Bengaluru Metro: ಸರ್ಜಾಪುರದಿಂದ ಹೆಬ್ಬಾಳಕ್ಕೆ ನಮ್ಮ ಮೆಟ್ರೋ ಸಂಪರ್ಕ ಯೋಜನೆ, ಡಿಪಿಆರ್ ಸಿದ್ಧ; ನಿಲ್ದಾಣಗಳ ಮಾಹಿತಿ ಇಲ್ಲಿದೆ

| Updated By: Rakesh Nayak Manchi

Updated on: Jan 18, 2024 | 11:14 AM

ಬೆಂಗಳೂರು ಮೆಟ್ರೋ 3ನೇ ಹಂತದ ಯೋಜನೆಗೆ ವಿಸ್ತೃತ ಯೋಜನಾ ವರದಿ ಸಿದ್ಧವಾಗಿದೆ. ಸರ್ಜಾಪುರದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ ಒಟ್ಟು 37 ಕಿಮೀ ಉದ್ದದ ಮೆಟ್ರೋ ವಿಸ್ತರಣೆ ಯೋಜನೆಗೆ 16,543 ಕೋಟಿ ರೂ. ಆಗಲಿದೆ ಎಂದು ಅಂದಾಜು ಹಾಕಲಾಗಿದೆ. ಅಲ್ಲದೆ, ಒಟ್ಟು 28 ಕಡೆಗಳಲ್ಲಿ ನಿಲ್ದಾಣಗಳು ಇರಲಿರುವುದರಿಂದ ಸಾರ್ವಜನಿಕರಿಗೆ ಅದರಲ್ಲೂ ವೃತ್ತಿಪರರಿಗೆ ಅನುಕೂಲವಾಗಲಿದೆ.

Bengaluru Metro: ಸರ್ಜಾಪುರದಿಂದ ಹೆಬ್ಬಾಳಕ್ಕೆ ನಮ್ಮ ಮೆಟ್ರೋ ಸಂಪರ್ಕ ಯೋಜನೆ, ಡಿಪಿಆರ್ ಸಿದ್ಧ; ನಿಲ್ದಾಣಗಳ ಮಾಹಿತಿ ಇಲ್ಲಿದೆ
ನಮ್ಮ ಮೆಟ್ರೋ
Follow us on

ಬೆಂಗಳೂರು, ಜ.18: ನಮ್ಮ ಮೆಟ್ರೋ (Bengaluru Metro) 3ನೇ ಹಂತದ ಯೋಜನೆಗೆ ವಿಸ್ತೃತ ಯೋಜನಾ ವರದಿ (DPR) ಸಿದ್ಧವಾಗಿದೆ. ಸರ್ಜಾಪುರದಿಂದ ಹೆಬ್ಬಾಳಕ್ಕೆ (Sarjapur-Hebbal) ಸಂಪರ್ಕ ಕಲ್ಪಿಸುವ ಒಟ್ಟು 37 ಕಿಮೀ ಉದ್ದದ ಮೆಟ್ರೋ ವಿಸ್ತರಣೆ ಯೋಜನೆಗೆ 16,543 ಕೋಟಿ ರೂ. ಆಗಲಿದೆ ಎಂದು ಅಂದಾಜು ಹಾಕಲಾಗಿದೆ. ಅಲ್ಲದೆ, ಒಟ್ಟು 28 ಕಡೆಗಳಲ್ಲಿ ನಿಲ್ದಾಣಗಳು ಇರಲಿರುವುದರಿಂದ ಸಾರ್ವಜನಿಕರಿಗೆ ಅದರಲ್ಲೂ ವೃತ್ತಿಪರರಿಗೆ ಅನುಕೂಲವಾಗಲಿದೆ.

ಸರ್ಜಾಪುರ-ಹೆಬ್ಬಾಳ ಮೆಟ್ರೋ ಮಾರ್ಗವು ಅಗರ, ಕೋರಮಂಗಲ, ಡೇರಿ ವೃತ್ತದ ಮೂಲಕ ಹಾದುಹೋಗಲಿದೆ. ಈ ಮೆಟ್ರೋ ರೈಲು ಮಾರ್ಗದಿಂದಾಗಿ ಬಸವೇಶ್ವರ ವೃತ್ತ ಹಾಗೂ ಹೆಬ್ಬಾಳ ನಡುವೆ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಲಿದೆ. ಬಸವೇಶ್ವರ ವೃತ್ತ, ಬೆಂಗಳೂರು ಗಾಲ್ಫ್ ಕೋರ್ಸ್, ಪ್ಯಾಲೇಸ್ ಗುಟ್ಟಹಳ್ಳಿ, ಮೇಖ್ರಿ ಸರ್ಕಲ್, ಪಶು ವೈದ್ಯಕೀಯ ಕಾಲೇಜು, ಗಂಗಾನಗರ ಮತ್ತು ಹೆಬ್ಬಾಳದದಲ್ಲಿ ಏಳು ನಿಲ್ದಾಣಗಳು ತಲೆಎತ್ತಲಿವೆ ಎಂದು ಬಿಎಂಆರ್​ಸಿಎಲ್ ಮೂಲಗಳಿಂದ ಮಾಹಿತಿ ತಿಳಿದುಬಂದಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ನೀಲಿ, ಗುಲಾಬಿ, ನೇರಳೆ ಮತ್ತು 3ನೇ ಹಂತದ ಮಾರ್ಗವು ಪರಸ್ಪರ ಸಂಪರ್ಕ ಕಲ್ಪಿಸುವುದು ವಿಶೇಷವಾಗಿದೆ. ಇಬ್ಬಧಿಲೂರು ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಿಂದ ಪ್ರಾರಂಭವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನೀಲಿ ಮಾರ್ಗವಾಗಿ ಗುಲಾಬಿ ಮಾರ್ಗದ ಡೇರಿ ಸರ್ಕಲ್‌ಗೆ ಸಂಪರ್ಕಿಸಲಿದೆ.

ಇದನ್ನೂ ಓದಿ: Namma Metro: ಬೆಂಗಳೂರು ಮೆಟ್ರೋದಿಂದ ಮಹಿಳಾ ಪ್ರಯಾಣಿಕರಿಗೆ ಗುಡ್​​ನ್ಯೂಸ್: ಒಂದಲ್ಲ ಎರಡು ಬೋಗಿ ಮೀಸಲು

ಕೆಆರ್‌ ವೃತ್ತದ ಬಳಿ ಉದ್ದೇಶಿಸಲಾದ ನಿಲ್ದಾಣವು ನೇರಳೆ ಮಾರ್ಗದ ಸರ್‌ ಎಂ. ವಿಶ್ವೇಶ್ವರಯ್ಯ ನಿಲ್ದಾಣದೊಂದಿಗೆ ಸಂಪರ್ಕ ಕಲ್ಪಿಸಲಿದ್ದು, ಹೆಬ್ಬಾಳದ ಬಳಿ ಇದು ನೀಲಿ ಮಾರ್ಗ ಮತ್ತು ಹಂತ 3 ಎ (ಕೆಂಪಾಪುರದಿಂದ ಜೆಪಿ ನಗರ) ಮತ್ತು ಉಪನಗರ ರೈಲು ನಿಲ್ದಾಣಕ್ಕೆ (ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ) ಸಂಪರ್ಕ ಕಲ್ಪಿಸುತ್ತದೆ.

3ನೇ ಹಂತದ ಮೆಟ್ರೋ ಮಾರ್ಗ ಯೋಜನೆಯನ್ನು 2022-23ನೇ ಸಾಲಿನ ಬಜೆಟ್‌ ಮಂಡನೆ ವೇಳೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದರು. ಮುಂಬೈ ಮೂಲದ ಕಂಪನಿಗೆ ಇದರ ಡಿಪಿಆರ್ ಸಿದ್ಧಪಿಡಿಸಲು ಸೂಚಿಸಲಾಗಿತ್ತು.

ಬಳ್ಳಾರಿ ರಸ್ತೆಯಲ್ಲಿನ ಸಂಚಾರ ದಟ್ಟಣೆಯನ್ನು ನಿವಾರಿಸಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೈಸ್ಪೀಡ್ ರೈಲು ಸಂಪರ್ಕ ಮತ್ತು ವಿವಾದಿತ ಸ್ಟೀಲ್ ಬ್ರಿಡ್ಜ್ ಯೋಜನೆಯಂತಹ ವಿವಿಧ ಯೋಜನೆಗಳನ್ನು ಸರ್ಕಾರ ರೂಪಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಸದ್ಯ, ಸರ್ಜಾಪುರ-ಹೆಬ್ಬಾಳ ಮೆಟ್ರೋ ಮಾರ್ಗವು ಟ್ರಾಫಿಕ್ ನಿಯಂತ್ರಣಕ್ಕೆ ಸಹಕಾರಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:13 am, Thu, 18 January 24