ್ಲೇಷಣೆ, ಮಾರುಕಟ್ಟೆ ಅಗತ್ಯತೆಯ ಮುನ್ಸೂಚನೆ, ಪರಿಸರ ಹಾಗೂ ಸಾಮಾಜಿಕ ಪರಿಣಾಮಗಳ ಅಧ್ಯಯನದೊಂದಿಗೆ ಕಾರ್ಯಸಾಧ್ಯತಾ ವರದಿಯನ್ನು (DFR) ಸಿದ್ದಪಡಿಸಬೇಕು.

ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್ ನ್ಯೂಸ್: ಯಶವಂತಪುರದಿಂದ ಹೊರಡುವ ಈ ವಂದೇ ಭಾರತ್ ರೈಲಿಗೆ ಹೆಚ್ಚುವರಿ ಬೋಗಿಗಳು

ಒಟ್ಟಿನಲ್ಲಿ ಸರ್ಕಾರ ಈಗಲಾದರೂ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಕಾಯಕಲ್ಪ ನೀಡತ್ತಿರುವುದು ಸಂತಸದ ವಿಷಯ. ಜೊತೆಗೆ ಈ ಬಸ್ ಸ್ಟಾಂಡ್ ಸಾರಿಗೆ ಹಬ್ ಆದರೆ ಲಕ್ಷಾಂತರ ಪ್ರಯಾಣಿಕರಿಗೆ ಸಹಾಯವಾಗುವುದಂತೂ ಸುಳ್ಳಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ