ಮಗಳಿಗೆ ಗಾಳ, ಅಮ್ಮನಿಗೆ ಬೆಂಕಿ: ತಲೆಮರೆಸಿಕೊಂಡಿದ್ದ ಆಸಾಮಿ ಅಂದರ್

ವ್ಯಕ್ತಿಯೋರ್ವ ಅಮ್ಮನ ಜೊತೆ ಸಲುಗೆ ಬೆಳೆಸಿ ಮಗಳಿಗೆ ಗಾಳ ಹಾಕಿದ್ದ. ವಯಸ್ಸಿಗೆ ಬಂದ‌ ಹುಡುಗಿಯನ್ನ ಮದುವೆ ಮಾಡಿಕೊಂಡು ಎಂದು ಬಲವಂತ ಮಾಡುತ್ತಿದ್ದ. ಆದರೆ ಒಪ್ಪದಿದ್ದಾಗ ತಾಯಿಗೆ ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದ. ಸದ್ಯ ಬಸವೇಶ್ವರ ನಗರ ಪೊಲೀಸರು ಕಿಡಿಗೇಡಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಮಗಳಿಗೆ ಗಾಳ, ಅಮ್ಮನಿಗೆ ಬೆಂಕಿ: ತಲೆಮರೆಸಿಕೊಂಡಿದ್ದ ಆಸಾಮಿ ಅಂದರ್
ತಾಯಿ ಗೀತಾ, ಬಂಧಿತ ವ್ಯಕ್ತಿ

Updated on: Dec 29, 2025 | 9:05 PM

ಬೆಂಗಳೂರು, ಡಿಸೆಂಬರ್​ 29: ಪುತ್ರಿಯನ್ನು ಮದುವೆ ಮಾಡಿಕೊಡಲಿಲ್ಲವೆಂಬ ಕಾರಣಕ್ಕೆ ಆಕೆಯ ತಾಯಿಗೆ ವ್ಯಕ್ತಿಯೋರ್ವ ಬೆಂಕಿ (fire) ಹಚ್ಚಿರುವಂತಹ ಘಟನೆ ಬೆಂಗಳೂರಿನ ಬಸವೇಶ್ವರ ನಗರದ ಭೋವಿ ಕಾಲೋನಿಯಲ್ಲಿ ನಡೆದಿದೆ. ಗೀತಾ ಮೃತ ಮಹಿಳೆ. ಮುತ್ತು ಅಭಿಮನ್ಯು ಬೆಂಕಿ ಹಚ್ಚಿದ ವ್ಯಕ್ತಿ. ಸದ್ಯ ಆರೋಪಿ ಮುತ್ತು ಅಭಿಮನ್ಯುವನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ (Arrested). ಇನ್ನು ಗೀತಾ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಮಗಳನ್ನ ಮದುವೆ ಮಾಡಿಕೊಡು ಅಂತ ತಾಯಿಗೆ ಬೆಂಕಿ ಹಾಕಿದ್ದ ಕಿರಾತಕ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಕಳೆದ ಮಂಗಳವಾರ ಬಸವೇಶ್ವರ ನಗರದ ಭೋವಿ ಕಾಲೋನಿಯ ಮನೆಯಲ್ಲಿ ದುರ್ಘಟನೆ ನಡೆದಿತ್ತು. ಈ ಮನೆಯಲ್ಲಿ ವಾಸವಾಗಿದ್ದ ಗೀತಾಗೆ ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದ ಮುತ್ತು ಅಭಿಮನ್ಯು ಎಂಬಾತನೇ ಸೆರೆಸಿಕ್ಕಿರುವ ಆರೋಪಿ.

ಇದನ್ನೂ ಓದಿ: ಜವರಾಯನ ಅಟ್ಟಹಾಸಕ್ಕೆ ನಡುರಸ್ತೆಯಲ್ಲೇ ಪ್ರಾಣಬಿಟ್ಟ ಬಾವ-ಬಾಮೈದ: ಆಗಿದ್ದೇನು?

ಅನೇಕ ವರ್ಷಗಳ ಹಿಂದೆ ಗೀತಾ ಗಂಡ ಸಾವನ್ನಪ್ಪಿದ್ದರು. ಬಳಿಕ ಬಸವೇಶ್ವರ ನಗರದ ಭೋವಿ ಕಾಲೋನಿಯಲ್ಲಿ ತನ್ನ 19 ವರ್ಷದ ಮಗಳ ಜೊತೆ ವಾಸವಾಗಿದ್ದರು. ಪ್ರಾವಿಜನ್‌ ಸ್ಟೋರ್‌ ಇಟ್ಕೊಂಡಿದ್ದ ಗೀತಾರಿಗೆ ಅನೇಕ ವರ್ಷಗಳಿಂದ ಟೀ ಅಂಗಡಿ ಇಟ್ಕೊಂಡಿದ್ದ ಮುತ್ತು ಪರಿಚಯವಾಗಿತ್ತು. ಗೀತಾ ಮನೆಯಲ್ಲಿ ಒಬ್ಬನಾಗಿದ್ದ ಮುತ್ತು ತಾಯಿ ಮತ್ತು ಮಗಳ ಜೊತೆ ಸಲುಗೆಯಿಂದ ಇದ್ದ. ಆದರೆ ಗೀತಾ ಮಗಳ ಮೇಲೆ ಮುತ್ತುಗೆ ಪ್ರೇಮಾಂಕುರವಾಗಿ ಆಕೆಯನ್ನ ಮದುವೆ ಮಾಡಿಕೊಡುವಂತೆ ತಾಯಿ ಗೀತಾಗೆ ಬೆನ್ನುಬಿದ್ದಿದ್ದ.

ಇದನ್ನೂ ಓದಿ: ನೆಲಮಂಗಲ: ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್, ಕಾರಿನಲ್ಲಿದ್ದ ಕುಟುಂಬ ಪವಾಡಸದೃಶ ಪಾರು

ಗೀತಾಗೆ ಇದು ಇಷ್ಟ ಇರದಿದ್ದರೂ ಮುತ್ತು ಪದೇ ಪದೇ ಬಲವಂತ ಮಾಡಿದ್ರಿಂದ ಮನೆಯಲ್ಲಿ ಗಲಾಟೆ ಆಗ್ತಿತ್ತು. ಕೊನೆಗೆ ಮನೆಯಲ್ಲಿ ಮಲಗಿದ್ದ ಗೀತಾಗೆ ಬೆಂಕಿ ಹಾಕಿದ್ದ ಮುತ್ತು ತಮಿಳುನಾಡಿಗೆ ಎಸ್ಕೇಪ್ ಆಗಿದ್ದ.‌ ಸದ್ಯ ಬಸವೇಶ್ವರ ನಗರ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಹೇಳಿದ್ದಿಷ್ಟು

ಇನ್ನು ಘಟನೆ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಹೇಳಿಕೆ ನೀಡಿದ್ದು, ಮಂಜುನಾಥ ನಗರದಲ್ಲಿ ಮಹಿಳೆಗೆ ಓರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಮಗಳನ್ನ ಮದುವೆ ಮಾಡಿಕೊಡುವಂತೆ ಕೇಳಿದ್ದಾನೆ. ಆದರೆ ಮಹಿಳೆ ಅದಕ್ಕೆ ಒಪ್ಪಿಕೊಂಡಿಲ್ಲ. ಅದೇ ಸಿಟ್ಟಿನಿಂದ ಬೆಂಕಿ ಹಚ್ಚಿದ್ದಾನೆ. ಆರೋಪಿ ಟೀ ಅಂಗಡಿ ಇಟ್ಟುಕೊಂಡಿದ್ದ. ಮಹಿಳೆ ಪ್ರಾವಿಜನ್‌ ಸ್ಟೋರ್‌ ಇಟ್ಟುಕೊಂಡಿದ್ದರು. ಮಹಿಳೆಯ ಮಗಳು ಮದುವೆ ಆಗಿ ಗಂಡನಿಂದ ದೂರವಾಗಿದ್ದರು. ಹಾಗಾಗಿ ಮದುವೆ ಮಾಡಿ ಕೊಡುವಂತೆ ಕೇಳಿದ್ದ. ಆರೋಪಿ ಮಹಿಳೆ ಮನೆಗೆ ಬಂದು ಹೋಗುತ್ತಿದ್ದ. ಹೀಗಾಗಿ ಎಲ್ಲರೂ ಪರಿಚಯಸ್ಥರೇ, ಆತ್ಮೀಯವಾಗಿದ್ದರು.

ವರದಿ: ಪ್ರದೀಪ್ ಚಿಕ್ಕಾಟಿ. tv9, ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.